ಪಾಕ್​ ಟಿವಿಯಲ್ಲಿ ಅಥಿಯಾ ಶೆಟ್ಟಿ ಮದುವೆ ಚರ್ಚೆ: ಉಡುಗೊರೆ ಲೆಕ್ಕ ಹಾಕಿದ್ದಕ್ಕೆ ಅದು ನಿಮ್ಮ ಜಿಡಿಪಿ ಎಂದು ಲೇವಡಿ

ನೇರ ಪ್ರಸಾರದ ಸಮಯದಲ್ಲಿ ಪಾಕಿಸ್ತಾನಿ ವರದಿಗಾರರು ಮತ್ತು ಆ್ಯಂಕರ್ಗಳು ಎಡವಟ್ಟು ಮಾಡಿಕೊಂಡಿರುವ ಕೆಲವು ಉದಾಹರಣೆಗಳು ಇವೆ. ಇತ್ತೀಚಿನ ನೇರ ಪ್ರಸಾರದ ಸಮಯದಲ್ಲಿ ಇಬ್ಬರು ಪಾಕಿಸ್ತಾನಿ ಆ್ಯಂಕರ್ಸ್​ ಬಾಲಿವುಡ್ ತಾರೆ ಸುನೀಲ್ ಶೆಟ್ಟಿ ಅವರ ಮಗಳು ಅಥಿಯಾ ಶೆಟ್ಟಿ ಮತ್ತು ಭಾರತೀಯ ಕ್ರಿಕೆಟಿಗ ಕೆಎಲ್ ರಾಹುಲ್ ಅವರ ವಿವಾಹದ ಬಗ್ಗೆ ಮಾತನಾಡಿದ್ದು ಅದೀಗ ವೈರಲ್​ ಆಗಿದೆ.

ನವವಿವಾಹಿತರು ಸ್ವೀಕರಿಸಿದ ಉಡುಗೊರೆಗಳ ಬಗ್ಗೆ ಅವರು ಮಾತನಾಡಿಕೊಂಡಿದ್ದಾರೆ. ಮಹಿಳಾ ಆಂಕರ್ ಉಡುಗೊರೆಗಳನ್ನು ಪಟ್ಟಿ ಮಾಡಲು ಪ್ರಾರಂಭಿಸುವ ಮೊದಲು ಪಟ್ಟಿಯನ್ನು ಗಟ್ಟಿಯಾಗಿ ಓದಲು ತನ್ನ ಸಹ-ಆ್ಯಂಕರ್ಗೆ ಕೇಳುತ್ತಾಳೆ. ವಧುವಿನ ತಂದೆ ಸುನೀಲ್ ಶೆಟ್ಟಿ ದಂಪತಿಗೆ 5 ಕೋಟಿ ರೂಪಾಯಿಯ ಅಪಾರ್ಟ್‌ಮೆಂಟ್ ಅನ್ನು ಮದುವೆಯ ಉಡುಗೊರೆಯಾಗಿ ನೀಡಿರುವ ಬಗ್ಗೆ ಹೇಳಲಾಗುತ್ತದೆ. ನಂತರ ಸಹೋದ್ಯೋಗಿಯು ಅದು 5 ಅಲ್ಲ 50, 5 ಕೋಟಿಯಲ್ಲಿ ಕರಾಚಿಯಲ್ಲಿಯೂ ಬಂಗಲೆ ಬರುವುದಿಲ್ಲ ಎನ್ನುತ್ತಾಳೆ.

ನಂತರ ಚರ್ಚೆ ಸಲ್ಮಾನ್ ಖಾನ್ ಅವರ ಉಡುಗೊರೆಯತ್ತ ಹೋಗುತ್ತದೆ. ಸಲ್ಮಾನ್​ ಖಾನ್​ ಎಂದಿಗೂ ಮದುವೆಯಾಗುವುದಿಲ್ಲ, ಆದ್ದರಿಂದ ಉಡುಗೊರೆ ಎಂದಿಗೂ ಪಡೆಯುವುದಿಲ್ಲ ಎಂದು ಆ್ಯಂಕರ್​ ಹೇಳುತ್ತಾರೆ. ನಂತರ ಜಾಕಿ ಶ್ರಾಫ್, ವಿರಾಟ್ ಕೊಹ್ಲಿ, ಎಂಎಸ್ ಧೋನಿ ಮತ್ತು ಅರ್ಜುನ್ ಕಪೂರ್ ಅವರ ಉಡುಗೊರೆಗಳ ಬಗ್ಗೆ ಚರ್ಚಿಸಿದರು.

ಈ ಚರ್ಚೆ ಈಗ ಭಾರತದಲ್ಲಿ ಭಾರಿ ಟ್ರೋಲ್​ ಆಗುತ್ತಿದೆ. ಮೊದಲೇ ಪಾಕಿಸ್ತಾನದ ಪರಿಸ್ಥಿತಿ ಸರಿಯಿಲ್ಲ. ಈ ಉಡುಗೊರೆಯ ಮೌಲ್ಯ ಲೆಕ್ಕ ಹಾಕುತ್ತಿರುವ ಆ್ಯಂಕರ್​ಗಳು ಪಾಕಿಸ್ತಾನದ ಸ್ಥಿತಿ ಸರಿ ಮಾಡಬಹುದಿತ್ತಲ್ಲಾ ಎಂದು ಯೋಚಿಸುವಂತಿದೆ ಎಂದಿದ್ದರೆ, ಇನ್ನೋರ್ವ ಈ ಉಡುಗೊರೆಯ ಮೊತ್ತ ಲೆಕ್ಕ ಹಾಕಿದರೆ ಪಾಕಿಸ್ತಾನದ ಸಂಪೂರ್ಣ ಜಿಡಿಪಿ ಆಗಬಲ್ಲುದು ಎಂದಿದ್ದಾರೆ.

https://twitter.com/rose_k01/status/1620278822611603457?ref_src=twsrc%5Etfw%7Ctwcamp%5Etweetembed%7Ctwterm%5E1620278822611603457%7Ctwgr%5Ee88849a0e077ae05216b4d1cb6f982a49935bdf2%7Ctwcon%5Es1_&ref_url=https%3A%2F%2Fwww.india.com%2Fviral%2Fpakistan-viral-video-anchors-make-fun-of-athiya-shetty-kl-rahuls-wedding-gifts-indians-call-it-paks-entire-gdp-watch-5876897%2F

https://twitter.com/HarSakhii/status/1620304475549499394?ref_src=twsrc%5Etfw%7Ctwcamp%5Etweetembed%7Ctwterm%5E1620304475549499394%7Ctwgr%5Ee88849a0e077ae05216b4d1cb6f982a49935bdf2%7Ctwcon%5Es1_&ref_url=https%3A%2F%2Fwww.india.com%2Fviral%2Fpakistan-viral-video-anchors-make-fun-of-athiya-shetty-kl-rahuls-wedding-gifts-indians-call-it-paks-entire-gdp-watch-5876897%2F

https://twitter.com/Badass_Superdad/status/1620280048166240257?ref_src=twsrc%5Etfw%7Ctwcamp%5Etweetembed%7Ctwterm%5E1620280048166240257%7Ctwgr%5Ee88849a0e077ae05216b4d1cb6f982a49935bdf2%7Ctwcon%5Es1_&ref_url=https%3A%2F%2Fwww.india.com%2Fviral%2Fpakistan-viral-video-anchors-make-fun-of-athiya-shetty-kl-rahuls-wedding-gifts-indians-call-it-paks-entire-gdp-watch-5876897%2F

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read