BIG NEWS: ಸಂಸತ್ ಭವನದ ಸಿಬ್ಬಂದಿಗಳ ಡ್ರೆಸ್ ಕೋಡ್ ನಲ್ಲಿ ಬದಲಾವಣೆ; ವಿಶೇಷ ಅಧಿವೇಶನದಲ್ಲಿ ಹೊಸ ಸಮವಸ್ತ್ರ ಧರಿಸಲಿರುವ ಸಿಬ್ಬಂದಿಗಳು

ನವದೆಹಲಿ: ಸೆಪ್ಟೆಂಬರ್ 18ರಿಂದ ಸಂಸತ್ ವಿಶೇಷ ಅಧಿವೇಶನ ಆರಂಭವಾಗಲಿದ್ದು, ಸಂಸತ್ ಭವನದ ಸಿಬ್ಬಂದಿಗಳ ಡ್ರೆಸ್ ಕೋಡ್ ನಲ್ಲಿ ಭಾರಿ ಬದಲಾವಣೆ ಮಾಡಿ ಆದೇಶ ಹೊರಡಿಸಲಾಗಿದೆ. ಹೊಸ ಸಂಸತ್ ಭವನದ ಸಿಬ್ಬಂದಿಗಳು ಸಾಂಪ್ರದಾಯಿಕ ಭಾರತೀಯ ಸಮವಸ್ತ್ರ ಧರಿಸಲಿದ್ದಾರೆ.

ಸೆ.18ರಿಂದ ಸಂಸತ್ ವಿಶೇಷ ಅಧಿವೇಶನ ಆರಂಭವಾಗಲಿದೆ. ಸೆ.19ರಿಂದ ಹೊಸ ಸಂಸತ್ ಭವನದಲ್ಲಿ ಅಧಿವೇಶನ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಹೊಸ ಸಂಸತ್ ಭವನದಲ್ಲಿ ಸಿಬ್ಬಂದಿಗಳಿಗೆ ಹೊಸ ಡ್ರೆಸ್ ಕೋಡ್ (ವಸ್ತ್ರ ಸಂಹಿತೆ) ಜಾರಿಯಾಗಿದೆ. ಸಿಬ್ಬಂದಿಗಳಿಗೆ ಕುರ್ತಾ, ಪೈಜಾಮಾ, ಮಹಿಳಾ ಉದ್ಯೋಗಿಗಳಿಗೆ ಹೊಸ ವಿನ್ಯಾಸದ ಸೀರೆ, ಭದ್ರತಾ ಸಿಬ್ಬಂದಿಗಳಿಗೆ ಹೊಸ ಸಮವಸ್ತ್ರ, ಮಾರ್ಷಲ್ ಗಳು ಕುರ್ತಾ, ಪೈಜಾಮಾ, ಮಣಿಪುರಿ ಪೇಟ ಧರಿಸಲಿದ್ದಾರೆ.

ಅಧಿಕಾರಿಗಳು ಬಂಧಗಾಲ ಬದಲಿಗೆ ಪಿಂಕ್ ನೆಹರು ಜಾಕೆಟ್ ಧರಿಸಲಿದ್ದಾರೆ. ಕಮಲದ ಹೂ ಇರುವ ಪಿಂಕ್ ಶರ್ಟ್ ಮತ್ತು ಖಾಕಿ ಪ್ಯಾಂಟ್, ಸಫಾರಿ ಸೂಟ್ ಬದಲಿಗೆ ಮರೆ ಮಾಚುವ ಡ್ರೆಸ್ ಕೋಡ್ ಧರಿಸಲಿದ್ದಾರೆ.

ಸಂಸತ್ ಭವನದ ಸಿಬ್ಬಂದಿಗಳ ನೂತನ ಡ್ರೆಸ್ ಕೋಡ್ ಬಗ್ಗೆ ಕಾಂಗ್ರೆಸ್ ಸೇರಿದಂತೆ ವಿಪಕ್ಷಗಳು ಆಕ್ಷೇಪ ವ್ಯಕ್ತಪಡಿಸಿವೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read