HomeKarnatakaBIG NEWS: ಮುಂಬೈ ಕ್ರೈಂ ಬ್ರ್ಯಾಂಚ್ ಹೆಸರಲ್ಲಿ ವೈದ್ಯನಿಗೆ ವಂಚನೆ ಪ್ರಕರಣ: ಇಬ್ಬರು ಆರೋಪಿಗಳು ಅರೆಸ್ಟ್

BIG NEWS: ಮುಂಬೈ ಕ್ರೈಂ ಬ್ರ್ಯಾಂಚ್ ಹೆಸರಲ್ಲಿ ವೈದ್ಯನಿಗೆ ವಂಚನೆ ಪ್ರಕರಣ: ಇಬ್ಬರು ಆರೋಪಿಗಳು ಅರೆಸ್ಟ್

ಚಿತ್ರದುರ್ಗ: ಮುಂಬೈ ಪೊಲೀಸರ ಹೆಸರಿನಲ್ಲಿ ಚಿತ್ರದುರ್ಗದ ವೈದ್ಯರೊಬ್ಬರಿಗೆ ಕೋಟ್ಯಂತರ ರೂಪಾಯಿ ವಂಚಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.

ಚಿತ್ರದುರ್ಗದ ಸೆನ್ ಠಣೆ ಪೊಲಿಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದು, ಅಸ್ಸಾಂ ಮೂಲದ ಪವನ್ ಕುಮಾರ್ ಹಾಗೂ ಜಾಕೀರ್ ಬೊರಾ ಬಂಧಿತ ಆರೋಪಿಗಳು.

ವೈದ್ಯ ಶ್ರೀನಿವಾಸ್ ಶೆಟ್ಟಿ ಎಂಬುವವರಿಗೆ ವಾಟ್ಸಪ್ ಹಾಗೂ ನಾರ್ಮಲ್ ಕರೆ ಮಾಡಿದ್ದ ವಂಚಕರು, ಮುಂಬೈ ಕ್ರೈಂ ಬ್ರ್ಯಾಂಚ್ ಪೊಲೀಸರು ಎಂದು ಹೇಳಿ ನಿಮ್ಮ ಬ್ಯಾಂಕ್ ಖಾತೆ ಬಳಸಿ ಮನಿ ಲ್ಯಾಂಡರಿಂಗ್ ವಂಚನೆ ಆಗಿದೆ. ನಿಮ್ಮ ಖಾತೆಯ ಆಡಿಟ್ ಮಾಡಬೇಕಿದೆ ಎಂದು ಬ್ಯಾಂಕ್ ಖಾತೆ ಬಗ್ಗೆ ಮಾಹಿತಿಯನ್ನು ಪಡೆದು ವೈದನ ಖಾತೆಯಿಂದ ಹಂತ ಹಂತವಾಗಿ ಒಟ್ಟು 1.27 ಕೋಟಿ ಹಣ ವರ್ಗಾವಣೆ ಮಾಡಿಕೊಂಡು ವಂಚಿಸಿದ್ದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಹಣ ಡ್ರಾ ಆಗುತ್ತಿದ್ದಂತೆ ಕಂಗಾಲಾದ ವೈದ್ಯ ಶ್ರೀನಿವಾಸ್ ಶೆಟ್ಟಿ ಆಗಸ್ಟ್ 27ರಂದು ಚಿತ್ರದುರ್ಗದ ಸೆನ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣದ ತನಿಖೆ ನಡೆಸಿರುವ ಪೊಲೀಸರು ಸದ್ಯ ಅಸ್ಸಾಂ ಮೂಲದ ಇಬ್ಬರು ವಂಚಕರನ್ನು ಬಂಧಿಸಿದ್ದಾರೆ.

ವಂಚಕರಿಂದ ವಿವಿಧ ಖಾತೆಗಳಿಗೆ ವರ್ಗಾವಣೆಯಾಗಿದ್ದ 16.89 ಲಕ್ಷ ರೂಪಾಯಿ ಫ್ರೀಜ್ ಮಾಡಲಾಗಿದೆ.

For Latest News Updates, Join Our Whatsapp Community🚩
RELATED ARTICLES

Most Popular