ಡಿಜಿಟಲ್ ಡೆಸ್ಕ್ : ಪಾಕಿಸ್ತಾನದ ವಶದಲ್ಲಿರುವ ಬಿಎಸ್ಎಫ್ ಯೋಧನ ಹಸ್ತಾಂತರಕ್ಕೆ ಪಾಕ್ ನಿರಾಕರಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಆಕಸ್ಮಿಕವಾಗಿ ಗಡಿ ದಾಟಿದ್ದ ಬಿಎಸ್ ಎಫ್ ಯೋಧರೊಬ್ಬರನ್ನು ಪಾಕಿಸ್ತಾನ ರೇಂಜರ್ ಗಳು ವಶಕ್ಕೆ ಪಡೆದುಕೊಂಡಿದ್ದರು. ಪಂಜಾಬ್ ನ ಫಿರೋಜ್ ಪುರದಲ್ಲಿ ಕರ್ತವ್ಯದಲ್ಲಿದ್ದ ಬಿಎಸ್ ಎಫ್ ಯೋಧರೊಬ್ಬರು ಅಂತರಾಷ್ಟ್ರೀಯ ಗಡಿ ದಾಟಿದ್ದು, ಇದೇ ವೇಳೆ ಪಾಕಿಸ್ತಾನ ರೇಂಜರ್ ಗಳು ಅವರನ್ನು ವಶಕ್ಕೆ ಪಡೆದಿವೆ.
ಯೋಧನನ್ನು ಸುರಕ್ಷಿತವಾಗಿ ಕರೆತರಲು ಬಿಎಸ್ ಎಫ್ ಅಧಿಕಾರಿಗಳು ಫ್ಲ್ಯಾಗ್ ಮೀಟಿಂಗ್ ನಡೆಸಲು ಮುಂದಾಗಿದ್ದರು. ಆದರೆ ಭಾರತದ ಗಡಿ ಭದ್ರತಾ ಪಡೆಯ (ಬಿಎಸ್ಎಫ್) ಕಾನ್ಸ್ಟೇಬಲ್ ಪಿ.ಕೆ.ಸಿಂಗ್ ಅವರನ್ನು ಪಾಕಿಸ್ತಾನದ ಭೂಪ್ರದೇಶದಲ್ಲಿ ಪತ್ತೆಯಾದ ನಂತರ ಪಾಕಿಸ್ತಾನಿ ಪಂಜಾಬ್ ರೇಂಜರ್ಗಳು ಬಂಧಿಸಿದ್ದಾರೆ.
ಶಸ್ತ್ರಾಸ್ತ್ರ, ಮದ್ದುಗುಂಡು ಮತ್ತು ಇತರ ಮಿಲಿಟರಿ ಸಲಕರಣೆಗಳೊಂದಿಗೆ ಸೆರೆಹಿಡಿಯಲಾಗಿದ್ದು ಮತ್ತು ಈಗ ಪಾಕಿಸ್ತಾನದ ಮಿಲಿಟರಿ ವಶದಲ್ಲಿದ್ದಾನೆ. ಪಿ. ಕೆ.ಸಿಂಗ್ ಅವರನ್ನು ಸುರಕ್ಷಿತವಾಗಿ ಕರೆತರಲು ಕುಟುಂಬಸ್ಥರು ಮನವಿ ಮಾಡಿದ್ದಾರೆ.