ಸೌಂದರ್ಯವರ್ಧಕವಾಗಿಯೂ ಅತ್ಯುತ್ತಮ ಪಪ್ಪಾಯ

ಫೇಸ್ ಪ್ಯಾಕ್ ಮಾಡಿಕೊಳ್ಳಲು ಅತ್ಯಧಿಕವಾಗಿ ಬಳಕೆಯಾಗುವ ಹಣ್ಣುಗಳಲ್ಲಿ ಪಪ್ಪಾಯ ಕೂಡಾ ಒಂದು. ಇದರ ಸೇವನೆಯಿಂದ ಹಲವು ಆರೋಗ್ಯದ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು.

ಕ್ಯಾನ್ಸರ್, ಅಸ್ತಮಾ ಮತ್ತು ಮಧುಮೇಹಿಗಳಿಗೆ ಇದರ ಸೇವನೆ ಬಹಳ ಒಳ್ಳೆಯದು. ಮಾರಣಾಂತಿಕ ರೋಗ ಬರದಂತೆ ಇದು ನೋಡಿಕೊಳ್ಳುತ್ತದೆ. ಜೀರ್ಣ ಶಕ್ತಿಯನ್ನು ಹೆಚ್ಚಿಸುತ್ತದೆ. ಸಂಧಿವಾತದ ಲಕ್ಷಣಗಳನ್ನು ಕಡಿಮೆ ಮಾಡುತ್ತದೆ.

ಇದರಲ್ಲಿರುವ ವಿಟಮಿನ್ ಇ ಅಂಶ ಸೌಂದರ್ಯ ವರ್ಧಕವಾಗಿಯೂ ಕೆಲಸ ಮಾಡುತ್ತದೆ. ತ್ವಚೆಯ ಕಾಂತಿ ಹೆಚ್ಚಿಸುತ್ತದೆ. ಕೂದಲನ್ನು ದಪ್ಪಗೆ ಮತ್ತು ಉದ್ದಕ್ಕೆ ಬೆಳೆಯುವಂತೆ ನೋಡಿಕೊಳ್ಳುತ್ತದೆ.

ಬೆಳಗೆದ್ದು ಖಾಲಿ ಹೊಟ್ಟೆಗೆ ಈ ಹಣ್ಣನ್ನು ಸೇವಿಸುವುದರಿಂದ ದೇಹ ತೂಕವನ್ನು ಕಡಿಮೆ ಮಾಡಬಹುದು. ಜೀರ್ಣಶಕ್ತಿಯನ್ನು ಹೆಚ್ಚಿಸಿ. ಮಲಬದ್ಧತೆ ಸಮಸ್ಯೆ ದೂರಮಾಡಬೇಕೆಂದಿದ್ದರೆ ನಿತ್ಯ ಪಪ್ಪಾಯ ಹಣ್ಣನ್ನು ಸೇವಿಸಿ. ಆದರೆ ಗರ್ಭಿಣಿಯರು ಇದನ್ನು ಹೆಚ್ಚು ಸೇವಿಸುವುದು ಒಳ್ಳೆಯದಲ್ಲ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read