ಸಂಸತ್ ನಲ್ಲಿ ಪ್ಯಾಲೇಸ್ತೀನ್ ಪರ ಘೋಷಣೆ ಕೂಗಿದ ಓವೈಸಿ ಸದಸ್ಯತ್ವ ರದ್ದುಪಡಿಸಲು ಸಿ.ಟಿ. ರವಿ ಆಗ್ರಹ

ಕಲಬುರಗಿ: ಎಐಎಂಐಎಂ ನಾಯಕ ಅಸಾದುದ್ದೀನ್ ಓವೈಸಿ ಸಂಸತ್ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸುವಾಗ ಜೈ ಪ್ಯಾಲೇಸ್ತೀನ್ ಎಂದು ಘೋಷಣೆ ಕೂಗಿದ್ದಕ್ಕೆ ಬಿಜೆಪಿ ನಾಯಕ ಸಿ.ಟಿ. ರವಿ ವಾಗ್ದಾಳಿ ನಡೆಸಿದ್ದಾರೆ.

ಸಂವಿಧಾನ ಶಿಲ್ಪಿ ಡಾ. ಅಂಬೇಡ್ಕರ್ ಭಾರತ ಬಲಗೊಳಿಸಲು ಸಂವಿಧಾನ ತಂದಿದ್ದಾರೆ. ಅಂಬೇಡ್ಕರ್ ವಿಚಾರಗಳಿಗೆ ಓವೈಸಿ ಅಪಮಾನ ಮಾಡಿದ್ದಾರೆ. ಓವೈಸಿ ಅವರ ಸಂಸತ್ ಸದಸ್ಯ ಸ್ಥಾನ ರದ್ದು ಮಾಡಬೇಕು ಎಂದು ಆಗ್ರಹಿಸಿದ್ದಾರೆ.

ಓವೈಸಿ ಪೂರ್ವಿಕರು ರಜಾಕಾರರ ಚಳವಳಿಯಲ್ಲಿದ್ದರು. ರಜಾಕಾರರ ಕಾಲದಲ್ಲಿ ಇವರೆಲ್ಲ ಜೈ ಪಾಕಿಸ್ತಾನ ಅಂತ ಕೂಗಿದವರು. ಇಸ್ಲಾಂ ರಾಷ್ಟ್ರ ನಿರ್ಮಾಣ ಆಗಬೇಕೆಂದು ಇಲ್ಲಿ ಹೋರಾಟ ಮಾಡಿದ್ದರು. ಅದೇ ರಕ್ತ ಈಗ ಪ್ಯಾಲೇಸ್ತೀನ್ ನಂತಹ ಘೋಷಣೆ ಕೂಗಿದೆ. ಹೊರಗೇ ಈಗಿರುವಾಗ ಮನಸ್ಸಿನಲ್ಲಿ ಇನ್ನೆಷ್ಟು ದೇಶ ವಿರೋಧಿ ಭಾವನೆ ಇರಬೇಕು ಎಂದು ಹೇಳಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read