HomeKarnatakaಹಳೆ ಪಿಂಚಣಿ ಯೋಜನೆ ನಿರೀಕ್ಷೆಯಲ್ಲಿದ್ದವರಿಗೆ ಗುಡ್ ನ್ಯೂಸ್: ನೇಮಕಾತಿ ಆದೇಶದ ಮೇಲೆ ಒಪಿಎಸ್

ಹಳೆ ಪಿಂಚಣಿ ಯೋಜನೆ ನಿರೀಕ್ಷೆಯಲ್ಲಿದ್ದವರಿಗೆ ಗುಡ್ ನ್ಯೂಸ್: ನೇಮಕಾತಿ ಆದೇಶದ ಮೇಲೆ ಒಪಿಎಸ್

ಬೆಂಗಳೂರು: ನೇಮಕಾತಿ ಆದೇಶದ ಮೇಲೆ ಹಳೆ ಪಿಂಚಣಿ ಯೋಜನೆ ಕಲ್ಪಿಸಲು ಪರಿಶೀಲಿಸುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ವಿಧಾನ ಪರಿಷತ್ ನಲ್ಲಿ ಪ್ರಶ್ನೋತ್ತರ ಕಲಾಪದ ವೇಳೆ ಬಿಜೆಪಿ ಸದಸ್ಯ ಆಯನೂರು ಮಂಜುನಾಥ್ ಅವರ ಪ್ರಶ್ನೆಗೆ ಮುಖ್ಯಮಂತ್ರಿಗಳು ಉತ್ತರ ನೀಡಿ, 2006ರಲ್ಲಿ ನೇಮಕಾತಿ ಆದೇಶ ಪಡೆದು ಕೆಲಸಕ್ಕೆ ವಿಳಂಬವಾಗಿ ಸೇರ್ಪಡೆಯಾದ ಸಿಬ್ಬಂದಿಗೆ ಹಳೆ ಪಿಂಚಣಿ ಯೋಜನೆ ಕಲ್ಪಿಸಲು ಪರಿಶೀಲಿಸಲಾಗುವುದು ಎಂದು ಹೇಳಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

2006 ರಲ್ಲಿ ನೇಮಕಾತಿ ಆದೇಶ ಪಡೆದ ನಂತರ ಅನೇಕರು ವಿಳಂಬವಾಗಿ ಕೆಲಸಕ್ಕೆ ಸೇರಿದ್ದು, ಅಂತಹ ಸಿಬ್ಬಂದಿಗೆ ಹಳೆ ಪಿಂಚಣಿ ಯೋಜನೆ ಸೌಲಭ್ಯ ಕಲ್ಪಿಸಲು ಕ್ರಮಕೈಗೊಳ್ಳಲಾಗುವುದು. ಅನುದಾನಿತ ಶಾಲಾ ಕಾಲೇಜು ಆಡಳಿತ ಮಂಡಳಿಗಳು ಸಹ ಸಿಬ್ಬಂದಿಗೆ ಸೌಲಭ್ಯ ನೀಡುವುದನ್ನು ಕಡ್ಡಾಯ ಮಾಡುವುದಾಗಿ ತಿಳಿಸಿದ್ದಾರೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular