31 ಲಕ್ಷ ವಿದ್ಯಾರ್ಥಿಗಳು, 5 ಲಕ್ಷ ಶಿಕ್ಷಕರು, 2 ಲಕ್ಷ ಪೋಷಕರೊಂದಿಗೆ ಮೋದಿ ಪರೀಕ್ಷಾ ಪೇ ಚರ್ಚಾ

ನವದೆಹಲಿ: ಈ ತಿಂಗಳ 27 ರಂದು 6 ನೇ ಆವೃತ್ತಿಯ ಪರೀಕ್ಷಾ ಪೇ ಚರ್ಚಾದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪೋಷಕರೊಂದಿಗೆ ಸಂವಾದ ನಡೆಸಲಿದ್ದಾರೆ.

ಕಾರ್ಯಕ್ರಮವು ನವದೆಹಲಿಯ ಟಾಲ್ಕಟೋರಾ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯಲಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷದ ಪರೀಕ್ಷಾ ಪೇ ಚರ್ಚಾ ನೋಂದಣಿಗಳು ದುಪ್ಪಟ್ಟಾಗಿದೆ ಎಂದು ಶಿಕ್ಷಣ ಸಚಿವಾಲಯ ತಿಳಿಸಿದೆ.

ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪೋಷಕರು ರಾಜ್ಯ ಮಂಡಳಿಗಳು, CBSE, ಕೇಂದ್ರೀಯ ವಿದ್ಯಾಲಯ ಸಂಘಟನೆ, ನವೋದಯ ವಿದ್ಯಾಲಯ ಸಮಿತಿ ಮತ್ತು ಇತರ ಮಂಡಳಿಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಉತ್ಸಾಹದಿಂದ ಭಾಗವಹಿಸಿದ್ದಾರೆ. 31 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು, 5 ಲಕ್ಷಕ್ಕೂ ಹೆಚ್ಚು ಶಿಕ್ಷಕರು ಮತ್ತು ಸುಮಾರು 2 ಲಕ್ಷ ಪೋಷಕರು ಪರೀಕ್ಷಾ ಪರ್ ಚರ್ಚಾಗೆ ನೋಂದಾಯಿಸಿಕೊಂಡಿದ್ದಾರೆ ಎಂದು ಸಚಿವಾಲಯ ತಿಳಿಸಿದೆ.

150 ದೇಶಗಳ ವಿದ್ಯಾರ್ಥಿಗಳು, 51 ದೇಶಗಳ ಶಿಕ್ಷಕರು ಮತ್ತು 50 ದೇಶಗಳ ಪೋಷಕರು ಸಹ ಕಾರ್ಯಕ್ರಮಕ್ಕೆ ನೋಂದಾಯಿಸಿಕೊಂಡಿದ್ದಾರೆ.

ಭಾಗವಹಿಸುವವರನ್ನು ಆಯ್ಕೆ ಮಾಡಲು 2022 ರ ನವೆಂಬರ್ 25 ಮತ್ತು ಡಿಸೆಂಬರ್ 30 ರ ನಡುವೆ ವಿವಿಧ ವಿಷಯಗಳ ಕುರಿತು ಆನ್‌ಲೈನ್ ಸೃಜನಶೀಲ ಬರವಣಿಗೆ ಸ್ಪರ್ಧೆಯನ್ನು ನಡೆಸಲಾಯಿತು.

ಪ್ರಧಾನಮಂತ್ರಿಯವರು ವಿಶಿಷ್ಟವಾದ ಸಂವಾದಾತ್ಮಕ ಕಾರ್ಯಕ್ರಮದ ಪರಿಕಲ್ಪನೆ ರೂಪಿಸಿದ್ದು, ವಿದ್ಯಾರ್ಥಿಗಳು, ಪೋಷಕರು ಮತ್ತು ಶಿಕ್ಷಕರು ಸಂವಹನ ನಡೆಸುತ್ತಾರೆ. ಪರೀಕ್ಷೆ ಒತ್ತಡವನ್ನು ಹೇಗೆ ಜಯಿಸುವುದು ಎಂಬುದರ ಕುರಿತು ಚರ್ಚಿಸುತ್ತಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read