HomeLatest Newsಪಾಕಿಸ್ತಾನಿ ಫೇರ್‌ನೆಸ್ ಕ್ರೀಮ್ ಬಳಕೆಯಿಂದ 18 ಭಾರತೀಯ ಮಹಿಳೆಯರಿಗೆ ಕಿಡ್ನಿ ಸಮಸ್ಯೆ? ಆರೋಗ್ಯ ತಜ್ಞರಿಂದ ಮಹತ್ವದ...

ಪಾಕಿಸ್ತಾನಿ ಫೇರ್‌ನೆಸ್ ಕ್ರೀಮ್ ಬಳಕೆಯಿಂದ 18 ಭಾರತೀಯ ಮಹಿಳೆಯರಿಗೆ ಕಿಡ್ನಿ ಸಮಸ್ಯೆ? ಆರೋಗ್ಯ ತಜ್ಞರಿಂದ ಮಹತ್ವದ ಎಚ್ಚರಿಕೆ

ನವದೆಹಲಿ: ಇತ್ತೀಚಿನ ದಿನಗಳಲ್ಲಿ ಆನ್‌ಲೈನ್‌ನಲ್ಲಿ ಡ್ರೆಸ್, ಬ್ಯೂಟಿ ಪ್ರಾಡಕ್ಟ್‌ ಸೇರಿದಂತೆ ಇಷ್ಟಬಂದ ವಸ್ತುಗಳನ್ನು ಕಡಿಮೆ ಬೆಲೆಗೆ ಆರ್ಡರ್ ಮಾಡುವುದು ದೊಡ್ಡ ಟ್ರೆಂಡ್ ಆಗಿದೆ. ಆದರೆ, ಹೀಗೆ ಕಣ್ಮುಚ್ಚಿ ಖರೀದಿಸುವ ಸೌಂದರ್ಯವರ್ಧಕಗಳು ಎಷ್ಟರ ಮಟ್ಟಿಗೆ ಸುರಕ್ಷಿತ ಎಂಬ ಆತಂಕಕಾರಿ ಪ್ರಶ್ನೆಯೊಂದು ಇದೀಗ ಮೂಡಿದೆ. ಇದಕ್ಕೆ ಸಾಕ್ಷಿ ಎಂಬಂತೆ, ಪ್ರಸಿದ್ಧ ಇ-ಕಾಮರ್ಸ್ ಆ್ಯಪ್ ಮೀಶೋ (Meesho) ನಲ್ಲಿ ಲಭ್ಯವಿರುವ ಪಾಕಿಸ್ತಾನಿ ಮೂಲದ “ಗೋರಿ ಬ್ಯೂಟಿ ಕ್ರೀಮ್” (Gorei Beauty Cream) ಬಳಸಿದ 18 ಮಹಿಳೆಯರು ತೀವ್ರ ಕಿಡ್ನಿ ಸಮಸ್ಯೆಗೆ ತುತ್ತಾಗಿರುವ ಆಘಾತಕಾರಿ ಘಟನೆ ಮಹಾರಾಷ್ಟ್ರದ ನಾಗ್ಪುರದಲ್ಲಿ ಬೆಳಕಿಗೆ ಬಂದಿದೆ.

ಮಾರುಕಟ್ಟೆಗೆ ಹೇಗೆ ಬಂತು ಪಾಕ್ ಉತ್ಪನ್ನ?:

ಭಾರತ ಮತ್ತು ಪಾಕಿಸ್ತಾನ ನಡುವೆ ಈಗಾಗಲೇ ಅಧಿಕೃತ ವ್ಯಾಪಾರ ಸಂಬಂಧಗಳನ್ನು ನಿಷೇಧಿಸಲಾಗಿದೆ. ಹೀಗಿದ್ದೂ ಭಾರತೀಯ ಮಾರುಕಟ್ಟೆಯಲ್ಲಿ ಹಾಗೂ ಆನ್‌ಲೈನ್ ಆ್ಯಪ್‌ಗಳಲ್ಲಿ ಪಾಕಿಸ್ತಾನಿ ಉತ್ಪನ್ನಗಳು ಹೇಗೆ ಮಾರಾಟವಾಗುತ್ತಿವೆ ಎಂದು ನೆಟ್ಟಿಗರು ತೀವ್ರ ಆಕ್ರೋಶ ಹೊರಹಾಕಿದ್ದಾರೆ.

752 ಪಟ್ಟು ಹೆಚ್ಚು ಪಾದರಸ (Mercury)

ಆರೋಗ್ಯ ತಜ್ಞ ಚಿರಾಗ್ ಬರ್ಜತ್ಯ ಅವರು ಈ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಮಹಾರಾಷ್ಟ್ರ ಆಹಾರ ಮತ್ತು ಔಷಧ ಆಡಳಿತ (FDA) ನಡೆಸಿದ ಪ್ರಯೋಗಾಲಯ ತಪಾಸಣೆಯಲ್ಲಿ, ಚರ್ಮವನ್ನು ಬಿಳಿಯಾಗಿಸುವ ಈ ಕ್ರೀಮ್‌ನಲ್ಲಿ ಕಾನೂನುಬದ್ಧ ಮಿತಿಗಿಂತ ಬರೋಬ್ಬರಿ 752 ಪಟ್ಟು ಹೆಚ್ಚು ಪಾದರಸ (Mercury) ಇರುವುದು ಪತ್ತೆಯಾಗಿದೆ ಕಳೆದ ಎರಡು ವರ್ಷಗಳಲ್ಲಿ ಈ ಕ್ರೀಮ್ ಬಳಸಿದ ನಾಗ್ಪುರದ 18 ಮಹಿಳೆಯರು ತೀವ್ರ ಮೂತ್ರಪಿಂಡದ ಕಾಯಿಲೆಗೆ ಒಳಗಾಗಿದ್ದಾರೆ ಎಂದು ವರದಿಯಾಗಿದೆ.

ತಪಾಸಣೆಯಲ್ಲಿ ಗುಣಮಟ್ಟವಿಲ್ಲದ (NSQ) ಎಂದು ಘೋಷಿಸಲಾದ ಆ ಮೂರು ಉತ್ಪನ್ನಗಳೆಂದರೆ:

ಗೋರಿ ಬ್ಯೂಟಿ ಕ್ರೀಮ್ (Goree Beauty Cream – ಪಾಕಿಸ್ತಾನ ಮೂಲದ್ದು)

ಫೇಸ್ ಫ್ರೆಶ್ ಗೋಲ್ಡ್ (Face Fresh Gold – ಬ್ಯೂಟಿ ಕ್ರೀಮ್ ಮತ್ತು ಸೀರಮ್)

ಗೋಲ್ಡನ್ ಸ್ಟಾರ್ ಬ್ಯೂಟಿ ಕ್ರೀಮ್ (Golden Star Beauty Cream)

    ಕಿಡ್ನಿ ಮೇಲೆ ಹೇಗೆ ಪರಿಣಾಮ ಬೀರುತ್ತದೆ?:

    ಈ ಕ್ರೀಮ್‌ನಲ್ಲಿರುವ ಪಾದರಸವು ಚರ್ಮಕ್ಕೆ ಬಣ್ಣ ನೀಡುವ ‘ಮೆಲನಿನ್’ ಉತ್ಪಾದನೆಯನ್ನು ತಡೆಯುತ್ತದೆ. ಇದರಿಂದ ಚರ್ಮವು ತಕ್ಷಣಕ್ಕೆ ಬೆಳ್ಳಗಾದಂತೆ ಕಂಡರೂ, ಚರ್ಮವು ಈ ಪಾದರಸವನ್ನು ಸಂಪೂರ್ಣವಾಗಿ ಹೀರಿಕೊಳ್ಳುತ್ತದೆ. ರಕ್ತದ ಮೂಲಕ ದೇಹವನ್ನು ಸೇರುವ ಈ ಕೆಮಿಕಲ್, ಕಾಲಕ್ರಮೇಣ ಕಿಡ್ನಿಗಳಲ್ಲಿ ಶೇಖರಣೆಯಾಗಿ ಮೂತ್ರಪಿಂಡಗಳನ್ನು ಸಂಪೂರ್ಣವಾಗಿ ಹಾನಿಗೊಳಿಸುತ್ತದೆ ಎಂದು ತಜ್ಞರು ಎಚ್ಚರಿಸಿದ್ದಾರೆ.

    ಉತ್ಪನ್ನ ಬ್ಯಾನ್ ಮಾಡಲು ಮುಂದಾದ ಮೀಶೋ:

    ಈ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತುಕೊಂಡಿರುವ ಮೀಶೋ ಕಂಪನಿ ಪ್ರತಿಕ್ರಿಯಿಸಿದೆ. “ಇತ್ತೀಚಿನ ವರದಿಗಳ ಹಿನ್ನೆಲೆಯಲ್ಲಿ ನಾವು ಈ ಬಗ್ಗೆ ತನಿಖೆ ನಡೆಸುತ್ತಿದ್ದೇವೆ. ನಮ್ಮ ಪ್ಲಾಟ್‌ಫಾರ್ಮ್‌ನಿಂದ ಈ ಉತ್ಪನ್ನವನ್ನು ಸಂಪೂರ್ಣವಾಗಿ ತೆಗೆದುಹಾಕುವ (Remove) ಪ್ರಕ್ರಿಯೆ ಆರಂಭಿಸಿದ್ದೇವೆ. ಗ್ರಾಹಕರ ಸುರಕ್ಷತೆಯೇ ನಮಗೆ ಮುಖ್ಯ” ಎಂದು ಸ್ಪಷ್ಟನೆ ನೀಡಿದೆ.

    ನೆಟ್ಟಿಗರ ಆಕ್ರೋಶ:

    “ಬುದ್ಧಿ ಇರುವ ಯಾರಾದರೂ ಪಾಕಿಸ್ತಾನದಲ್ಲಿ ತಯಾರಿಸಿದ ಫೇಸ್ ಕ್ರೀಮ್ ಬಳಸುತ್ತಾರಾ?” ಎಂದು ಬಳಕೆದಾರರೊಬ್ಬರು ಪ್ರಶ್ನಿಸಿದರೆ, ಮತ್ತೊಬ್ಬರು “ಮುಖಕ್ಕೆ ಹಚ್ಚುವ ಕ್ರೀಮ್‌ಗಳನ್ನು ಇಷ್ಟ ಬಂದ ಹಾಗೆ ಮೀಶೋದಲ್ಲಿ ಖರೀದಿಸುವವರಿಗೆ ಹುಚ್ಚು ಹಿಡಿದಿದೆ” ಎಂದು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.

    For Latest News Updates, Join Our Whatsapp Community🚩
    Abinandan
    Abinandan
    ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
    RELATED ARTICLES

    LEAVE A REPLY

    Please enter your comment!
    Please enter your name here

    Most Popular