ಪರಪ್ಪನ ಅಗ್ರಹಾರ ಜೈಲಿನಲ್ಲಿ ರೌಡಿಶೀಟರ್ ಬರ್ತ್ ಡೇ ಪಾರ್ಟಿ: ಸೇಬಿನ ಹಾರ ಹಾಕಿಕೊಂಡು ಕೇಕ್ ಕಟ್ ಮಾಡಿ ಸಂಭ್ರಮಾಚರಣೆ

ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಿನಲ್ಲಿಯೇ ರೌಡಿಶೀಟರ್ ಓರ್ವ ಭರ್ಜರಿ ಬರ್ತ್ ಡೇ ಪಾರ್ಟಿ ಮಾಡಿರುವ ಘಟನೆ ನಡೆದಿದೆ. ದರ್ಶನ್ ಪ್ರಕರಣದ ಬಳಿಕ ಜೈಲಿನಲ್ಲಿ ರಾಜಾತಿಥ್ಯಕ್ಕೆ ಬ್ರೇಕ್ ಹಾಕಲಾಗಿದೆ ಎನ್ನಲಾಗಿತ್ತು. ಆದರೆ ಇದೀಗ ರೌಡಿಶೀಟರ್ ಓರ್ವ ಜೈಲಿನಲ್ಲಿಯೇ ಹುಟ್ಟುಹಬ್ಬ ಸಂಭ್ರಮಿಸಿದ್ದು, ಸೇಬಿನ ಹಾರ ಹಾಕಿಕೊಂಡು ಕೇಕ್ ಕಟ್ ಮಾಡಿ ಹುಚ್ಚಾಟ ಮೆರೆದಿರುವುದು ಅಚ್ಚರಿ ಮೂಡಿಸಿದೆ.

ಜೈಲಿನಲ್ಲಿ ಕೈದಿಗಳ ಕಳ್ಳಾಟ ನಿಂತಿಲ್ಲ. ನಟೋರಿಯಸ್ ರೌಡಿ ಶ್ರೀನಿವಾಸ್ ಅಲಿಯಾಸ್ ಗುಬ್ಬಚ್ಚಿ ಸೀನಾ ಜೈಲಿನಲ್ಲಿ ಭರ್ಜರಿಯಾಗಿ ಬರ್ತ್ ಡೇ ಸಲೆಬ್ರೇಷನ್ ಮಾಡಿದ್ದಾನೆ. ಸೇಬಿನ ಹಾರ ಹಾಕಿಕೊಂಡು ಜೈಲಿನ ಬ್ಯಾರಕ್ ನಲ್ಲಿ ಕೇಕ್ ಕಟ್ ಮಾಡಿ ಸಂಭ್ರಮಿಸಿದ್ದಾನೆ. ರೌಡಿಶೀಟರ್ ನ ಬರ್ತ್ ಡೇ ಪಾರ್ಟಿ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

  • ಹೌದು (54%, 218 Votes)
  • ಇಲ್ಲ (33%, 133 Votes)
  • ಹೇಳಲಾಗುವುದಿಲ್ಲ (12%, 50 Votes)

Total Voters: 401

Loading ... Loading ...

Most Read