ಅತಿಯಾಗಿ ಮಲಗುವುದು ಕೂಡ ಅಪಾಯಕಾರಿ; ಬರಬಹುದು ಇಂಥಾ ಗಂಭೀರ ಕಾಯಿಲೆ……! 

ನಮಗೆ ಪ್ರತಿನಿತ್ಯ ಕನಿಷ್ಠ 7-8 ಗಂಟೆಗಳ ನಿದ್ದೆ ಅತ್ಯಂತ ಅವಶ್ಯಕ. ಇದಕ್ಕಿಂತ ಕಡಿಮೆ ನಿದ್ದೆ ಮಾಡಿದ್ರೆ ಒಳ್ಳೆಯದಲ್ಲ. ಹಾಗಂತ ಇದಕ್ಕಿಂತ ಜಾಸ್ತಿ ನಿದ್ದೆ ಮಾಡೋದು ಕೂಡ ಅಪಾಯಕಾರಿ. ಅತಿಯಾದ ನಿದ್ದೆ ಕೆಲವೊಂದು ರೋಗಗಳಿಗೆ ಆಹ್ವಾನ ಕೊಡುತ್ತದೆ. ಹೆಚ್ಚು ನಿದ್ರೆ ಮಾಡುವುದರಿಂದ ತೂಕ ಹೆಚ್ಚಾಗುವುದು, ಅತಿಯಾದ ಒತ್ತಡ ಸೇರಿದಂತೆ ಹಲವು ಸಮಸ್ಯೆಗಳಾಗುತ್ತವೆ.

24 ಗಂಟೆಗಳಲ್ಲಿ ಕನಿಷ್ಠ 12 ರಿಂದ 15 ಗಂಟೆಗಳ ನಿದ್ದೆ ಮಾಡುವವರು ಈ ಅಭ್ಯಾಸ ಬಿಡಬೇಕು. ಅತಿಯಾಗಿ ನಿದ್ದೆ ಮಾಡುವುದರಿಂದ ನಿಮ್ಮ ತೂಕ  ಹೆಚ್ಚಾಗುತ್ತದೆ. ನೀವು ಮಲಗಿದಾಗ ದೇಹವು ಕ್ಯಾಲೊರಿಗಳನ್ನು ಬರ್ನ್‌ ಮಾಡುತ್ತದೆ. ಈ ಸಮಯದಲ್ಲಿ ದೇಹವು ಯಾವುದೇ ದೈಹಿಕ ಕೆಲಸವನ್ನು ಮಾಡುವುದಿಲ್ಲ. ಇದರಿಂದ ತೂಕ ಹೆಚ್ಚಾಗುವ ಸಾಧ್ಯತೆ ಇರುತ್ತದೆ.

ಅತಿಯಾಗಿ ನಿದ್ರಿಸಿದ್ರೆ ಮೆದುಳು ಕೂಡ ಹೆಚ್ಚು ಕೆಲಸ ಮಾಡುವುದಿಲ್ಲ. ಇದರಿಂದ ಉದ್ವೇಗ ಹೆಚ್ಚಾಗಬಹುದು. ವಿಶೇಷವಾಗಿ ಹಗಲಿನಲ್ಲಿ ಜಾಸ್ತಿ ನಿದ್ದೆ ಮಾಡುವುದು ಆರೋಗ್ಯಕ್ಕೆ ಅಪಾಯಕಾರಿ.ಅಗತ್ಯಕ್ಕಿಂತ ಅಧಿಕ ಸಮಯ ನಿದ್ದೆ ಮಾಡುವುದರಿಂದ ಸಕ್ಕರೆ ಕಾಯಿಲೆ ಬರಬಹುದು. ಜೊತೆಗೆ ಹೃದಯಾಘಾತದ ಅಪಾಯ ಕೂಡ ಹೆಚ್ಚಾಗುತ್ತದೆ. ಅಷ್ಟೇ ಅಲ್ಲ ಮಲಬದ್ಧತೆಯ ಸಮಸ್ಯೆಯೂ ನಿಮ್ಮನ್ನು ಕಾಡುತ್ತದೆ. ದೀರ್ಘ ಸಮಯದವರೆಗೆ ಮಲಗಿಯೇ ಇರುವುದರಿಂದ ಬೆನ್ನು ನೋವು ಕೂಡ ಪ್ರಾರಂಭವಾಗುತ್ತದೆ. ಹಾಗಾಗಿ ಅತಿಯಾಗಿ ಮಲಗುವ ಅಭ್ಯಾಸವಿದ್ದರೆ ಬಿಟ್ಟುಬಿಡಿ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read