ಗೃಹ ಸಚಿವರ ತವರು ಜಿಲ್ಲೆಯಲ್ಲೇ ಪ್ಯಾಲೆಸ್ಟೈನ್‌ ಧ್ವಜ ಪ್ರದರ್ಶನ: ಗಾಢನಿದ್ರೆ ಬಿಟ್ಟು ದೇಶದ್ರೋಹಿಗಳ ಜಾಲಕ್ಕೆ ಕಡಿವಾಣ ಹಾಕಿ: ಸಿಎಂ ಸಿದ್ದರಾಮಯ್ಯಗೆ ಬಿಜೆಪಿ ಆಗ್ರಹ

ಬೆಂಗಳೂರು: ಸ್ವಾತಂತ್ರ್ಯ ದಿನಾಚರಣೆಯಂದು ಕುಣಿಗಲ್‌ನಲ್ಲಿ ಕಿಡಿಗೇಡಿಗಳಿಂದ ಪ್ಯಾಲೆಸ್ಟೈನ್‌ ಧ್ವಜ ಪ್ರದರ್ಶನ ಮಾಡಿರುವ ಘಟನೆ ನಡೆದಿದ್ದು, ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಕಿಡಿಕಾರಿದೆ.

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಉಗ್ರ ಪೋಷಕ ದೇಶಕ್ಕೆ ಜೈಕಾರ ಹಾಕುವ ಹಾಗೂ ಆ ದೇಶದ ಬಾವುಟ ಪ್ರದರ್ಶನ ಮಾಡುವ ರೋಗಗ್ರಸ್ಥ ಮನಸ್ಥಿತಿಗಳು ರಾಜ್ಯದಲ್ಲಿ ಹೆಚ್ಚುತ್ತಿವೆ.

ಕಾಂಗ್ರೆಸ್‌ನ ಓಲೈಕೆ ರಾಜಕಾರಣದ ಅಮಲು ತಲೆಗೇರಿಸಿಕೊಂಡಿರುವ ದೇಶದ್ರೋಹಿಗಳು, ಸ್ವಾತಂತ್ರ್ಯ ದಿನಾಚರಣೆ ವೇಳೆ ಕುಣಿಗಲ್‌ನಲ್ಲಿ ಪ್ಯಾಲೆಸ್ಟೈನ್‌ ಧ್ವಜ ಪ್ರದರ್ಶನ ಮಾಡಿದ್ದಾರೆ. ದೇಶದ ಸಮಗ್ರತೆಗೆ ದಕ್ಕೆ ತರುವ ವಿಷಬೀಜಗಳು ಅಸಮರ್ಥ ಗೃಹ ಸಚಿವ ಡಾ ಜಿ.ಪರಮೇಶ್ವರ ಅವರ ಜಿಲ್ಲೆಯಲ್ಲೇ ಮೊಳಕೆಯೊಡೆತ್ತಿರುವುದು ದುರಂತ ಎಂದು ಆಕ್ರೋಶ ವ್ಯಕ್ತಪಡಿಸಿದೆ.

ಸಿಎಂ ಸಿದ್ದರಾಮಯ್ಯನವರೇ ಓಲೈಕೆ ಬದಿಗಿಟ್ಟು ಶಾಂತಿಯ ತೋಟ ಕರುನಾಡು, ಅಶಾಂತಿಯ ಬೀಡಾಗುವ ಮುನ್ನ ಗಾಢನಿದ್ರೆಯಿಂದ ಎಚ್ಚೆತ್ತುಕೊಳ್ಳಿ, ದೇಶದ್ರೋಹಿಗಳ ಜಾಲಕ್ಕೆ ಕಡಿವಾಣ ಹಾಕಿ ಎಂದು ಆಗ್ರಹಿಸಿದೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read