SCO ಶೃಂಗಸಭೆಯಲ್ಲಿ ಪುಟಿನ್ ಗೆ ಹ್ಯಾಂಡ್ಶೇಕ್ ಕೊಡಲು ಹೋಗಿ ಪಾಕ್ ಪ್ರಧಾನಿ ಟ್ರೋಲ್ ಆಗಿದ್ದು, ವೀಡಿಯೋ ವೈರಲ್ ಆಗಿದೆ.
ಪ್ರಧಾನಿ ನರೇಂದ್ರ ಮೋದಿ, ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮತ್ತು ಚೀನಾದ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಸೇರಿದಂತೆ 10 ಸದಸ್ಯ ರಾಷ್ಟ್ರಗಳ ನಾಯಕರನ್ನು ಒಟ್ಟುಗೂಡಿಸುವ ಶಾಂಘೈ ಸಹಕಾರ ಸಂಸ್ಥೆ (SCO) ಶೃಂಗಸಭೆಯು ಚೀನಾದಲ್ಲಿ ನಡೆಯುತ್ತಿದೆ. ಈ ಬಾರಿ ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಅವರನ್ನು ಟ್ರೋಲಿಗರು ಗುರಿಯಾಗಿಸಿಕೊಂಡಿದ್ದಾರೆ.
ಶೃಂಗಸಭೆಯ ಒಂದು ಸಣ್ಣ ವೀಡಿಯೊ ತುಣುಕು ಪ್ರಧಾನಿ ಷರೀಫ್ ಅವರು ಅಧ್ಯಕ್ಷ ಪುಟಿನ್ ಅವರತ್ತ ಹಸ್ತಲಾಘವ ಮಾಡಲು ಧಾವಿಸುತ್ತಿರುವುದನ್ನು ತೋರಿಸಿದಾಗ ನೆಟ್ಟಿಗರು ಷರೀಫ್ ಅವರನ್ನು ಟ್ರೋಲ್ ಮಾಡಲು ಪ್ರಾರಂಭಿಸಿದರು.
ವಿಡಿಯೋ ಕ್ಲಿಪ್ನಲ್ಲಿ, ಫೋಟೋ ತೆಗೆದ ನಂತರ ಪುಟಿನ್ ಮತ್ತು ಕ್ಸಿ ಜಿನ್ಪಿಂಗ್ ಅಕ್ಕಪಕ್ಕದಲ್ಲಿ ನಡೆದುಕೊಂಡು ಹೋಗುತ್ತಿರುವಾಗ, ಪ್ರಧಾನಿ ಷರೀಫ್ ಹಿಂದಿನಿಂದ ಬಂದು ಪುಟಿನ್ ಅವರ ಕೈ ಕುಲುಕಲು ಆತುರದಿಂದ ಕೈ ಚಾಚುತ್ತಿರುವುದು ಕಂಡುಬರುತ್ತದೆ. ಶೆಹಬಾಜ್ ಅವರು ಕೈ ಕುಲುಕಲು ತಮ್ಮ ಬಳಿ ಬರುತ್ತಿರುವುದನ್ನು ಸ್ವತಹ ಕ್ಸಿ ಜಿನ್ ಪಿಂಗ್ ಅರಿತಿದ್ದಾರೆ. ಆದರೆ ಉದ್ದೇಶಪೂರ್ವಕವಾಗಿ ಷರೀಪ್ ಅವರ ಕಡೆಯಿಂದ ಗಮನವನ್ನು ಬೇರೆ ಕಡೆ ಹರಿಸುವ ಮೂಲಕ ನಿರ್ಲಕ್ಷ್ಯ ಮಾಡಿದಂತೆ ವಿಡಿಯೋದಲ್ಲಿ ನೋಡಬಹುದಾಗಿದೆ.
While other leaders showed composure, Pakistan PM Shehabaz Sharif came running to Putin to shake his hand…. pathetic attention seeking behaviour.
— Incognito (@Incognito_qfs) August 31, 2025
Xi Jinping realised what Shehbaz was going to do, so he looked the other way and ignored him 😭 pic.twitter.com/NAEeDw2oyY