HomeIndiaಕುಡಿದ ಮತ್ತಿನಲ್ಲಿದ್ದವನಿಂದ ಅಪಘಾತ; 2 ಕಿ.ಮೀ. ದೂರ ಕಾರು ಎಳೆದೊಯ್ದ ಟ್ರಕ್ ಚಾಲಕ

ಕುಡಿದ ಮತ್ತಿನಲ್ಲಿದ್ದವನಿಂದ ಅಪಘಾತ; 2 ಕಿ.ಮೀ. ದೂರ ಕಾರು ಎಳೆದೊಯ್ದ ಟ್ರಕ್ ಚಾಲಕ

ಕಾರ್ ಗೆ ಡಿಕ್ಕಿ ಹೊಡೆದ ಟ್ರಕ್ ಚಾಲಕ ಕಾರನ್ನು ಸುಮಾರು 2 ಕಿಲೋಮೀಟರ್ ದೂರ ಎಳೆದೊಯ್ದಿರೋ ಘಟನೆ ಉತ್ತರಪ್ರದೇಶದ ಮೀರತ್ ನಲ್ಲಿ ನಡೆದಿದೆ.

ಭಾನುವಾರ ರಾತ್ರಿ ಮೀರತ್ ನ ದೆಹಲಿ ರಸ್ತೆಯಲ್ಲಿ ಈ ಭಯಾನಕ ಘಟನೆ ಬೆಳಕಿಗೆ ಬಂದಿದೆ. ಕಂಟೈನರ್ ಕಾರಿಗೆ ಡಿಕ್ಕಿ ಹೊಡೆದ ಬಳಿಕ ಕಾರು ಚಾಲಕ ಮತ್ತು ಟ್ರಕ್‌ ಚಾಲಕನ ನಡುವೆ ವಾಗ್ವಾದ ನಡೆದಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ನಂತರ ಕೋಪಗೊಂಡ ಟ್ರಕ್ ಚಾಲಕ ಕಾರಿಗೆ ಡಿಕ್ಕಿ ಹೊಡೆದು ಸರಿಸುಮಾರು ಎರಡು ಕಿಲೋಮೀಟರ್ ಎಳೆದೊಯ್ದಿದ್ದ. ಕಾರ್ ನಲ್ಲಿದ್ದ ಮೂವರು ಯುವಕರು ಜಿಗಿದು ಪ್ರಾಣ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಪೊಲೀಸರು ಮತ್ತು ಸಾರ್ವಜನಿಕರು ಟ್ರಕ್ ಚಾಲಕನನ್ನು ತಡೆಯಲು ಪ್ರಯತ್ನಿಸಿದರು, ಆದರೆ ಅವನು ವಾಹನವನ್ನು ಎಳೆಯುವುದನ್ನು ನಿಲ್ಲಿಸಿರಲಿಲ್ಲ.

ವರದಿಗಳ ಪ್ರಕಾರ, ಟ್ರಕ್ ಚಾಲಕ ಮದ್ಯ ಸೇವಿಸಿದ್ದು ಮತ್ತಿನಲ್ಲಿದ್ದ. ಟ್ರಕ್ ನಿಲ್ಲಿಸಲು ನಿರಾಕರಿಸಿದ್ದ. ಅಂತಿಮವಾಗಿ ಆತ ಮೆಟ್ರೋ ಪಿಲ್ಲರ್ ಗೆ ಕಾರನ್ನು ಡಿಕ್ಕಿ ಹೊಡೆಸಿದ. ಸ್ಥಳೀಯರು ಆತನನ್ನು ಹೊರಗೆಳೆದು ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular