ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಬುಧವಾರ ಉದ್ಘಾಟನಾ ಸಮಾರಂಭದಲ್ಲಿ ತ್ರಿವರ್ಣ ರಿಬ್ಬನ್ ಕತ್ತರಿಸಲು ನಿರಾಕರಿಸಿದ್ದಾರೆ. ಭಾರತದ ರಾಷ್ಟ್ರಧ್ವಜಕ್ಕೆ ಗೌರವ ತೋರಿಸುವ ಪ್ರಯತ್ನದಲ್ಲಿ ಅವರು ಟೇಪ್ ಕಟ್ ಮಾಡಲು ನಿರಾಕರಿಸಿದ ಈ ವಿಡಿಯೋ ವೈರಲ್ ಆಗಿದೆ.
ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಆಹ್ವಾನಿಸಲ್ಪಟ್ಟ ಒಮರ್ ಅಬ್ದುಲ್ಲಾ ಅವರನ್ನು ಆಯೋಜಕರು ರಿಬ್ಬನ್ ಕತ್ತರಿಸಲು ಕೇಳಿಕೊಂಡಿದ್ದಾರೆ. ಅದನ್ನು ಭಾರತದ ರಾಷ್ಟ್ರಧ್ವಜದ ತ್ರಿವರ್ಣ ರೀತಿ ವಿನ್ಯಾಸಗೊಳಿಸಿರುವುದನ್ನು ನೋಡಿ, ಅಬ್ದುಲ್ಲಾ ಅದನ್ನು ಕತ್ತರಿಸುವ ಬಗ್ಗೆ ತಮ್ಮ ಅಸಮ್ಮತಿ ವ್ಯಕ್ತಪಡಿಸಿದರು. ನಂತರ ಅವರು ರಿಬ್ಬನ್ ಬಿಚ್ಚಿದರು.
ಘಟನೆಯ ವೀಡಿಯೊ ಶೀಘ್ರದಲ್ಲೇ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು. ಬಳಕೆದಾರರು ಅಬ್ದುಲ್ಲಾ ಅವರ ನಡೆ ಮೆಚ್ಚಿಕೊಂಡಿದ್ದು, ಅಂತಹ ರಿಬ್ಬನ್ ವಿನ್ಯಾಸಗೊಳಿಸಿದವರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

