HomeLatest NewsBREAKING: ಸವಾಲಿನ ಮೊತ್ತ ಕಲೆ ಹಾಕಿದ ಭಾರತ: ಪಾಕಿಸ್ತಾನ ಗೆಲುವಿಗೆ 267 ರನ್ ಗುರಿ

BREAKING: ಸವಾಲಿನ ಮೊತ್ತ ಕಲೆ ಹಾಕಿದ ಭಾರತ: ಪಾಕಿಸ್ತಾನ ಗೆಲುವಿಗೆ 267 ರನ್ ಗುರಿ

ಶ್ರೀಲಂಕಾದ ಕ್ಯಾಂಡಿಯ ಪಲ್ಲೆಕಲೆ ಅಂತರರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಏಷ್ಯಾಕಪ್ ಪಂದ್ಯದಲ್ಲಿ ಪಾಕಿಸ್ತಾನ ಗೆಲುವಿಗೆ ಭಾರತ 267 ರನ್ ಗುರಿ ನೀಡಿದೆ.

ಪಾಕ್ ವಿರುದ್ಧದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ 48.5 ಓವರ್ ಗಳಲ್ಲಿ ಎಲ್ಲಾ ವಿಕೆಟ್ ಕಳೆದುಕೊಂಡು 266 ರನ್ ಗಳಿಸಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ರೋಹಿತ್ ಶರ್ಮಾ 11, ಶುಭಮನ್ ಗಿಲ್ 10, ವಿರಾಟ್ ಕೊಹ್ಲಿ 4, ಶ್ರೇಯಸ್ ಅಯ್ಯರ್ 14, ಈಶಾನ್ ಕಿಶನ್ 82, ಹಾರ್ದಿಕ ಪಾಂಡ್ಯ 87, ರವೀಂದ್ರ ಜಡೇಜ 14, ಶಾರ್ದೂಲ್ ಠಾಕೂರ್ 3, ಕುಲದೀಪ್ ಯಾದವ್ 4, ಜಸ್ ಪ್ರೀತ್ ಬೂಮ್ರ 16, ಮೊಹಮ್ಮದ್ ಸಿರಾಜ್ 1 ರನ್ ಗಳಿಸಿದ್ದಾರೆ.

ಐದನೇ ವಿಕೆಟ್‌ಗೆ ಹಾರ್ದಿಕ್ ಪಾಂಡ್ಯ ಮತ್ತು ಇಶಾನ್ ಕಿಶನ್ ನಡುವಿನ ಸೊಗಸಾದ ಶತಕದ ಜೊತೆಯಾಟ ತಂಡದ ಮೊತ್ತ ಹೆಚ್ಚಳಕ್ಕೆ ಕಾರಣವಾಯಿತು. ಒಂದು ಹಂತದಲ್ಲಿ 66/4 ಆಗಿ ಸಂಕಷ್ಟದಲ್ಲಿದ್ದ ತಂಡಕ್ಕೆ ಪಾಂಡ್ಯ ಮತ್ತು ಇಶಾನ್ ಭರ್ಜರಿ ಅರ್ಧ ಶತಕ ಸಿಡಿಸುವ ಮೂಲಕ ನೆರವಾದರು. ಪಾಂಡ್ಯ 87 ರನ್ ಗಳಿಸಿದ್ದಾಗ ಇಶಾನ್ 82 ರನ್ ಗಳಿಸಿ ಔಟಾದರು. 239/5 ರಿಂದ ಭಾರತ ಮತ್ತೊಮ್ಮೆ ಸ್ಲಿಪ್ ಮಾಡಿ 266 ರನ್‌ಗಳಿಗೆ ಆಲೌಟ್ ಆಯಿತು. ಕೇವಲ 27 ರನ್‌ಗಳಿಗೆ ಕೊನೆಯ ಐದು ವಿಕೆಟ್‌ಗಳನ್ನು ಕಳೆದುಕೊಂಡಿತು.

ಪಾಕಿಸ್ತಾನ ಪರವಾಗಿ ಶಾಹೀನ್ ಅಫ್ರಿದಿ 4 ವಿಕೆಟ್ ಪಡೆದರೆ, ಹ್ಯಾರಿಸ್ ರೌಫ್ ಮತ್ತು ನಸೀಮ್ ಶಾ ತಲಾ 3 ವಿಕೆಟ್ ಪಡೆದರು.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular