HomeLatest Newsಸಂಜೆ ಹೊತ್ತಿನ ಸ್ನಾಕ್ಸ್‌ಗೆ ಬೆಸ್ಟ್ ಪಾವ್ ಭಾಜಿ ಸ್ಯಾಂಡ್‌ವಿಚ್: ಅತಿ ಸುಲಭವಾಗಿ ಮಾಡುವ ವಿಧಾನ ಇಲ್ಲಿದೆ

ಸಂಜೆ ಹೊತ್ತಿನ ಸ್ನಾಕ್ಸ್‌ಗೆ ಬೆಸ್ಟ್ ಪಾವ್ ಭಾಜಿ ಸ್ಯಾಂಡ್‌ವಿಚ್: ಅತಿ ಸುಲಭವಾಗಿ ಮಾಡುವ ವಿಧಾನ ಇಲ್ಲಿದೆ

ಸದಾ ಒಂದೇ ರೀತಿಯ ಉಪಾಹಾರ ಸೇವಿಸಿ ಬೇಸರವಾಗಿದ್ದರೆ ಅಥವಾ ಸಂಜೆ ಹೊತ್ತು ಬಿಸಿಬಿಸಿಯಾಗಿ ಏನಾದರೂ ಚಟಪಟ ಅಂತ ತಿನ್ನಬೇಕು ಅನ್ನಿಸಿದರೆ ಪಾವ್ ಭಾಜಿ ಸ್ಯಾಂಡ್‌ವಿಚ್ ಅತ್ಯುತ್ತಮ ಆಯ್ಕೆ. ಪಾವ್ ಭಾಜಿ ಮಾಡುವ ಅಷ್ಟೇ ರುಚಿಯನ್ನು ಅತಿ ಕಡಿಮೆ ಶ್ರಮದಲ್ಲಿ ಈ ಸ್ಯಾಂಡ್‌ವಿಚ್ ನೀಡುತ್ತದೆ. ಮಸಾಲೆ ಭರಿತ ಆಲೂಗಡ್ಡೆ ಮಿಶ್ರಣ ಮತ್ತು ಚೀಸ್ ಸೇರಿಸಿ ಮಾಡುವ ಈ ಸ್ಯಾಂಡ್‌ವಿಚ್ ಮಕ್ಕಳಿಗೆ ಹಾಗೂ ದೊಡ್ಡವರಿಗೆ ಇಬ್ಬರಿಗೂ ಇಷ್ಟವಾಗುತ್ತದೆ.

ಬೇಕಾಗುವ ಸಾಮಗ್ರಿಗಳು:

  • ಬೇಯಿಸಿದ ಆಲೂಗಡ್ಡೆ – 4
  • ಈರುಳ್ಳಿ – 1 (ಸಣ್ಣದಾಗಿ ಹೆಚ್ಚಿದ್ದು)
  • ಟೊಮೆಟೊ – 2 (ತುರಿದದ್ದು)
  • ದಪ್ಪ ಮೆಣಸಿನಕಾಯಿ (ಕ್ಯಾಪ್ಸಿಕಂ) – 1
  • ಹಸಿಮೆಣಸಿನಕಾಯಿ – 4
  • ಶುಂಠಿ ಬೆಳ್ಳುಳ್ಳಿ ಪೇಸ್ಟ್ – 1 ಚಮಚ
  • ಕೊತ್ತಂಬರಿ ಸೊಪ್ಪು – ಅರ್ಧ ಕಪ್
  • ಅಚ್ಚ ಖಾರದ ಪುಡಿ – 1 ಚಮಚ
  • ಚಾಟ್ ಮಸಾಲ – 1 ಚಮಚ
  • ಪಾವ್ ಭಾಜಿ ಮಸಾಲ – 1 ಚಮಚ
  • ಬೆಣ್ಣೆ – ಅಗತ್ಯಕ್ಕೆ ತಕ್ಕಷ್ಟು
  • ಚೀಸ್ ಕ್ಯೂಬ್ಸ್ – 4
  • ಬ್ರೆಡ್ ಸ್ಲೈಸ್ – 10
  • ರುಚಿಗೆ ತಕ್ಕಷ್ಟು ಉಪ್ಪು
  • ಅಲಂಕಾರಕ್ಕಾಗಿ ಓಂ ಪುಡಿ ಅಥವಾ ಶೇವ್ (ಸೇವ್)

ಮಾಡುವ ವಿಧಾನ:

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ
  1. ಮೊದಲು ಬೇಯಿಸಿದ ಆಲೂಗಡ್ಡೆಯನ್ನು ಚೆನ್ನಾಗಿ ಮ್ಯಾಶ್ ಮಾಡಿ ಅಥವಾ ತುರಿದು ಪಕ್ಕಕ್ಕೆ ಇಟ್ಟುಕೊಳ್ಳಿ.
  2. ಒಂದು ಬಾಣಲೆಯಲ್ಲಿ ಒಂದು ಚಮಚ ಬೆಣ್ಣೆ ಹಾಕಿ ಬಿಸಿ ಮಾಡಿ. ಅದಕ್ಕೆ ಶುಂಠಿ ಬೆಳ್ಳುಳ್ಳಿ ಪೇಸ್ಟ್, ಹಸಿಮೆಣಸಿನಕಾಯಿ ಮತ್ತು ಈರುಳ್ಳಿ ಹಾಕಿ ಎರಡು ನಿಮಿಷ ಹುರಿಯಿರಿ.
  3. ನಂತರ ಹೆಚ್ಚಿದ ಕ್ಯಾಪ್ಸಿಕಂ, ಟೊಮೆಟೊ ಪೇಸ್ಟ್, ಖಾರದ ಪುಡಿ ಮತ್ತು ಪಾವ್ ಭಾಜಿ ಮಸಾಲ ಸೇರಿಸಿ ಸ್ವಲ್ಪ ಹೊತ್ತು ಬಾಡಿಸಿ.
  4. ಈಗ ತುರಿದ ಆಲೂಗಡ್ಡೆ, ಕೊತ್ತಂಬರಿ ಸೊಪ್ಪು ಮತ್ತು ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಈಗ ಪಾವ್ ಭಾಜಿ ಸ್ಯಾಂಡ್‌ವಿಚ್‌ಗೆ ಬೇಕಾದ ಮಸಾಲೆ ಸಿದ್ಧವಾಯಿತು.
  5. ಈ ಮಿಶ್ರಣ ಸ್ವಲ್ಪ ತಣ್ಣಗಾದ ಮೇಲೆ ಬ್ರೆಡ್ ಸ್ಲೈಸ್‌ಗಳಿಗೆ ಬೆಣ್ಣೆ ಹಚ್ಚಿ ಅದರ ಮೇಲೆ ತಯಾರಿಸಿದ ಮಸಾಲೆಯನ್ನು ಹರಡಿ. ಅದರ ಮೇಲೆ ಸ್ವಲ್ಪ ಚೀಸ್ ತುರಿ ಮತ್ತು ಚಾಟ್ ಮಸಾಲ ಉದುರಿಸಿ ಮತ್ತೊಂದು ಬ್ರೆಡ್ ಸ್ಲೈಸ್‌ನಿಂದ ಮುಚ್ಚಿ.
  6. ಸಿದ್ಧಪಡಿಸಿದ ಈ ಬ್ರೆಡ್ ಅನ್ನು ಗ್ರಿಲ್ ಅಥವಾ ತವಾ ಮೇಲೆ ಹಾಕಿ ಎರಡೂ ಬದಿ ಕೆಂಪಾಗುವವರೆಗೆ ಸ್ವಲ್ಪ ಬೆಣ್ಣೆ ಹಚ್ಚಿ ಬೇಯಿಸಿ.
  7. ಸ್ಯಾಂಡ್‌ವಿಚ್ ಗರಿಗರಿಯಾದ ಮೇಲೆ ಮೇಲೆ ಸ್ವಲ್ಪ ಓಂ ಪುಡಿ (ಶೇವ್) ಉದುರಿಸಿ ಸರ್ವ್ ಮಾಡಿ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular