HomeKarnatakaಪ್ರಯಾಣಿಕರೇ ಎಚ್ಚರ : ರೈಲುಗಳಲ್ಲಿ ದಹನಕಾರಿ ವಸ್ತುಗಳನ್ನು ಸಾಗಿಸಿದ್ರೆ 3 ವರ್ಷ ಜೈಲು ಶಿಕ್ಷೆ, 1000...

ಪ್ರಯಾಣಿಕರೇ ಎಚ್ಚರ : ರೈಲುಗಳಲ್ಲಿ ದಹನಕಾರಿ ವಸ್ತುಗಳನ್ನು ಸಾಗಿಸಿದ್ರೆ 3 ವರ್ಷ ಜೈಲು ಶಿಕ್ಷೆ, 1000 ರೂ. ದಂಡ

ಶಿವಮೊಗ್ಗ :ದೀಪಾವಳಿ ಹಬ್ಬ, ಹರಿದಿನಗಳು ಮತ್ತು ಇತ್ತೀಚಿನ ಅಗ್ನಿ ಅವಘಡಗಳನ್ನು ಗಮನದಲ್ಲಿಟ್ಟುಕೊಂಡು ರೈಲ್ವೆ ಮಂಡಳಿ, ನವದೆಹಲಿ ಮತ್ತು ಆರ್ಪಿಎಫ್ ಹೆಡ್ ಕ್ವಾರ್ಟರ್ಸ್ನ ನಿರ್ದೇಶನದಂತೆ ದಹಿಸುವ ವಸ್ತುಗಳನ್ನು ಸಾಗಿಸುವುದರ ವಿರುದ್ಧ ವಿಶೇಷ ಡ್ರೈವ್ ಮತ್ತು ಸಾಮಾನ್ಯ ಜಾಗೃತಿಯನ್ನು ಇಂದು ಶಿವಮೊಗ್ಗ ರೈಲ್ವೇ ಸ್ಟೇಷನ್ನಲ್ಲಿ ಪೋಸ್ಟ್ ಕಮಾಂಡರ್, ರೈಲ್ವೆ ಪ್ರೊಟೆಕ್ಷನ್ ಫೋರ್ಸ್ ಶಿವಮೊಗ್ಗ ಇವರ ವತಿಯಿಂದ ಆಯೋಜಿಸಲಾಗಿದೆ.

ರೈಲುಗಳಲ್ಲಿ ಅಥವಾ ರೈಲ್ವೇ ಆವರಣದಲ್ಲಿ ಯಾವುದೇ ದಹನಕಾರಿ ವಸ್ತುಗಳು, ಪಟಾಕಿಗಳನ್ನು ಕೊಂಡೊಯ್ಯದಂತೆ ತಿಳಿವಳಿಕೆ ಮೂಡಿಸುವ ಮೂಲಕ ರೈಲು ನಿಲ್ದಾಣ ಮತ್ತು ರೈಲುಗಳಲ್ಲಿ ಪ್ರಯಾಣಿಕರಿಗೆ ಅರಿವು ಮೂಡಿಸಲಾಯಿತು.

ರೈಲುಗಳಲ್ಲಿ ಪಟಾಕಿ , ಸಿಲೆಂಡರ್ ಗ್ಯಾಸ್ ಇತರೆ ದಹನಕಾರಿ ವಸ್ತುಗಳನ್ನು ಸಾಗಿಸುವುದು ಕಂಡು ಬಂದರೆ ರೈಲ್ವೇ ಕಾಯ್ದೆ 164 ವಿಧಿಯ ಪ್ರಕಾರ 3 ವರ್ಷ ಜೈಲು ಶಿಕ್ಷೆ ಅಥವಾ ರೂ.1000 ದವರೆಗೆ ದಂಡ ಅಥವಾ ಎರಡನ್ನೂ ವಿಧಿಸಲಾಗುವುದು ಎಂದು ಎಚ್ಚರಿಕೆ ನೀಡಲಾಯಿತು.ಈ ವೇಳೆ ಆರ್ಪಿಎಫ್ ಇನ್ಸ್ಪೆಕ್ಟರ್ ಬಿ ಎನ್ ಕುಬೇರಪ್ಪ, ಸಬ್ ಇನ್ಸ್ಪೆಕ್ಟರ್ ಸಂತೋಷ್ ಗಾಂವ್ಕರ್ ಹಾಗೂ ಸಿಬ್ಬಂದಿ ವರ್ಗದವರು ಹಾಜರಿದ್ದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

 

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular