HomeLatest Newsಪ್ರಯಾಣಿಕರೇ ಗಮನಿಸಿ: ವಂದೇ ಭಾರತ್ ಸೇರಿದಂತೆ ಹಲವು ರೈಲು ಸಂಚಾರ ರದ್ದು

ಪ್ರಯಾಣಿಕರೇ ಗಮನಿಸಿ: ವಂದೇ ಭಾರತ್ ಸೇರಿದಂತೆ ಹಲವು ರೈಲು ಸಂಚಾರ ರದ್ದು

ಬೆಂಗಳೂರು: ದೇವರಗುಡ್ಡ – ಬ್ಯಾಡಗಿ ನಡುವಿನ ಲೆವೆಲ್ ಕ್ರಾಸಿಂಗ್ ನಲ್ಲಿ ಕಾಮಗಾರಿ ನಡೆಯುವ ಹಿನ್ನೆಲೆಯಲ್ಲಿ ಜ.17ರಂದು ಬೆಳಗಾವಿ-ಕೆಎಸ್‌ಆರ್‌ ಬೆಂಗಳೂರು ವಂದೇ ಭಾರತ್ ಎಕ್ಸ್‌ಪ್ರೆಸ್(26751) ಸೇರಿ ಬೆಂಗಳೂರು- ಹುಬ್ಬಳ್ಳಿ ನಡುವೆ ಹಲವು ರೈಲುಗಳ ಸಂಚಾರ ರದ್ದಾಗಲಿದೆ.

ಫೆ.16 ರಂದು ಎಸ್‌ಎಸ್‌ಎಸ್ ಹುಬ್ಬಳ್ಳಿ-ಅರಸೀಕೆರೆ ಎಕ್ಸ್‌ಪ್ರೆಸ್(16214) ರದ್ದಾಗಲಿದೆ. ಫೆ.17 ರಂದು ಅರಸೀಕೆರೆ-ಎಸ್‌ಎಸ್‌ಎಸ್‌ ಹುಬ್ಬಳ್ಳಿ ಎಕ್ಸ್‌ಪ್ರೆಸ್(16213), ಕೆಎಸ್‌ಆರ್‌ ಬೆಂಗಳೂರು-ಎಸ್‌ಎಸ್ಎಸ್ ಹುಬ್ಬಳ್ಳಿ ಜನಶತಾಬ್ದಿ ಎಕ್ಸ್‌ಪ್ರೆಸ್‌(12079), ಎಸ್ಎಸ್ಎಸ್ ಹುಬ್ಬಳ್ಳಿ – ಕೆಎಸ್ಆರ್‌ ಬೆಂಗಳೂರು ಜನಶತಾಬ್ದಿ ಎಕ್ಸ್‌ಪ್ರೆಸ್(12080), ಬೆಳಗಾವಿ- ಕೆಎಸ್‌ಆರ್ ಬೆಂಗಳೂರು ವಂದೇ ಭಾರತ್ ಎಕ್ಸ್‌ಪ್ರೆಸ್(26751), ಬೆಂಗಳೂರು-ಬೆಳಗಾವಿ ವಂದೇ ಭಾರತ್ ಎಕ್ಸ್‌ಪ್ರೆಸ್(26752), ಹುಬ್ಬಳ್ಳಿ- ಚಿತ್ರದುರ್ಗ ಎಕ್ಸ್‌ಪ್ರೆಸ್(17347) ಚಿತ್ರದುರ್ಗ-ಹುಬ್ಬಳ್ಳಿ ಎಕ್ಸ್‌ಪ್ರೆಸ್ (17348) ರೈಲುಗಳ ಸಂಚಾರ ರದ್ದಾಗಲಿದೆ.

ಫೆ. 16 ರಂದು ವಾಸ್ಕೊಡ ಗಾಮಾ-ಯಶವಂತಪುರ ಎಕ್ಸ್‌ಪ್ರೆಸ್(17310) ಎಸ್‌ಎಸ್ಎಸ್ ಹುಬ್ಬಳ್ಳಿ-ಯಶವಂತಪುರ ನಡುವಿನ ಮಾರ್ಗದಲ್ಲಿ ಭಾಗಶಃ ರದ್ದುಪಡಿಸಲಾಗುತ್ತದೆ. ಈ ರೈಲು ಎಸ್‌ಎಸ್‌ಎಸ್ ಹುಬ್ಬಳ್ಳಿಯಲ್ಲಿ ಸಂಚಾರ ಕೊನೆಗೊಳ್ಳಲಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಫೆ. 17 ರಂದು ಯಶವಂತಪುರ-ವಾಸ್ಕೊ ಡ ಗಾಮಾ ಎಕ್ಸ್‌ಪ್ರೆಸ್(17309) ಯಶವಂತಪುರ-ಎಸ್‌ಎಸ್‌ಎಸ್ ಹುಬ್ಬಳ್ಳಿ ಮಾರ್ಗದಲ್ಲಿ ಭಾಗಶಃ ರದ್ದಾಗುತ್ತಿದೆ. ಈ ರೈಲು ಯಶವಂತಪುರದ ಬದಲಾಗಿ ಎಸ್‌ಎಸ್‌ಎಸ್ ಹುಬ್ಬಳ್ಳಿ ಯಿಂದ ನಿಗದಿತ ಸಮಯಕ್ಕೆ ಪ್ರಯಾಣ ಆರಂಭಿಸಲಿದೆ. ಧಾರವಾಡ-ಕೆಎಸ್‌ಆರ್ ಬೆಂಗಳೂರು ಎಕ್ಸ್‌ಪ್ರೆಸ್ (12726) ಧಾರವಾಡ-ಹರಿಹರ ನಡುವಿನ ಮಾರ್ಗದಲ್ಲಿ ಭಾಗಶಃ ರದ್ದುಪಡಿಸಲಾಗುತ್ತದೆ. ಈ ರೈಲು ಧಾರವಾಡದ ಬದಲಾಗಿ ಹರಿಹರದಿಂದ ತನ್ನ ನಿಗದಿತ ಸಮಯಕ್ಕೆ ಪ್ರಯಾಣ ಆರಂಭಿಸಲಿದೆ ಎಂದು ಹೇಳಲಾಗಿದೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular