ಕೊಲಂಬಿಯಾ: ವೇಗವಾಗಿ ಬರುತ್ತಿದ್ದ ಬೈಕ್‌ವೊಂದು ಚಲಿಸುತ್ತಿದ್ದ ಬಸ್‌ಗೆ ಡಿಕ್ಕಿ ಹೊಡೆದಿದ್ದು, ಅಪಘಾತದ ರಭಸಕ್ಕೆ ಬೈಕ್ ಸವಾರ ನೇರವಾಗಿ ಬಸ್‌ನೊಳಗೆ ಹಾರಿ ಬಿದ್ದಿದ್ದಾನೆ. ಈ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.
ಕೊಲಂಬಿಯಾದಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದ್ದು, ರಸ್ತೆಯ ಜಂಕ್ಷನ್‌ನಲ್ಲಿ ವೇಗವಾಗಿ ಬಂದ ಬೈಕ್ ಸವಾರ ಚಲಿಸುತ್ತಿದ್ದ ಬಸ್‌ಗೆ ಡಿಕ್ಕಿ ಹೊಡೆದಿದ್ದಾನೆ. ಡಿಕ್ಕಿಯ ರಭಸಕ್ಕೆ ಸವಾರ ಬೈಕ್‌ನಿಂದ ಹಾರಿ ಬಸ್‌ನೊಳಗೆ ಬಿದ್ದಿದ್ದಾನೆ.
ವೈರಲ್ ಆಗಿರುವ ವಿಡಿಯೋದಲ್ಲಿ ಸವಾರ ಬಸ್‌ನ ಸೀಟುಗಳ ಮೇಲೆ ಬಂದು ಬೀಳುವುದನ್ನು ಕಾಣಬಹುದು. ಕೆಲ ಕ್ಷಣಗಳ ಬಳಿಕ ಆತ ಎದ್ದು, ಬಸ್‌ನಿಂದ ಹೊರಗೆ ಬಂದು ನಡೆದುಕೊಂಡು ಹೋಗಿದ್ದಾನೆ.
ಅಪಘಾತದ ಭೀಕರತೆ ನೋಡಿದರೆ ಸವಾರನಿಗೆ ಗಂಭೀರ ಗಾಯಗಳಾಗಿರಬಹುದು ಎಂದು ಅನಿಸುವಂತಿದ್ದರೂ, ಆತ ಎದ್ದು ನಡೆದುಕೊಂಡು ಹೋಗಿರುವುದು ಅಚ್ಚರಿ ಮೂಡಿಸಿದೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, “ಇದು ಹೇಗೆ ಸಾಧ್ಯ?” ಎಂದು ನೆಟ್ಟಿಗರು ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ.

