ಇಸ್ಲಾಮಾಬಾದ್: ಸೌದಿ ಅರೇಬಿಯಾ ಸೇರಿದಂತೆ ಅನೇಕ ದೇಶಗಳು ತಮ್ಮಲ್ಲಿದ್ದ ಪಾಕಿಸ್ತಾನ ಭಿಕ್ಷುಕರನ್ನು ದೇಶದಿಂದ ಹೊರ ತಬ್ಬಿದ ಬೆನ್ನಲ್ಲೇ ಜಾಗತಿಕ ಮುಜುಗರ ತಪ್ಪಿಸಲು ಪಾಕಿಸ್ತಾನದ ಭಿಕ್ಷುಕರಿಗೆ ಇನ್ನು ವಿದೇಶ ಪ್ರಯಾಣ ನಿಷೇಧಿಸಲಾಗಿದೆ.
ತನ್ನ ದೇಶದ ಭಿಕ್ಷುಕರು ಮತ್ತು ಅಪೂರ್ಣ ದಾಖಲೆ ಹೊಂದಿದವರು ವಿದೇಶಕ್ಕೆ ಪ್ರಯಾಣ ಮಾಡುವಂತಿಲ್ಲ ಎಂದು ಪಾಕಿಸ್ತಾನ ಸರ್ಕಾರ ಆದೇಶ ಹೊರಡಿಸಿದೆ. ಗಲ್ಫ್ ರಾಷ್ಟ್ರಗಳು ಸೇರಿದಂತೆ ಅನೇಕ ದೇಶಗಳಲ್ಲಿ ಪಾಕಿಸ್ತಾನಿ ಪ್ರಜೆಗಳು ಭಿಕ್ಷಾಟನೆಯಲ್ಲಿ ತೊಡಗಿದ್ದಾರೆ. ಇತ್ತೀಚೆಗೆ ಸಾವಿರಾರು ಮಂದಿ ಪಾಕಿಸ್ತಾನ ಭಿಕ್ಷುಕರನ್ನು ಸೌದಿ ಅರೇಬಿಯಾ ಗಡಿಪಾರು ಮಾಡಿತ್ತು.
ಇದು ಜಾಗತಿಕ ಮಟ್ಟದಲ್ಲಿ ಪಾಕಿಸ್ತಾನಕ್ಕೆ ಮುಜುಗರ ತಂದಿದೆ. ಈ ಹಿನ್ನೆಲೆಯಲ್ಲಿ ಭಿಕ್ಷುಕರು ಮತ್ತು ಅಪೂರ್ಣ ದಾಖಲೆ ಹೊಂದಿದವರು ವಿದೇಶ ಪ್ರಯಾಣ ಮಾಡುವಂತಿಲ್ಲ ಎಂದು ಪಾಕಿಸ್ತಾನ ಸರ್ಕಾರ ಆದೇಶಿಸಿದೆ.

