HomeKarnatakaGruha Lakshmi Scheme : ಯಜಮಾನಿಯರೇ ಗಮನಿಸಿ : ಈ ದಿನ ʻಗೃಹ ಲಕ್ಷ್ಮಿʼ 4ನೇ...

Gruha Lakshmi Scheme : ಯಜಮಾನಿಯರೇ ಗಮನಿಸಿ : ಈ ದಿನ ʻಗೃಹ ಲಕ್ಷ್ಮಿʼ 4ನೇ ಕಂತಿನ ಹಣ ಖಾತೆಗೆ ಜಮಾ!

ಬೆಂಗಳೂರು : ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಯ ಮೂರು ಕಂತುಗಳು ಮನೆಯ ಯಜಮಾನಿ ಖಾತೆಗೆ ಜಮಾ ಆಗಿದ್ದು, ಇದೀಗ 4ನೇ ಕಂತಿನ ಹಣ ಈ ದಿನದೊಳಗೆ ಜಮಾ ಆಗುವ ಸಾಧ್ಯತೆ ಇದೆ.

ಈಗಾಗಲೇ ಮೂರನೇ ಕಂತು ಪಡೆದಿರುವ ಯಜಮಾನಿಯರ ಖಾತೆಗೆ ಇದೀಗ ನಾಲ್ಕನೇ ಕಂತಿನ ಹಣ ಜಮೆ ಮಾಡಲು ಸರ್ಕಾರ ಸಿದ್ಧತೆ ನಡೆಸಿದ್ದು, ಮೂಲಗಳ ಪ್ರಕಾರ ಈ ವಾರದಲ್ಲೇ ಎಲ್ಲ ಯಜಮಾನಿಯರ ಖಾತೆಗೆ ಹಣ ಜಮಾ ಮಾಡುವ ಸಾಧ್ಯತೆ ಇದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸಚಿವೆ ಲಕ್ಷ್ಮೀ ಹೆಬ್ಬಾಳ್ಳರ್ ಈ ಹಿಂದೆ ಹೇಳಿದಂತೆ ಪ್ರತಿ ತಿಂಗಳು 20 ರಿಂದ 30ನೇ ತಾರೀಖಿನೊಳಗೆ ಹಣ ಜಮೆಯಾಗಲಿದೆ. ಹೀಗಾಗಿ ಮುಂದಿನ ವಾರದಿಂದ ಈ ಪ್ರಕ್ರಿಯೆ ಆರಂಭವಾಗಲಿದೆ ಎಂದು ಮೂಲಗಳು ತಿಳಿಸಿವೆ.

ಗೃಹಲಕ್ಷ್ಮಿ ಯೋಜನೆಯಡಿ ಯಜಮಾನಿಯರಿಗೆ 2,000 ರೂ. ನೀಡಲಾಗುತ್ತಿದ್ದು, ಯಾರ ಖಾತೆಗೆ ಹಣ ಬಂದಿಲ್ಲ ಅವರು ತಕ್ಷಣ ಗ್ರಾಮ ಪಂಚಾಯತ್ ಅಧಿಕಾರಿಗಳು, ಅಂಗನವಾಡಿ ಶಿಕ್ಷಕಿಯರನ್ನು ಸಂಪರ್ಕಿಸಬಹುದಾಗಿದೆ. ಇದುವರೆಗೆ ಯಾರಿಗೆ ಹಣ ಬಂದಿಲ್ಲ, ಅಂತಹವರಿಗೆ ಡಿಸೆಂಬರ್ ತಿಂಗಳೊಳಗೆ ಹಣ ಜಮಾ ಮಾಡುವ ಗುರಿಯನ್ನು ಸರ್ಕಾರ ಹೊಂದಿದೆ. ಯಾರಿಗೆಲ್ಲಾ ಹಣ ಬಂದಿಲ್ಲವೋ ಅವರಿಗೆ ಡಿಸೆಂಬರ್ ಒಳಗೆ ಹಣ ಹಾಕುವ ವ್ಯವಸ್ಥೆ ಮಾಡಿ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular