HomeLatest NewsBREAKING: ಜಿಮ್ ನಲ್ಲಿ ಬಿದ್ದು ಕೇರಳ ಬಿಜೆಪಿ ಅಧ್ಯಕ್ಷ ರಾಜೀವ್ ಚಂದ್ರಶೇಖರ್ ಗೆ ಗಾಯ

BREAKING: ಜಿಮ್ ನಲ್ಲಿ ಬಿದ್ದು ಕೇರಳ ಬಿಜೆಪಿ ಅಧ್ಯಕ್ಷ ರಾಜೀವ್ ಚಂದ್ರಶೇಖರ್ ಗೆ ಗಾಯ

ತಿರುವನಂತಪುರಂ: ಕೇರಳ ಬಿಜೆಪಿ ಅಧ್ಯಕ್ಷ ರಾಜೀವ್ ಚಂದ್ರಶೇಖರ್ ಜಿಮ್ ನಲ್ಲಿ ಕಸರತ್ತು ನಡೆಸುವ ವೇಳೆ ವ್ಯಾಯಾಮ ಮಾಡುವ ಉಪಕರಣ ಟ್ರೆಡ್ ಮಿಲ್ ನಲ್ಲಿ ಬಿದ್ದು ಹಣೆಗೆ ಸಣ್ಣಪುಟ್ಟ ಗಾಯಗಳಾಗಿವೆ.

ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ರಾಜೀವ್ ಚಂದ್ರಶೇಖರ್, ಟ್ರೆಡ್ ಮಿಲ್ ನಲ್ಲಿ ಎಚ್ಚರಿಕೆಯಿಂದ ಮೊಬೈಲ್ ಬಳಸಿ ಎಂದು ತಿಳಿಸಿದ್ದಾರೆ. ನೀವು ಟ್ರೆಡ್ ಮಿಲ್ ನಲ್ಲಿ ಫೋನ್ ನಲ್ಲಿ ಮಾತಾಡಲು ಪ್ರಯತ್ನಿಸಿದರೆ ಅಥವಾ ಅಜಾಗರೂಕರಾಗಿದ್ದರೆ ಜಾರಿ ಬಿದ್ದು ಮುಖ ಒಡೆದುಕೊಳ್ಳುವ ಅಥವಾ ಗಾಯಗೊಳ್ಳುವ ಸಾಧ್ಯತೆ ಇದೆ. ನನಗೆ ಮುಜುಗರವಾಗುವಂತಹ ನೋವು ಮತ್ತು ಗಾಯದ ಗುರುತುಗಳಾಗಿವೆ ಎಂದು ತಿಳಿಸಿದ್ದಾರೆ.

ಈ ಘಟನೆ ಎಲ್ಲಿ ಸಂಭವಿಸಿತು ಎಂದು ಚಂದ್ರಶೇಖರ್ ಉಲ್ಲೇಖಿಸಿಲ್ಲ. ಆದಾಗ್ಯೂ, ಹಂಚಿಕೊಂಡ ಚಿತ್ರಗಳಲ್ಲಿ ಅವರ ಹಣೆ ಮತ್ತು ಮುಖಕ್ಕೆ ಸಣ್ಣಪುಟ್ಟ ಗಾಯಗಳು ಕಂಡುಬಂದಿವೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular