HomeKarnatakaGOOD NEWS : ವಸತಿ ರಹಿತರಿಗೆ ಸಿಹಿಸುದ್ದಿ : ಆಶ್ರಯ ಯೋಜನೆಯಡಿ ಆನ್ ಲೈನ್ ಅರ್ಜಿ...

GOOD NEWS : ವಸತಿ ರಹಿತರಿಗೆ ಸಿಹಿಸುದ್ದಿ : ಆಶ್ರಯ ಯೋಜನೆಯಡಿ ಆನ್ ಲೈನ್ ಅರ್ಜಿ ಆಹ್ವಾನ

ಶಿವಮೊಗ್ಗ : ವಸತಿ ರಹಿತರಿಗೆ ಮಹಾನಗರ ಪಾಲಿಕೆ ಗುಡ್ ನ್ಯೂಸ್ ನೀಡಿದ್ದು, ಆಶ್ರಯ ಯೋಜನೆಯಡಿ (Online)  ಅರ್ಜಿ ಆಹ್ವಾನಿಸಲಾಗಿದೆ.

ಶಿವಮೊಗ್ಗ ಮಹಾನಗರ ಪಾಲಿಕೆಯು ನಗರದ ಗೋಪಿಶೆಟ್ಟಿಕೊಪ್ಪ ಗ್ರಾಮದ ಒಟ್ಟು 19.23 ಎಕರೆ ಜಮೀನಿನಲ್ಲಿ ಜಿ+2 ಮಾದರಿಯ ಮನೆಗಳನ್ನು ನಗರದ ನಿವೇಶನ ರಹಿತರಿಗೆ ಹಂಚುವ ಸಲುವಾಗಿ ಹೊಸದಾಗಿ ಅರ್ಹ ಅಭ್ಯರ್ಥಿಗಳಿಂದ ಆನ್ಲೈನ್ ಅರ್ಜಿ ಆಹ್ವಾನಿಸಿದೆ.

ಅರ್ಜಿದಾರರು ಶಿವಮೊಗ್ಗ ನಗರ ಪ್ರದೇಶದಲ್ಲಿ ವಾಸವಾಗಿದ್ದು, ಬಿ.ಪಿ.ಎಲ್/ಅಂತ್ಯೋದಯ ಪಡಿತರ ಚೀಟಿಯನ್ನು ಹೊಂದಿರಬೇಕು. ಅರ್ಜಿದಾರರು ಅಥವಾ ಅವರ ಕುಟುಂಬದವರು ಸ್ವಂತ ನಿವೇಶನ/ಮನೆಯನ್ನು ಹೊಂದಿರಬಾರದು. ಅರ್ಜಿಯನ್ನು ಮಹಿಳಾ ಫಲಾನುಭವಿಯ ಹೆಸರಿನಲ್ಲಿಯೇ ಸಲ್ಲಿಸುವುದು, ಪುರುಷ ಅಭ್ಯರ್ಥಿಯಾಗಿದ್ದಲ್ಲಿ ಮಾಜಿಸೈನಿಕ, ವಿಕಲಚೇತನ, ಸ್ವಾತಂತ್ರ್ಯ ಯೋಧ, ವಿಧುರ ಹಾಗೂ ಹಿರಿಯ ನಾಗರೀಕರಾಗಿರಬೇಕು. ಬೇರೆ ಯಾವುದೇ ಯೋಜನೆಯಡಿಯಲ್ಲಿ ನಿವೇಶನ/ವಸತಿ ಸೌಲಭ್ಯವನ್ನು ಪಡೆದಿರಬಾರದು ಹಾಗೂ ಈ ಹಿಂದೆ ಯಾವುದಾದರೂ ಯೋಜನೆಯಡಿಯಲ್ಲಿ ಅರ್ಜಿ ಸಲ್ಲಿಸಿದ್ದಲ್ಲಿ ವಿವರ ನೀಡುವುದು. ವಾರ್ಷಿಕ ರೂ. 86,700/-ಗಳಿಂದ ಆದಾಯ ಹೊಂದಿರಬೇಕು. ತೃತೀಯ ಲಿಂಗಿಗಳೂ ಸಹ ಅರ್ಜಿ ಸಲ್ಲಿಸಬಹುದು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಆಸಕ್ತರು ಪಾಲಿಕೆ ವೆಬ್ಸೈಟ್ shivamoggacitycorp.org ರ ‘ಆಶ್ರಯ ಯೋಜನೆ ಅಪ್ಲಿಕೇಷನ್’ ಮೆನುವಿನಲ್ಲಿ ಸೆಪ್ಟಂಬರ್ 30 ರೊಳಗಾಗಿ ಅರ್ಜಿ ಸಲ್ಲಿಸುವುದು. ಅಕ್ಟೋಬರ್ 07 ರೊಳಗಾಗಿ ಬ್ಯಾಂಕ್ ಮೂಲಕ ನಿಗದಿತ ಶುಲ್ಕವನ್ನು ಪಾವತಿಸುವಂತೆ ಶಿವಮೊಗ್ಗ ಮಹಾನಗರ ಪಾಲಿಕೆ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಹೆಚ್ಚಿನ ಸಲಹೆ/ಮಾಹಿತಿಗಾಗಿ ದೂ.ಸಂ.:08182-220799 ಹಾಗೂ ತಾಂತ್ರಿಕ ಸಲಹೆಗಾಗಿ ದೂ.ಸಂ.: 08182-268544/268545 ಗಳನ್ನು ಸಂಪರ್ಕಿಸುವುದು  ಎಂದು ಪ್ರಕಟಣೆ ತಿಳಿಸಿದೆ.

 

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular