ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ʼಪಪ್ಪಾಯʼ

ಪಪ್ಪಾಯಿ ಹಣ್ಣಿನಲ್ಲಿ ಬರೀ ಪೋಷಕಾಂಶಗಳು ಮಾತ್ರವಲ್ಲ, ವ್ಯಾಧಿ ನಿಯಂತ್ರಿಸುವ ಶಕ್ತಿಯು ಅಡಗಿದೆ. ಮುಖ್ಯವಾಗಿ ಇದರಲ್ಲಿರುವ ಜಿಯೋ ಕ್ಯಾಂಟೀನ್ ಎಂಬ ಆಂಟಿ ಆಕ್ಸಿಡೆಂಟ್ ವೃದ್ಧಾಪ್ಯದ ಕಾಯಿಲೆಗಳು ಕಾಡದಂತೆ, ಆಸ್ತಮ ವ್ಯಾಧಿ ತಗುಲದಂತೆ ನೋಡಿಕೊಳ್ಳುತ್ತದೆ. ಅದರ ಜೊತೆಗೆ

* ಪಪ್ಪಾಯದಲ್ಲಿನ ಬೀಟಾ ಕೆರೋಟಿನ್ ಕಾರಣದಿಂದ ಹೆಚ್ಚು ಪಪ್ಪಾಯಿ ತಿನ್ನುವವರಲ್ಲಿ ಕ್ಯಾನ್ಸರ್ ರೋಗ ಬರುವುದಿಲ್ಲ. ಪುರುಷರಲ್ಲಿನ ಪ್ರಾಸ್ಟೇಟ್ ಕ್ಯಾನ್ಸರ್ ತೊಂದರೆಯನ್ನು ಪಪ್ಪಾಯಿ ನಿಯಂತ್ರಿಸುತ್ತದೆ.

* ಎಲುಬಿನ ಆರೋಗ್ಯಕ್ಕೆ ಅಗತ್ಯದ ವಿಟಮಿನ್ ಕೆ ಕೂಡ ಇದರಲ್ಲಿ ಹೆಚ್ಚಿದೆ.

* ಸಕ್ಕರೆ ಕಾಯಿಲೆಯಲ್ಲಿ ಸಕ್ಕರೆ ಪ್ರಮಾಣ ಏರದಿರಲು ನಾರು ಸತ್ವ ಅಗತ್ಯ. ಪಪ್ಪಾಯಿಯಲ್ಲಿ ಅದು ಬೇಕಾದಷ್ಟಿದೆ.

* ಪಪ್ಪಾಯಿಯಲ್ಲಿನ ಪಾಪೆನ್ ಎಂಬ ಎಂಜೈಮ್ ಜೀರ್ಣಕ್ರಿಯೆಗೆ ಸಹಾಯಕ. ಪೊಟ್ಯಾಶಿಯಂ ಮತ್ತು ನಾರು ಸತ್ವ ಅಧಿಕವಿರುವುದರಿಂದ ಹೃದಯವನ್ನು ರಕ್ಷಿಸಲು ಇದು ಪೂರಕ.

* ಪಪ್ಪಾಯಿಯಲ್ಲಿನ ಕೋಲಿನ್ ಒಳ್ಳೆಯ ನಿದ್ರೆಗೆ ಹಾಗೂ ಮಾಂಸಖಂಡಗಳ ಪುಷ್ಟಿಗೆ ಉತ್ತಮ. ಅಲ್ಲದೆ ಕೊಬ್ಬು ಕರಗಿಸಿ ತೂಕ ತಗ್ಗಿಸುತ್ತದೆ.

* ಕೈಮೋ ಪಾಪೆನ್ ಎಂಬ ಎಂಜೈಮ್ ಇರುವ ಈ ಹಣ್ಣಿನ ತಿರುಳನ್ನು ಹುಣ್ಣುಗಳ ಮೇಲೆ ಹಚ್ಚಿದರೆ ಬೇಗ ಗುಣವಾಗುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read