ಉಗ್ರರೊಂದಿಗಿನ ಗುಂಡಿನ ಚಕಮಕಿ ವೇಳೆ ಐಎಸ್ಐ ಟಾಪ್ ಬ್ರಿಗೇಡಿಯರ್ ಹತ್ಯೆ

ಪಾಕಿಸ್ತಾನದ ದಕ್ಷಿಣ ವಜಿರಿಸ್ತಾನದ ಅಂಗೂರ್ ಅಡ್ಡಾದಲ್ಲಿ ಹಾರ್ಡ್‌ಕೋರ್ ಭಯೋತ್ಪಾದಕರ ಜೊತೆಗಿನ ಎನ್‌ ಕೌಂಟರ್‌ ನಲ್ಲಿ ಇಂಟರ್-ಸರ್ವೀಸಸ್ ಇಂಟೆಲಿಜೆನ್ಸ್(ಐಎಸ್‌ಐ) ನ ಬ್ರಿಗೇಡಿಯರ್ ಮುಸ್ತಫಾ ಕಮಲ್ ಬಾರ್ಕಿ ಕೊಲ್ಲಲ್ಪಟ್ಟರು ಎಂದು ಪಾಕಿಸ್ತಾನ ಮಿಲಿಟರಿ ಮಾಧ್ಯಮ ವಿಭಾಗ ಇಂಟರ್-ಸರ್ವೀಸಸ್ ಪಬ್ಲಿಕ್ ರಿಲೇಶನ್ಸ್ (ಐಎಸ್‌ಪಿಆರ್) ಮಂಗಳವಾರ ತಿಳಿಸಿದೆ.

ಎರಡು ಕಡೆಯ ನಡುವೆ ತೀವ್ರವಾದ ಗುಂಡಿನ ಚಕಮಕಿ ನಡೆದಿದೆ ಎಂದು ISPR ಹೇಳಿಕೆಯಲ್ಲಿ ತಿಳಿಸಿದ್ದು, ಮುಂಭಾಗದಿಂದ ಎನ್‌ಕೌಂಟರ್ ಮುನ್ನಡೆಸುತ್ತಿರುವಾಗ ಬ್ರಿಗೇಡಿಯರ್ ಮುಸ್ತಫಾ ಕಮಾಲ್ ಬಾರ್ಕಿಯನ್ನು ಕೊಲ್ಲಲಾಗಿದೆ. 7 ಮಂದದಿ ಗಾಯಗೊಂಡಿದ್ದು, ಇಬ್ಬರ ಸ್ಥಿತಿ ಗಂಭೀರವಾಗಿದೆ.

ಬ್ರಿಗೇಡಿಯರ್ ಬಾರ್ಕಿ ಮತ್ತು ಅವರ ತಂಡವು ಎನ್‌ಕೌಂಟರ್ ಸಮಯದಲ್ಲಿ ಭಯೋತ್ಪಾದಕರ ವಿರುದ್ಧ ವೀರಾವೇಶದ ಪ್ರತಿರೋಧವನ್ನು ನೀಡಿತು. ಅಧಿಕಾರಿಯು ಮಾತೃಭೂಮಿಯ ಶಾಂತಿಗಾಗಿ ತನ್ನ ಪ್ರಾಣವನ್ನು ತ್ಯಾಗ ಮಾಡಿದ್ದಾರೆ ಎಂದು ಸೇನಾಪಡೆಯ ಮಾಧ್ಯಮ ವ್ಯವಹಾರಗಳ ವಿಭಾಗ ಹೇಳಿದೆ.

ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೋ ಜರ್ದಾರಿ ಘಟನೆಯ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದಾರೆ. ಬ್ರಿಗೇಡಿಯರ್ ಬಾರ್ಕಿ ಅವರು ತಾಯ್ನಾಡಿನ ಶಾಂತಿಗಾಗಿ ತಮ್ಮ ಜೀವನವನ್ನು ತ್ಯಾಗ ಮಾಡಿದ್ದಾರೆ. ಅವರ ತ್ಯಾಗ ವ್ಯರ್ಥವಾಗುವುದಿಲ್ಲ ಎಂದು ಹೇಳಿದ್ದಾರೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read