ನವದೆಹಲಿ: ಭಾರತದ ರಾಜತಾಂತ್ರಿಕ ಕ್ರಮಕ್ಕೆ ಪಾಕಿಸ್ತಾನ ಬೆಚ್ಚಿಬಿದ್ದಿದೆ. ಭಾರತದ ವಿರುದ್ಧವೂ ಪಾಕಿಸ್ತಾನ ಅನೇಕ ಕ್ರಮ ಕೈಗೊಂಡಿದೆ.
ಶಿಮ್ಲಾ ಒಪ್ಪಂದ ಸೇರಿದಂತೆ ಎಲ್ಲ ದ್ವಿಪಕ್ಷೀಯ ಒಪ್ಪಂದಕ್ಕೆ ತಡೆ ನೀಡಿದೆ. ಭಾರತೀಯರಿಗೆ ನೀಡಿರುವ ವೀಸಾ ರದ್ದುಗೊಳಿಸಿದೆ. ಸಾರ್ಕ್ ವೀಸಾ ರಿಯಾಯಿತಿ ಯೋಜನೆ ರದ್ದು ಮಾಡಲಾಗಿದೆ. ಪಾಕಿಸ್ತಾನ ತೊರೆಯಲು ಭಾರತ ಮೂಲದ ಸಿಖ್ಖರಿಗೆ ಸೂಚನೆ ನೀಡಲಾಗಿದೆ. 24 ಗಂಟೆಯೊಳಗೆ ಪಾಕಿಸ್ತಾನ ತೊರೆಯಬೇಕೆಂದು ಸೂಚಿಸಲಾಗಿದೆ. ವಾಯುಪಡೆ ಸಲಹೆಗಾರರು ಪಾಕಿಸ್ತಾನ ತೊರೆಯಬೇಕು ಎಂದು ಸೂಚಿಸಲಾಗಿದ್ದು, ಭಾರತೀಯ ರಾಯಭಾರ ಕಚೇರಿ ಸಿಬ್ಬಂದಿ ಸಂಖ್ಯೆ 30ಕ್ಕೆ ಇಳಿಸಲು ಸೂಚನೆ ನೀಡಲಾಗಿದೆ.
ಭಾರತದ ಸಿಂಧೂ ನದಿ ನೀರು ಹಂಚಿಕೆಯನ್ನು ಎದುರಿಸಲು ಪಾಕಿಸ್ತಾನ ಸಿಮ್ಲಾ ಒಪ್ಪಂದವನ್ನು ಅಮಾನತುಗೊಳಿಸಿದೆ.
ಕನಿಷ್ಠ 26 ಜನರ ಸಾವಿಗೆ ಕಾರಣವಾದ ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಭಾರತದ ಪ್ರತಿಕ್ರಿಯೆಯ ವಿರುದ್ಧ ಪ್ರತೀಕಾರದ ಕ್ರಮಗಳ ಸರಣಿಯಾಗಿ 1972 ರ ಸಿಮ್ಲಾ ಒಪ್ಪಂದವನ್ನು ಅಮಾನತುಗೊಳಿಸುವುದಾಗಿ ಪಾಕಿಸ್ತಾನ ಘೋಷಿಸಿದೆ.