ಉಡುಗೊರೆ ಲಕೋಟೆ ಮೇಲಿರುತ್ತೆ ಒಂದು ರೂಪಾಯಿಯ ನಾಣ್ಯ; ಜ್ಯೋತಿಷ್ಯದಲ್ಲಿ ಇದಕ್ಕೂ ಇದೆ ಮಹತ್ವ….!

ಶುಭ ಕಾರ್ಯದ ಸಂದರ್ಭದಲ್ಲಿ ಉಡುಗೊರೆಗಳನ್ನು ನೀಡುವುದು ಸಾಮಾನ್ಯ. ಕೆಲವರು ಹಣವನ್ನೇ ಕೊಡಲು ಬಯಸುತ್ತಾರೆ. ಇದನ್ನು ಶಗುನ್‌ ಎಂದು ಕರೆಯಲಾಗುತ್ತದೆ. ಈ ಶುಭ ಶಕುನಗಳನ್ನು ನೀಡುವ ಸಂಪ್ರದಾಯವು ಶತಮಾನಗಳ ಹಿಂದಿನದು. ಯಾರೊಬ್ಬರ ಮದುವೆ, ಮುಂಡನ ಅಥವಾ ಗೃಹಪ್ರವೇಶದ ಸಮಯದಲ್ಲಿ ಒಂದು ರೂಪಾಯಿ ನಾಣ್ಯವುಳ್ಳ  ಲಕೋಟೆಯಲ್ಲಿ ಹಣವಿಟ್ಟು ಕೊಡಲಾಗುತ್ತದೆ. ನಮ್ಮ ನಂಬಿಕೆಯ ಪ್ರಕಾರ 501, 1101, ಅಥವಾ 2101 ರೂಪಾಯಿಯನ್ನು ಕೊಡಬೇಕು.

ಆದರೆ ಲಕೋಟೆಯ ಮೇಲ್ಭಾಗದಲ್ಲಿ ಯಾವಾಗಲೂ ಒಂದು ರೂಪಾಯಿಯ ನಾಣ್ಯವನ್ನು ಅಂಟಿಸಲಾಗುತ್ತದೆ. 2 ಅಥವಾ 5 ರೂಪಾಯಿಯ ನಾಣ್ಯವನ್ನು ಏಕೆ ಬಳಸಬಾರದು ಎಂಬುದು ಅನೇಕರ ಪ್ರಶ್ನೆ. ಉಡುಗೊರೆಯಲ್ಲಿ ನಾವು ಎಷ್ಟೇ ಹಣವನ್ನು ಹಾಕಿದ್ದರೂ ಲಕೋಟೆಯ ಮೇಲಿರುವ ಒಂದು ರೂಪಾಯಿ ನಾಣ್ಯ ನೋಟಿನ ಸಂಖ್ಯೆಯನ್ನು ಅವಿಭಾಜ್ಯವಾಗಿಸುತ್ತದೆ. ಅಂದರೆ ಅದನ್ನು ಭಾಗಿಸಲಾಗುವುದಿಲ್ಲ. ಹಾಗಾಗಿಯೇ ಲಕೋಟೆಯ ಮೇಲೆ ಒಂದು ರೂಪಾಯಿಯನ್ನೇ ಅಂಟಿಸಲಾಗುತ್ತದೆ.

ಶಾಸ್ತ್ರಗಳ ಪ್ರಕಾರ ಲಕೋಟೆಯ ಮೇಲೆ ಒಂದು ರೂಪಾಯಿ ನಾಣ್ಯವನ್ನು ಇಡುವುದು ತುಂಬಾ ಮಂಗಳಕರವಾಗಿದೆ. ಹಿಂದೂ ಧರ್ಮದ ನಂಬಿಕೆಯ ಪ್ರಕಾರ ಮಾತೆ ಲಕ್ಷ್ಮಿಯನ್ನು ಲೋಹದ ರೂಪವೆಂದು ಪರಿಗಣಿಸಲಾಗುತ್ತದೆ. ಅದಕ್ಕಾಗಿಯೇ ಲಕೋಟೆಯಲ್ಲಿರುವ ಒಂದು ನಾಣ್ಯವನ್ನು ಲಕ್ಷ್ಮಿಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ಒಂದು ರೂಪಾಯಿ ನಾಣ್ಯವನ್ನು ಪ್ರಗತಿಯ ಸಂಕೇತವೆಂದು ಕೂಡ ಪರಿಗಣಿಸಲಾಗುತ್ತದೆ. ಒಂದು ರೂಪಾಯಿಯ ನಾಣ್ಯವನ್ನು ನೀಡುವುದರ ಅರ್ಥ ಆ ವ್ಯಕ್ತಿಯ ಆರ್ಥಿಕ ಪ್ರಗತಿಯನ್ನು ಬಯಸುತ್ತೀರಿ ಎಂದು.

ಇನ್ನೊಂದು ನಂಬಿಕೆಯ ಪ್ರಕಾರ, ಶೂನ್ಯವನ್ನು ಉತ್ತಮವೆಂದು ಪರಿಗಣಿಸಲಾಗುವುದಿಲ್ಲ. ಶೂನ್ಯವನ್ನು ಅಂತ್ಯವಾಗಿ ನೋಡಲಾಗುತ್ತದೆ. ಯಾರಿಗಾದರೂ 500, 200 ರೂಪಾಯಿಗಳ ಶಗುನ್ ಲಕೋಟೆಯನ್ನು ನೀಡಿದರೆ, ನೀವು ಅವರ ಸಂಬಂಧವನ್ನು ಕೊನೆಗೊಳಿಸಲು ಬಯಸುತ್ತೀರಿ ಅಥವಾ ಅವರ ಪ್ರಗತಿಯನ್ನು ಬಯಸುವುದಿಲ್ಲ ಎಂದು ಅರ್ಥ. ಅದಕ್ಕಾಗಿಯೇ ಒಂದು ರೂಪಾಯಿ ನಾಣ್ಯವನ್ನು ಯಾವಾಗಲೂ ಲಕೋಟೆ ಮೇಲೆ ಅಂಟಿಸಿರಲಾಗುತ್ತದೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read