ಬೆಂಗಳೂರು : ಕಾಲುದಾರಿ ಹಾಗೂ ಬಂಡಿದಾರಿ ಸಾರ್ವಜನಿಕರ ಹಕ್ಕು, ಇದನ್ನು ಸಾರ್ವಜನಿಕರ ಬಳಕೆಗೆ ಬಿಟ್ಟುಕೊಡಬೇಕು ಎಂದು ಹೈಕೋರ್ಟ್ ಆದೇಶ ಹೊರಡಿಸಿದೆ.
ಒತ್ತುವರಿ ಮಾಡಿರುವ ಕಾಲುದಾರಿ ಜಾಗವನ್ನು ಸಾರ್ವಜನಿಕರ ಹಕ್ಕು. ಅದನ್ನು ಬಳಕೆಗೆ ಬಿಟ್ಟುಕೊಡಬೇಕು ಎಂದು ಗುಬ್ಬಿ ತಾಲೂಕಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ ಹೈಕೋರ್ಟ್ ಸೂಚನೆ ನೀಡಿದೆ.
ಕಾಲುದಾರಿ ಜಾಗವನ್ನು ಬಿಟ್ಟುಕೊಡಲು ಸೂಚಿಸಿ ಸ್ಥಳೀಯ ತಹಶೀಲ್ದಾರ್ ನೀಡಿದ್ದ ನೋಟಿಸ್ ಪ್ರಶ್ನಿಸಿ ಗುಬ್ಬಿ ತಾಲೂಕು ಎಪಿಎಂಸಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದ ರಾಜು ಅವರ ಪೀಠ ಈ ಸೂಚನೆ ನೀಡಿದೆ.


