HomeIndiaಪಿಎಂ ಸೂರ್ಯ ಘರ್ ಯೋಜನೆಯಡಿ ರಾಜ್ಯದಲ್ಲಿ 22,500ಕ್ಕೂ ಹೆಚ್ಚು ಮೇಲ್ಛಾವಣಿ ಸೌರ ಫಲಕ

ಪಿಎಂ ಸೂರ್ಯ ಘರ್ ಯೋಜನೆಯಡಿ ರಾಜ್ಯದಲ್ಲಿ 22,500ಕ್ಕೂ ಹೆಚ್ಚು ಮೇಲ್ಛಾವಣಿ ಸೌರ ಫಲಕ

ನವದೆಹಲಿ: ಪಿಎಂ ಸೂರ್ಯ ಘರ್ ಯೋಜನೆಯಡಿ ದೇಶಾದ್ಯಂತ 47.64 ಲಕ್ಷಕ್ಕೂ ಹೆಚ್ಚು ಮನೆಗಳಿಗೆ ಪ್ರಯೋಜನ ತಲುಪಿದೆ ಎಂದ ಕೇಂದ್ರ ಸರ್ಕಾರ ತಿಳಿಸಿದೆ.

20 ಜುಲೈ 2026ರವರೆಗೆ ಕರ್ನಾಟಕದಲ್ಲಿ 22,500ಕ್ಕೂ ಹೆಚ್ಚು ಮೇಲ್ಛಾವಣಿ ಸೌರ ಫಲಕ ಸ್ಥಾಪನೆಗೊಂಡಿವೆ ಎಂದು ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯ ಮಾಹಿತಿ ನೀಡಿದೆ.

ಲೋಕಸಭೆಯಲ್ಲಿ ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ ಪ್ರಸ್ತಾಪಿಸಿದ ಪ್ರಶ್ನೆಗೆ ಉತ್ತರಿಸಿರುವ, ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯವು, ಪ್ರಧಾನ ಮಂತ್ರಿ ಸೂರ್ಯ ಘರ್ – ಉಚಿತ ವಿದ್ಯುತ್ ಯೋಜನೆಯು 39,38,805 ಮೇಲ್ಛಾವಣಿ ಸೌರ (ಆರ್‌ಟಿಎಸ್) ಸ್ಥಾಪನೆಗಳ ಮೂಲಕ ದೇಶಾದ್ಯಂತ 47,64,657 ಮನೆಗಳಿಗೆ ಪ್ರಯೋಜನವಾಗಿದೆ ಎಂದು ಹೇಳಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

2026-27ರ ಹಣಕಾಸು ವರ್ಷದ ವೇಳೆಗೆ ಒಂದು ಕೋಟಿ ಮನೆಗಳನ್ನು ಒಳಗೊಳ್ಳುವ ಗುರಿಯನ್ನು ಹೊಂದಿರುವ ಈ ಯೋಜನೆಯಡಿಯಲ್ಲಿ, ಕೇಂದ್ರ ಹಣಕಾಸು ನೆರವು (ಸಿಎಫ್‌ಎ) 27,323.55 ಕೋಟಿ ರೂ.ಗಳನ್ನು ಫಲಾನುಭವಿಗಳಿಗೆ ಕೇಂದ್ರ ಸರ್ಕಾರ ವಿತರಿಸಿದೆ.

ಈ ಯೋಜನೆಯಡಿ ಕರ್ನಾಟಕದಲ್ಲಿ 60,973 ಅರ್ಜಿ ಸಲ್ಲಿಕೆಯಾಗಿದ್ದು, ಇದರಲ್ಲಿ 22,519 ಮೇಲ್ಛಾವಣಿ ಸೌರಶಕ್ತಿ ಸ್ಥಾಪನೆಗಳು 34,180 ಮನೆಗಳಿಗೆ ಪ್ರಯೋಜನವನ್ನು ನೀಡಿವೆ ಮತ್ತು ಒಟ್ಟು 91.64 ಮೆಗಾವ್ಯಾಟ್ ಮೇಲ್ಛಾವಣಿ ಸೌರಶಕ್ತಿಯನ್ನು ಅಳವಡಿಸಲಾಗಿದೆ. ಕೇಂದ್ರ ಹಣಕಾಸು ನೆರವಿನ ರೂಪದಲ್ಲಿ 163.44 ಕೋಟಿ  ರೂ.ಗಳನ್ನು ರಾಜ್ಯದಲ್ಲಿ ಫಲಾನುಭವಿಗಳು ಪಡೆದಿದ್ದಾರೆ ಎಂದು ಮಾಹಿತಿ ನೀಡಿದೆ.

ರಾಜ್ಯದಲ್ಲಿ ಜಿಲ್ಲೆಗಳ ಪೈಕಿ, ಬೆಂಗಳೂರು ನಗರವು 8,151 ಸ್ಥಾಪನೆಗಳೊಂದಿಗೆ ಮೊದಲ ಸ್ಥಾನದಲ್ಲಿದ್ದು, ದಕ್ಷಿಣ ಕನ್ನಡ (2,708) ಮತ್ತು ಮೈಸೂರು (1,819) ನಂತರದ ಸ್ಥಾನದಲ್ಲಿವೆ. ಗ್ರಾಮೀಣ ಮೇಲ್ಛಾವಣಿ ಸೌರಶಕ್ತಿ ಅಳವಡಿಕೆಯನ್ನು ವೇಗಗೊಳಿಸಲು, ಸಚಿವಾಲಯವು ಕರ್ನಾಟಕದಾದ್ಯಂತ 12 ಜಿಲ್ಲೆಗಳಲ್ಲಿ 12 ಮಾದರಿ ಸೌರಶಕ್ತಿ ಗ್ರಾಮಗಳನ್ನು ಘೋಷಿಸಿದ್ದು, ರಾಜ್ಯದ ಮಾದರಿ ಸೌರ ಗ್ರಾಮ ಅನುಷ್ಠಾನ ಸಂಸ್ಥೆಗೆ ಸೇವಾ ಶುಲ್ಕವಾಗಿ 20 ಲಕ್ಷ ರೂ.ಗಳನ್ನು ಮಂಜೂರು ಮಾಡಲಾಗಿದೆ ಎಂದಿದೆ.

“ಪ್ರಧಾನಮಂತ್ರಿ ಸೂರ್ಯ ಘರ್ – ಉಚಿತ ವಿದ್ಯುತ್ ಯೋಜನೆಯು ಆದರಣೀಯ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಜೀ ರವರ ಶುದ್ಧ ಇಂಧನವನ್ನು ಕೈಗೆಟುಕುವಂತೆ ಮತ್ತು ಪ್ರತಿ ಮನೆಗೂ ತಲುಪಿಸುವಂತೆ ಮಾಡುವ ದೃಷ್ಟಿಕೋನವನ್ನು ಪ್ರತಿಬಿಂಬಿಸುತ್ತದೆ” ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದ್ದಾರೆ. ಈ ಯೋಜನೆಯು ಭಾರತದ ಶುದ್ಧ ಇಂಧನ ಭವಿಷ್ಯವನ್ನು ಬಲಪಡಿಸುವುದರ ಜೊತೆಗೆ ಕುಟುಂಬಗಳಿಗೆ ವಿದ್ಯುತ್ ಬಿಲ್‌ಗಳ ಆರ್ಥಿಕ ಹೊರೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ಸಂಸದರು ತಿಳಿಸಿದ್ದಾರೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

Most Popular