HomeBeautyನಿಮ್ಮ ತ್ವಚೆ ಸೌಂದರ್ಯ ದುಪ್ಪಟ್ಟುಗೊಳಿಸುತ್ತೆ ಬೆಂಡೆಕಾಯಿ ಫೇಸ್ ಪ್ಯಾಕ್

ನಿಮ್ಮ ತ್ವಚೆ ಸೌಂದರ್ಯ ದುಪ್ಪಟ್ಟುಗೊಳಿಸುತ್ತೆ ಬೆಂಡೆಕಾಯಿ ಫೇಸ್ ಪ್ಯಾಕ್

ವಯಸ್ಸು 30ರ ಗಡಿ ದಾಟುತ್ತಿದ್ದಂತೆ ಸೌಂದರ್ಯದ ಬಗ್ಗೆ ವಿಪರೀತ ಕಾಳಜಿ ಅರಂಭವಾಗುತ್ತದೆ. ರಾಸಾಯನಿಕಗಳನ್ನು ಬಳಸುವ ಬದಲು ಬೆಂಡೆಕಾಯಿ ಫೇಸ್ ಪ್ಯಾಕ್ ಮೂಲಕ ನಿಮ್ಮ ಸೌಂದರ್ಯವನ್ನು ಹೆಚ್ಚಿಸಬಹುದು.

ಬೆಂಡೆಯಲ್ಲಿ ವಿಟಮಿನ್ ಸಿ, ಎ, ಕ್ಯಾಲ್ಸಿಯಂ, ಮೆಗ್ನೀಷಿಯಂ ಇದ್ದು ಇದು ನಿಮ್ಮ ಅಂಟಿ ಏಜಿಂಗ್ ಫೇಸ್ ಪ್ಯಾಕ್ ಅಗಿ ಕೆಲಸ ಮಾಡುತ್ತದೆ. ಬೆಂಡೆಯ ತೊಟ್ಟು ತೆಗೆದು ಮಿಕ್ಸಿಯಲ್ಲಿ ರುಬ್ಬಿ. ಇದಕ್ಕೆ ಟೀ ಟ್ರೀ ಎಣ್ಣೆ, ಜೇನುತುಪ್ಪ ಮತ್ತು ನಿಂಬೆರಸ ಸೇರಿಸಿ ರುಬ್ಬಿ. ಇದು ಗಟ್ಟಿಯಾಗಿ ಇರುವಂತೆ ನೋಡಿಕೊಳ್ಳಿ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇದನ್ನು ಮುಖ, ಕುತ್ತಿಗೆಗೆ ಹಚ್ಚಿ. 30 ನಿಮಿಷದ ಬಳಿಕ ತಣ್ಣೀರಿನಿಂದ ತೊಳೆದು ಸ್ವಚ್ಛವಾಗಿಸಿ. ಇದು ಮೊಡವೆಗಳನ್ನು ಹಾಗೂ ಅದರಿಂದಾದ ಕಲೆಗಳನ್ನು ದೂರ ಮಾಡುತ್ತದೆ.

ಬೆಂಡೆಕಾಯಿ ಮಿಶ್ರಣಕ್ಕೆ ಅರ್ಧ ಚಮಚ ಅಡುಗೆ ಸೋಡಾ, ಅಲೋವೇರಾ ಜೆಲ್ ಮತ್ತು ಕೊಬ್ಬರಿ ಎಣ್ಣೆ ಸೇರಿಸಿ, ಮುಖಕ್ಕೆ ಹಚ್ಚಿ 30 ನಿಮಿಷ ಬಳಿಕ ತೊಳೆಯಿರಿ. ಇದರಿಂದ ಮುಖದ ಮೇಲಿನ ಎಲ್ಲ ಗುಳ್ಳೆಗಳು ಮಾಯವಾಗಿ ಹೊಳೆಯುವ, ನಯವಾದ ತ್ವಚೆ ನಿಮ್ಮದಾಗುತ್ತದೆ.

For Latest News Updates, Join Our Whatsapp Community🚩
RELATED ARTICLES

Most Popular