
ಸುಭಾಷ್ ಕಶ್ಯಪ್ ಎಂಬುವವರು ತನ್ನ ಇಬ್ಬರು ಮಕ್ಕಳನ್ನು ಶಾಲೆಯಿಂದ ಮನೆಗೆ ಕರೆದುಕೊಂಡು ಹೋಗುತ್ತಿದ್ದಾಗ ಅಪಹರಿಸಿದ್ದಾರೆ. ಕಶ್ಯಪ್ ಅವರು ಬಿಳಿ ಬ್ರಿಜಾ ಎಸ್‌ಯುವಿಯನ್ನು ಚಲಾಯಿಸುತ್ತಿರಬೇಕಾದ್ರೆ ಸೂರಜ್‌ಪುರ ಮುಖ್ಯ ಮಾರುಕಟ್ಟೆಯಲ್ಲಿ ಅವರನ್ನು ದುಷ್ಕರ್ಮಿಗಳು ಅಡ್ಡಗಟ್ಟಿದ್ದಾರೆ. ಕಿಡಿಗೇಡಿಗಳು ಕಶ್ಯಪ್ ಅವರ ಸ್ಕಾರ್ಪಿಯೊ ಎಸ್‌ಯುವಿಯನ್ನು ಹತ್ತಿ ತಂದೆ ಮತ್ತು ಮಕ್ಕಳನ್ನು ಬಲವಂತವಾಗಿ ಒತ್ತೆಯಾಳಾಗಿಸಿಕೊಂಡಿದ್ದಾರೆ.
ಕಶ್ಯಪ್ ಅವರನ್ನು ಥಳಿಸಿದ ದುಷ್ಕರ್ಮಿಗಳು ಕಾರನ್ನು ತಮಗೆ ಬೇಕಾದ ಕಡೆಗೆ ಓಡಿಸಲು ಪ್ರಯತ್ನಿಸಿದ್ದಾರೆ. ಆದರೆ. ಸ್ವಲ್ಪ ಮುಂದೆ ಕಾರು ಹೋಗುತ್ತಿದ್ದಂತೆ ಕಸದ ತೊಟ್ಟಿಗೆ ಡಿಕ್ಕಿ ಹೊಡೆದಿದೆ. ಈ ಪ್ರದೇಶವು ಜನಸಂದಣಿಯಿಂದ ಕೂಡಿದ ಮಾರುಕಟ್ಟೆಯಾಗಿದ್ರಿಂದ ಜನಸಂದಣಿ ಸೇರಿದೆ. ಈ ವೇಳೆ ಅಪಹರಣಕಾರರು ಕಾರಿನಿಂದ ಇಳಿದು ಓಡಿದ್ದಾರೆ. ಸ್ಥಳದಲ್ಲಿದ್ದ ಸಿಸಿ ಟಿವಿ ಕ್ಯಾಮರಾದಲ್ಲಿ ದುಷ್ಕರ್ಮಿಗಳು ಪರಾರಿಯಾಗುತ್ತಿರುವ ದೃಶ್ಯ ಸೆರೆಯಾಗಿದೆ.
ಈ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಕಶ್ಯಪ್ ಅವರು ನಾಲ್ವರು ಪುರುಷರಲ್ಲಿ ಇಬ್ಬರನ್ನು ತಿಳಿದಿರುವುದಾಗಿ ಹೇಳಿದ್ದಾರೆ. ರೋಹಿತ್ ಮತ್ತು ಆಕಾಶ್ ಅವರೊಂದಿಗೆ ದೀರ್ಘಕಾಲದ ದ್ವೇಷವಿದ್ದು, ಎರಡು ತಿಂಗಳ ಹಿಂದೆ ಇಬ್ಬರ ನಡುವೆ ಜಗಳವಾಗಿತ್ತು ಎನ್ನಲಾಗಿದೆ.
On Camera, Man, 2 Daughters Kidnapped In Their SUV. A Crash Saves Them https://t.co/2Ibb6JBMZ2 pic.twitter.com/o45jQmS54D
— NDTV (@ndtv) August 10, 2023

