HomeLatest Newsಗೀಸರ್‌'ನಿಂದ ನೀರು ಬರ್ತಿಲ್ಲಾಂತ ಟೆಕ್ನಿಷಿಯನ್ ಕರೆಸಿದ ಮಾಲೀಕ ; ಒಳಗೆ ಕಂಡ ದೃಶ್ಯ ನೋಡಿ ಇಬ್ಬರೂ...

ಗೀಸರ್‌’ನಿಂದ ನೀರು ಬರ್ತಿಲ್ಲಾಂತ ಟೆಕ್ನಿಷಿಯನ್ ಕರೆಸಿದ ಮಾಲೀಕ ; ಒಳಗೆ ಕಂಡ ದೃಶ್ಯ ನೋಡಿ ಇಬ್ಬರೂ ಶಾಕ್ |WATCH VIDEO

ಇತ್ತೀಚೆಗೆ ಗೀಸರ್‌ನಿಂದ ನೀರು ಸರಿಯಾಗಿ ಬರುತ್ತಿಲ್ಲ ಮತ್ತು ನೀರು ಬಿಸಿಯಾಗಲು ತುಂಬಾ ಸಮಯ ತೆಗೆದುಕೊಳ್ಳುತ್ತಿದೆ ಎಂಬ ದೂರು ಟೆಕ್ನಿಷಿಯನ್ ಒಬ್ಬರಿಗೆ ಬಂದಿತ್ತು. ಗ್ರಾಹಕರು ನೀಡಿದ ಮಾಹಿತಿ ಪ್ರಕಾರ, ಈ ಗೀಸರ್ ಖರೀದಿಸಿ ಐದು ವರ್ಷಗಳಾಗಿದ್ದರೂ ಈವರೆಗೆ ಒಮ್ಮೆಯೂ ಸರ್ವಿಸ್ ಮಾಡಿಸಿರಲಿಲ್ಲ.

ಹೌದು. ಗೀಸರ್‌ನಿಂದ ನೀರು ಸರಿಯಾಗಿ ಬರುತ್ತಿಲ್ಲ ಮತ್ತು ಬಿಸಿಯಾಗಲು ದೀರ್ಘ ಸಮಯ ತೆಗೆದುಕೊಳ್ಳುತ್ತಿದೆ ಎಂಬ ದೂರು ನೀಡಿ ಟೆಕ್ನಿಷಿಯನ್ ಕರೆಸಿದ ಗ್ರಾಹಕನಿಗೆ ಶಾಕಿಂಗ್ ದೃಶ್ಯವೊಂದು ಎದುರಾಗಿದೆ. ಐದು ವರ್ಷಗಳಿಂದ ಸರ್ವಿಸ್ ಮಾಡಿಸದಿದ್ದ ಕಾರಣ, 15 ಲೀಟರ್ ಸಾಮರ್ಥ್ಯದ ಗೀಸರ್ ಟ್ಯಾಂಕ್‌ನಲ್ಲಿ ಬರೋಬ್ಬರಿ 3 ಕೆಜಿಯಷ್ಟು ಉಪ್ಪಿನ ಕಸ (Scale) ಸಂಗ್ರಹವಾಗಿರುವುದು ಪತ್ತೆಯಾಗಿದೆ. ನೀರಿನಲ್ಲಿನ ಅಧಿಕ ಲವಣಾಂಶದಿಂದ ಉಂಟಾಗುವ ಈ ಕಸವು ಗೀಸರ್ ಕಾರ್ಯಕ್ಷಮತೆ ಕುಂದಿಸುವುದಲ್ಲದೆ ಚರ್ಮದ ಅಲರ್ಜಿಯಂತಹ ಆರೋಗ್ಯ ಸಮಸ್ಯೆಗಳಿಗೂ ಕಾರಣವಾಗಬಹುದು ಎಂದು ತಜ್ಞರು ಎಚ್ಚರಿಸಿದ್ದು, ಪ್ರತಿ ಎರಡು ವರ್ಷಕ್ಕೊಮ್ಮೆ ಕಡ್ಡಾಯವಾಗಿ ಗೀಸರ್ ಕ್ಲೀನಿಂಗ್ ಮಾಡಿಸುವಂತೆ ಸಲಹೆ ನೀಡಿದ್ದಾರೆ.

ಗೀಸರ್ ಒಳಗೆ ಕಂಡಿದ್ದೇನು ? ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದಾಗ ನೀರು ಬಿಸಿಯಾಗುತ್ತಿದ್ದರೂ, ಅದರ ವೇಗ ಅತ್ಯಂತ ಕಡಿಮೆಯಿತ್ತು. 15 ಲೀಟರ್ ಸಾಮರ್ಥ್ಯದ ಗೀಸರ್ ಟ್ಯಾಂಕ್ ಅನ್ನು ಬಿಚ್ಚಿ ನೋಡಿದಾಗ, ಅದರಲ್ಲಿ ಅರ್ಧಕ್ಕಿಂತ ಹೆಚ್ಚು ಕಸ (Dust/Scale) ತುಂಬಿರುವುದು ಕಂಡುಬಂತು. ಈ ಭಾಗದಲ್ಲಿ ಬಳಸುವ ನೀರಿನಲ್ಲಿ ಲವಣಾಂಶ (Salt content) ಹೆಚ್ಚಿರುವುದೇ ಇದಕ್ಕೆ ಪ್ರಮುಖ ಕಾರಣ. ನೀರಿನಲ್ಲಿ ಖನಿಜಾಂಶಗಳು ಹೆಚ್ಚಿದ್ದಾಗ, ನೀರು ಬಿಸಿಯಾದಂತೆಲ್ಲಾ ಟ್ಯಾಂಕ್ ಮತ್ತು ಪೈಪುಗಳ ಒಳಭಾಗದಲ್ಲಿ ಸುಣ್ಣದ ಪದರ (Scale) ನಿರ್ಮಾಣವಾಗುತ್ತದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಉಂಟಾಗುವ ಸಮಸ್ಯೆಗಳು : ಈ ಪದರವು ಟ್ಯಾಂಕ್‌ನ ಜಾಗವನ್ನು ಆಕ್ರಮಿಸುವುದಲ್ಲದೆ, ಇನ್ಲೆಟ್ ಮತ್ತು ಔಟ್ಲೆಟ್ ಪೈಪುಗಳನ್ನು ಬ್ಲಾಕ್ ಮಾಡುತ್ತದೆ. ಇದರಿಂದ ನೀರಿನ ಹರಿವು ಕಡಿಮೆಯಾಗುತ್ತದೆ ಮತ್ತು ನೀರು ಬಿಸಿಯಾಗಲು ಹೆಚ್ಚಿನ ವಿದ್ಯುತ್ ವ್ಯಯವಾಗುತ್ತದೆ. ಕೇವಲ ಕಾರ್ಯಕ್ಷಮತೆಯಷ್ಟೇ ಅಲ್ಲದೆ, ಈ ಕಸವು ಬ್ಯಾಕ್ಟೀರಿಯಾಗಳ ಬೆಳವಣಿಗೆಗೆ ಕಾರಣವಾಗಿ ಚರ್ಮದ ಅಲರ್ಜಿಯಂತಹ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡಬಹುದು.

ತಜ್ಞರ ಸಲಹೆ: ಎಲೆಕ್ಟ್ರಿಕ್ ಗೀಸರ್ ಬಳಸುವವರು ಕನಿಷ್ಠ ಎರಡು ವರ್ಷಕ್ಕೊಮ್ಮೆಯಾದರೂ ಕಡ್ಡಾಯವಾಗಿ ಕ್ಲೀನಿಂಗ್ ಮಾಡಿಸಬೇಕು ಎಂದು ತಜ್ಞರು ಸಲಹೆ ನೀಡುತ್ತಾರೆ. ಈ ನಿರ್ದಿಷ್ಟ ಗೀಸರ್‌ನಿಂದ ಸುಮಾರು 2 ರಿಂದ 3 ಕೆಜಿಯಷ್ಟು ಘನ ತ್ಯಾಜ್ಯವನ್ನು ಹೊರತೆಗೆಯಲಾಗಿದೆ.

ಕ್ರೋಂಪ್ಟನ್ ಗೀಸರ್ ಗುಣಮಟ್ಟ : ಈ ಗೀಸರ್ 15 ಲೀಟರ್ ಸಾಮರ್ಥ್ಯದ ಗ್ಲಾಸ್ ಲೈನ್ ಕೋಟಿಂಗ್ ಹೊಂದಿತ್ತು. ಐದು ವರ್ಷಗಳ ಕಾಲ ಇಷ್ಟೊಂದು ಕಸ ತುಂಬಿದ್ದರೂ, ಅದರ ಹೀಟಿಂಗ್ ಎಲಿಮೆಂಟ್ (Heating element) ಯಾವುದೇ ಹಾನಿಗೊಳಗಾಗಿರಲಿಲ್ಲ. ಇದು ಕ್ರೋಂಪ್ಟನ್ ಗೀಸರ್‌ಗಳ ಗುಣಮಟ್ಟವನ್ನು ಸಾಬೀತುಪಡಿಸಿದೆ. ಹೀಗಾಗಿ, ಹಳೆಯ ಹೀಟಿಂಗ್ ಎಲಿಮೆಂಟ್ ಅನ್ನೇ ಸ್ವಚ್ಛಗೊಳಿಸಿ ಮತ್ತೆ ಅಳವಡಿಸಲಾಯಿತು ಹಾಗೂ ಹಳೆಯ ಪೈಪುಗಳ ಬದಲಿಗೆ ಹೊಸ ಪೈಪುಗಳನ್ನು ಹಾಕಲಾಯಿತು. ಸರಿಯಾದ ಸಮಯಕ್ಕೆ ನಿರ್ವಹಣೆ ಮಾಡುವುದರಿಂದ ಗೀಸರ್‌ನ ಜೀವಿತಾವಧಿ ಹೆಚ್ಚುವುದಲ್ಲದೆ, ನಿಮ್ಮ ಆರೋಗ್ಯವೂ ಸುಕ್ಷೇಮವಾಗಿರುತ್ತದೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular