HomeKarnatakaಪರಪ್ಪನ ಅಗ್ರಹಾರ ಜೈಲಿನಲ್ಲಿ ಮತ್ತೊಂದು ಘಟನೆ; ವಿಚಾರಣಾಧೀನ ಕೈದಿ ಮೇಲೆ ಮಾರಣಾಂತಿಕ ಹಲ್ಲೆ

ಪರಪ್ಪನ ಅಗ್ರಹಾರ ಜೈಲಿನಲ್ಲಿ ಮತ್ತೊಂದು ಘಟನೆ; ವಿಚಾರಣಾಧೀನ ಕೈದಿ ಮೇಲೆ ಮಾರಣಾಂತಿಕ ಹಲ್ಲೆ

ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಿನಲ್ಲಿ ಮತ್ತೊಂದು ಗಲಾಟೆ ಪ್ರಕರನ ನಡೆದಿದೆ. ಜೈಲು ಸಿಬ್ಬಂದಿ ಹಾಗೂ ಸಜಾ ಕೈದಿಗಳು ವಿಚಾರಣಾಧೀನ ಕೈದಿ ಮೇಲೆ ಹಲ್ಲೆ ನಡೆಸಿರುವ ಆರೋಪ ಕೇಳಿಬಂದಿದೆ.

ನಾಗರಾಜ್ ಹಲ್ಲೆಗೊಳಗಾದ ವಿಚಾರಣಾಧೀನ ಕೈದಿ. ನಾಗರಾಜ್ ಕೊಲೆ ಪ್ರಕರಣದ ಆರೋಪಿಯಾಗಿದ್ದು, ಮಂಡ್ಯದಿಂದ ಪರಪ್ಪನ ಅಗ್ರಹಾರ ಜೈಲಿಗೆ ಶಿಫ್ಟ್ ಆಗಿದ್ದಾನೆ.

ಸಜಾ ಕೈದಿಗಳು ವಿಚಾರಣಾ ಧೀನ ಕೈದಿಗಳಿಂದ ಕೆಲಸ ಮಾಡಿಸಿಕೊಳ್ಳುತ್ತಿದ್ದು, ಹೇಳಿದ ಕೆಲಸ ಮಾಡದಿದ್ದರೆ ಹಲ್ಲೆ ನಡೆಸುತ್ತಾರೆ. ಸುಳ್ಳು ಆರೋಪಗಳನ್ನು ಮಾಡಿ ಜೈಲು ಸಿಬ್ಬಂದಿಗಳಿಗೆ ಸುಳ್ಳು ಹೇಳಿ ಕೊಡುತ್ತಾರೆ. ಸಜಾ ಕೈದಿಗಳ ಮಾತು ಕೇಳಿ 15 ಜನ ಜೈಲು ಸಿಬ್ಬಂದಿಗಳು ನಾಗರಾಜ್ ಮೇಲೆ ಮಾರಣಂತಿಕ ಹಲ್ಲೆ ನಡೆಸಿ, ದರ್ಪ ಮೆರೆದಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಜೈಲಿನಲ್ಲಿ ತನ್ನ ಮೇಲೆ ಹಲ್ಲೆ ನಡೆಸಿರುವುದಾಗಿ ನಾಗರಾಜ್ ತನ್ನ ತಾಯಿಗೆ ಕರೆ ಮಾಡಿ ದೂರಿದ್ದಾನೆ. ಅಲ್ಲದೇ ಹಲ್ಲೆ ನಡೆದಿರುವ ಬಗ್ಗೆ ವಿಡಿಯೋ ಮಾಡಿ ವಾಟ್ಸಪ್ ಮೂಲಕ ಕಳುಹಿಸಿದ್ದು, ನಾಗರಾಜ್ ತಾಯಿ ಮಾನವ ಹಕ್ಕುಗಳ ಆಯೋಗಕ್ಕೆ ದೂರು ನೀಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular