ಬೆಂಗಳೂರು : ಆನ್ ಲೈನ್ ನಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಐವರು ಆರೋಪಿಗಳನ್ನ ಪೊಲೀಸರು ಬಂಧಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಬೆಂಗಳೂರಿನ ಆರ್ ಆರ್ ನಗರ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಆನ್ ಲೈನ್ ನಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಐವರು ಆರೋಪಿಗಳನ್ನ ಪೊಲೀಸರು ಲಾಕ್ ಮಾಡಿದ್ದಾರೆ.
ಬಂಧಿತರನ್ನು ಸುಮನಾ ಅಲಿಯಾಸ್ ಅಂಜಲಿ, ಹರ್ಷಿಣಿ ಅಲಿಯಾಸ್ ಸ್ವೀಟಿ, ಜಗದೀಶ್, ಮಂಜುನಾಥ್ ಮತ್ತು ಲೋಕೇಶ್ ಎಂದು ಗುರುತಿಸಲಾಗಿದೆ. ಸಾಪ್ಟ್ ವೇರ್ ಎಂಜಿನಿಯರ್ ಒಬ್ಬರು ನೀಡಿದ ದೂರಿನ ಮೇರೆಗೆ ಪೊಲೀಸರು ಆರೋಪಿಗಳನ್ನ ಬಂಧಿಸಿದ್ದಾರೆ.
ಡಿ.1 ರಂದು ಟೆಲಿಗ್ರಾಂ ನಲ್ಲಿ ಯುವಕನೋರ್ವ ಹುಡುಗಿಯನ್ನ ಬುಕ್ ಮಾಡಿದ್ದನು. ಆಕೆ ಕೊಟ್ಟ ವಿಳಾಸಕ್ಕೆ ಸಾಫ್ಟ್ ವೇರ್ ಎಂಜಿನಿಯರ್ ಹೋಗಿದ್ದನು. ಆದರೆ ಅಲ್ಲಿ ಯುವತಿ 20 ಸಾವಿರ ರೂ ಬೆಲೆಯ ಮೊಬೈಲ್ ಕಿತ್ತುಕೊಂಡ ಯುವತಿ 1 ಲಕ್ಷ ಹಣ ನೀಡುವಂತೆ ಬೆದರಿಕೆಯೊಡ್ಡಿದ್ದಳು. ಅಲ್ಲಿಗೆ ಬಂದ ಯುವಕನೋರ್ವ ಮೊಬೈಲ್ ವಾಪಸ್ ಕಿತ್ತುಕೊಂಡು ಪರಾರಿಯಾಗಿದ್ದನು.
ಡಿ.20 ರಂದು ಟೆಕ್ಕಿ ಮತ್ತೊಂದು ಹುಡುಗಿಯನ್ನ ಸಂಪರ್ಕಿಸಿದ್ದನು. ಹುಡುಗಿ ಹೇಳಿದಂತೆ ಆರ್ ಆರ್ ನಗರಕ್ಕೆ ಬಂದಿದ್ದನು. ಹಳೇ ಹುಡುಗಿ, ಹೊಸ ಹುಡುಗಿ ಜೊತೆ ಅಲ್ಲಿಗೆ ಬಂದ ದಾಂಡಿಗರು ಯುವಕನಿಂದ 20 ಸಾವಿರ ಹಣ ಕಸಿದು 1 ಲಕ್ಷ ಕೊಡುವಂತೆ ಹಲ್ಲೆ ನಡೆಸಿದ್ದಾರೆ. ಅಲ್ಲದೇ ಯುವಕನನ್ನ ಕಾರಿನಲ್ಲಿ ಅಪಹರಣ ಮಾಡಲು ಯತ್ನಿಸಿದ್ದಾರೆ. ಆದರೆ ಯುವಕ ಜೋರಾಗಿ ಕಿರುಚಿಕೊಂಡಿದ್ದಾನೆ. ಕೂಡಲೇ ಸ್ಥಳೀಯರು ಪೊಲೀಸರಿಗೆ (112) ಸುದ್ದಿ ಮುಟ್ಟಿಸುತ್ತಾರೆ. ಅಲ್ಲಿಗೆ ಬಂದ ಪೊಲೀಸರು ಯುವಕನನ್ನ ರಕ್ಷಣೆ ಮಾಡುತ್ತಾರೆ. ಈ ಸಂಬಂಧ ಕೇಸ್ ದಾಖಲಿಸಿಕೊಂಡ ಪೊಲೀಸರು ಆರೋಪಿಗಳನ್ನ ಬಂಧಿಸಿ ಜೈಲಿಗಟ್ಟಿದ್ದಾರೆ.

