ಓಲಾ ಎಲೆಕ್ಟ್ರಿಕ್ ಸ್ಕೂಟಿ ಖರೀದಿದಾರರಿಗೆ ಖುಷಿ ಸುದ್ದಿ…… ಸಿಗ್ತಿದೆ ಬಂಪರ್ ಆಫರ್

ಕೃಷಿ ಆಧಾರಿತ ದೇಶ ನಮ್ಮದು. ಹಾಗಾಗಿ, ಎಲೆಕ್ಟ್ರಿಕ್‌ ದ್ವಿಚಕ್ರ ವಾಹನ ಕಂಪನಿ ಓಲಾ ಎಲೆಕ್ಟ್ರಿಕ್, ಭಾರತೀಯರಿಗೆ ಸುಗ್ಗಿ ಹಬ್ಬದ ಕೊಡುಗೆಯನ್ನು ನೀಡ್ತಿದೆ. ಓಲಾ ಎಲೆಕ್ಟ್ರಿಕ್ ಕಂಪನಿ ಸ್ಪೆಷಲ್‌ ಆಫರ್‌ ಇದೇ ಹದಿನೈದರವರೆಗೆ ಇರಲಿದೆ.

ಕಂಪನಿಯು ತನ್ನ ಓಲಾ S1 Pro ಮತ್ತು S1 ಏರ್ ಎಲೆಕ್ಟ್ರಿಕ್ ಸ್ಕೂಟರ್‌ಗಳ ಖರೀದಿಯ ಮೇಲೆ ವಿಶೇಷ ಕೊಡುಗೆ ನೀಡ್ತಿದೆ. ಈ ಎರಡೂ ಸ್ಕೂಟರ್‌ ಮೇಲೆ 6,999 ರೂಪಾಯಿವರೆಗೆ ವಿಸ್ತೃತ ವಾರಂಟಿಯನ್ನು ನೀಡುತ್ತಿದೆ. ಗ್ರಾಹಕರು 3,000 ವರೆಗಿನ ವಿನಿಮಯ ಬೋನಸ್  ಸಹ ಪಡೆಯಬಹುದು.

ಎಲೆಕ್ಟ್ರಿಕ್‌ ಸ್ಕೂಟರ್‌ ಖರೀದಿ ಕನಸನ್ನು ನನಸು ಮಾಡಲು ಕೆಲ ಸ್ಕೂಟರ್‌ ಮೇಲೆ ಭರ್ಜರಿ ಆಫರ್‌ ಘೋಷಿಸಿದೆ. ಎಸ್‌ ಒನ್‌ ಎಕ್ಸ್‌ ಸ್ಕೂಟರ್‌ ಗೆ 20,000 ರೂಪಾಯಿವರೆಗೆ ರಿಯಾಯಿತಿ ನೀಡ್ತಿದ್ದು, ಎಕ್ಸ್‌ ಶೋರೂಮ್‌ ನಲ್ಲಿ ಈ ಸ್ಕೂಟರ್‌ ನಿಮಗೆ 89,999 ರೂಪಾಯಿಗೆ ಸಿಗಲಿದೆ.

ಗ್ರಾಹಕರು ಆಯ್ದ ಕ್ರೆಡಿಟ್ ಕಾರ್ಡ್‌ಗಳನ್ನು ಬಳಸಿದ್ರೆ ಇಎಂಐ ಮೇಲೆ 5,000 ರೂಪಾಯಿಗಳವರೆಗೆ ರಿಯಾಯಿತಿ ಸಿಗುತ್ತದೆ. ಕಂಪನಿ ಶೂನ್ಯ ಡೌನ್ ಪೇಮೆಂಟ್‌, ನೋ-ಕಾಸ್ಟ್ ಇಎಂಐ, ಶೇಕಡಾ 7.99ರವರೆಗೆ ಕಡಿಮೆ ಬಡ್ಡಿದರ ಸೇರಿದಂತೆ ಇನ್ನೂ ಅನೇಕ ಕೊಡುಗೆಗಳನ್ನು ಘೋಷಿಸಿದೆ.

ಎಲೆಕ್ಟ್ರಿಕ್‌ ಸ್ಕೂಟಿ ಖರೀದಿಯನ್ನು ಮತ್ತಷ್ಟು ಸುಲಭಗೊಳಿಸಲು ಓಲಾ ಎಸ್‌ 1ನ 3kWh ಮತ್ತು  2kWh  ಮಾಡೆಲ್‌ ಗಾಗಿ ವಿಶೇಷ ಬುಕ್ಕಿಂಗ್‌ ವಿಂಡೋ ಶುರು ಮಾಡಿದೆ. ಗ್ರಾಹಕರು ಈಗ ಮಾಡೆಲ್‌ ಗಳನ್ನು ಕೇವಲ 999 ರೂಪಾಯಿಗೆ ಬುಕ್ ಮಾಡಬಹುದು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read