HomeKarnatakaBIG NEWS: ಆಪರೇಷನ್ ಆಗುವ ಪ್ರಶ್ನೆಯೇ ಇಲ್ಲ; ಕ್ಯಾನ್ಸರೂ ಆಗಿಲ್ಲ, ಗಡ್ಡೆಯೂ ಆಗಿಲ್ಲ ಎಂದ ಬಿಜೆಪಿ...

BIG NEWS: ಆಪರೇಷನ್ ಆಗುವ ಪ್ರಶ್ನೆಯೇ ಇಲ್ಲ; ಕ್ಯಾನ್ಸರೂ ಆಗಿಲ್ಲ, ಗಡ್ಡೆಯೂ ಆಗಿಲ್ಲ ಎಂದ ಬಿಜೆಪಿ ಮಾಜಿ ಶಾಸಕ ರಾಜು ಗೌಡ

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ‘ಆಪರೇಷನ್ ಹಸ್ತ’ ಚರ್ಚೆ ಜೋರಾಗಿದ್ದು, ಈ ನಡುವೆ ಬಿಜೆಪಿಯ ಶಾಸಕರಾದ ಬಿ.ಸಿ.ಪಾಟೀಲ್, ರಾಜು ಗೌಡ ಡಿಸಿಎಂ ಡಿ.ಕೆ.ಶಿವಕುಮಾರ್ ಭೇಟಿಯಾಗಿ ಚರ್ಚಿಸಿರುವುದು ಇನ್ನಿಬ್ಬರು ಬಿಜೆಪಿ ಶಾಸಕರು ಕಾಂಗ್ರೆಸ್ ನತ್ತ ಮುಖ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.

ಖಾಸಗಿ ಹೋಟೆಲ್ ನಲ್ಲಿ ನಟ ಕಿಚ್ಚ ಸುದೀಪ್ ಹುಟ್ಟುಹಬ್ಬದ ಪಾರ್ಟಿಯಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್, ಬಿಜೆಪಿ ಶಾಸಕರಾದ ಬಿ.ಸಿ.ಪಾಟೀಲ್, ರಾಜು ಗೌಡ ಭಾಗಿಯಾಗಿದ್ದರು. ಈ ವೇಳೆ ಡಿ.ಕೆ.ಶಿವಕುಮಾರ್ ಜೊತೆ ಬಿ.ಸಿ.ಪಾಟೀಲ್, ರಾಜು ಗೌಡ ಮಹತ್ವದ ಚರ್ಚೆ ನಡೆಸಿದ್ದು ರಾಜ್ಯ ರಾಜಕಾರಣದಲ್ಲಿ ಮತ್ತಷ್ಟು ಕುತೂಹಲ ಮೂಡಿಸಿದೆ. ಎಸ್.ಟಿ.ಸೋಮಶೇಖರ್, ಶಿವರಾಮ್ ಹೆಬ್ಬಾರ್ ಬೆನ್ನಲ್ಲೇ ಬಿ.ಸಿ.ಪಾಟೀಲ್ ಹಾಗೂ ರಾಜು ಗೌಡ ಕೂಡ ಕಾಂಗ್ರೆಸ್ ನತ್ತ ಮುಖ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈ ಬೆಳವಣಿಗೆ ಬೆನ್ನಲ್ಲೇ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಶಾಸಕ ರಾಜು ಗೌಡ, ಆಪರೇಷನ್ ಹಸ್ತವೂ ಇಲ್ಲ ಏನೂ ಇಲ್ಲ. ಸುದೀಪಣ್ಣನ ಹುಟ್ಟುಹಬ್ಬ ಇತ್ತು ಹಾಗಾಗಿ ಖಾಸಗಿ ಹೋಟೆಲ್ ನಲ್ಲಿ ಜನ್ಮದಿನಾಚರಣೆಯಲ್ಲಿ ಎಲ್ಲರೂ ಭಾಗವಹಿಸಿದ್ದೆವು. ಆಪರೇಷನ್ ಆಗುವ ಪ್ರಶ್ನೆಯೇ ಇಲ್ಲ. ಆಪರೇಷನ್ ಆಗಲು ಕಾನ್ಸರೂ ಆಗಿಲ್ಲ, ಯಾವ ಗಡ್ಡೆಯೂ ಆಗಿಲ್ಲ ಎಂದು ಹೇಳಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular