HomeLifestyleಒಗ್ಗರಣೆ ಹಾಕುವಾಗ ಎಣ್ಣೆ ಸಿಡಿದು ಕೈ ಸುಟ್ಟುಕೊಳ್ಳಬೇಡಿ: ಇಲ್ಲಿದೆ ಅಡುಗೆ ಮನೆಯ ಸೂಪರ್ ಸಾಲ್ಟ್ ಟ್ರಿಕ್!

ಒಗ್ಗರಣೆ ಹಾಕುವಾಗ ಎಣ್ಣೆ ಸಿಡಿದು ಕೈ ಸುಟ್ಟುಕೊಳ್ಳಬೇಡಿ: ಇಲ್ಲಿದೆ ಅಡುಗೆ ಮನೆಯ ಸೂಪರ್ ಸಾಲ್ಟ್ ಟ್ರಿಕ್!

ಅಡುಗೆ ಮನೆಯಲ್ಲಿ ಬೆಳ್ಳುಳ್ಳಿ ಸುಲಿಯುವುದರಿಂದ ಹಿಡಿದು ಜಿಡ್ಡು ಪಾತ್ರೆಗಳನ್ನು ತೊಳೆಯುವವರೆಗೆ ಪ್ರತಿದಿನ ನಾನಾ ರೀತಿಯ ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಇವೆಲ್ಲದರ ನಡುವೆ ಬಹುತೇಕರು ಎದುರಿಸುವ ಮತ್ತೊಂದು ದೊಡ್ಡ ಸಮಸ್ಯೆ ಎಂದರೆ ಒಗ್ಗರಣೆ (Tadka) ಹಾಕುವಾಗ ಎಣ್ಣೆ ಸಿಡಿಯುವುದು. ಬಿಸಿ ಎಣ್ಣೆ ಸಿಡಿದು ಗ್ಯಾಸ್ ಸ್ಟವ್, ಕಿಚನ್ ಟೈಲ್ಸ್ ಹಾಳಾಗುವುದಲ್ಲದೆ, ಕೈಗಳ ಮೇಲೆ ಬಿದ್ದು ಸಣ್ಣಪುಟ್ಟ ಗಾಯಗಳಾಗುವ ಅಪಾಯವೂ ಇರುತ್ತದೆ. ಆದರೆ, ಈ ಸಮಸ್ಯೆಗೆ ನಿಮ್ಮ ಅಡುಗೆ ಮನೆಯಲ್ಲಿಯೇ ಒಂದು ಸುಲಭ ಉಪಾಯವಿದೆ. ಬಿಸಿ ಎಣ್ಣೆಗೆ ಕೇವಲ ಒಂದು ಚಿಟಿಕೆ ಉಪ್ಪು ಹಾಕುವ ಮೂಲಕ ಎಣ್ಣೆ ಸಿಡಿಯುವುದನ್ನು ಸಂಪೂರ್ಣವಾಗಿ ತಡೆಯಬಹುದು.

ಒಗ್ಗರಣೆ ಹಾಕುವಾಗ ಎಣ್ಣೆ ಯಾಕೆ ಸಿಡಿಯುತ್ತದೆ? ನಾವು ಒಗ್ಗರಣೆ ಪದಾರ್ಥಗಳನ್ನು ಎಣ್ಣೆಗೆ ಹಾಕಿದ ತಕ್ಷಣ ಎಣ್ಣೆ ಸಿಡಿಯಲು ಮುಖ್ಯ ಕಾರಣ ಅದರಲ್ಲಿರುವ ತೇವಾಂಶ (ಮಾಯಿಶ್ಚರ್). ಪಾತ್ರೆಯನ್ನು ತೊಳೆದಾಗ ಅದರಲ್ಲಿ ಉಳಿದುಕೊಳ್ಳುವ ನೀರಿನ ಪಸೆ ಅಥವಾ ಒಗ್ಗರಣೆಗೆ ಬಳಸುವ ಕರಿಬೇವು, ಹಸಿಮೆಣಸಿನಕಾಯಿ ಮತ್ತು ಜೀರಿಗೆಯಲ್ಲಿರುವ ತೇವಾಂಶವು ಬಿಸಿ ಎಣ್ಣೆಯ ಸಂಪರ್ಕಕ್ಕೆ ಬಂದಾಗ ತಕ್ಷಣವೇ ರಿಯಾಕ್ಟ್ ಆಗಿ ಎಣ್ಣೆ ಮೇಲಕ್ಕೆ ಸಿಡಿಯಲು ಪ್ರಾರಂಭಿಸುತ್ತದೆ.

ಬಿಸಿಯಾದ ಎಣ್ಣೆಗೆ ಒಗ್ಗರಣೆ ಪದಾರ್ಥಗಳನ್ನು ಹಾಕುವ ಮುನ್ನ ಒಂದು ಚಿಟಿಕೆ ಉಪ್ಪನ್ನು ಸೇರಿಸುವುದರಿಂದ, ಆ ಉಪ್ಪು ಎಣ್ಣೆಯಲ್ಲಿರುವ ತೇವಾಂಶವನ್ನು ಹೀರಿಕೊಳ್ಳುತ್ತದೆ. ಇದರಿಂದ ಎಣ್ಣೆ ಸಿಡಿಯುವುದು ಕಡಿಮೆಯಾಗುತ್ತದೆ. ಇದರೊಂದಿಗೆ ಸಾಸಿವೆ ಎಣ್ಣೆಯನ್ನು (Mustard Oil) ಬಳಸಿ ಅಡುಗೆ ಮಾಡುವವರಿಗೆ, ಉಪ್ಪು ಹಾಕುವುದರಿಂದ ಆ ಎಣ್ಣೆಯ ಕಟುವಾದ ವಾಸನೆ ಕೂಡ ಕಡಿಮೆಯಾಗಲಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಎಣ್ಣೆ ಸಿಡಿಯದಂತೆ ತಡೆಯಲು ಕೆಲವು ಹೆಚ್ಚುವರಿ ಟಿಪ್ಸ್:

1. ಪಾತ್ರೆ ಸಂಪೂರ್ಣವಾಗಿ ಒಣಗಿರಲಿ ಅನೇಕರು ಪಾತ್ರೆಯನ್ನು ತೊಳೆದ ತಕ್ಷಣ ಹಾಗೆಯೇ ಗ್ಯಾಸ್ ಮೇಲೆ ಇಟ್ಟು ಎಣ್ಣೆ ಸುರಿಯುತ್ತಾರೆ. ಹಾಗೆ ಮಾಡದೆ, ಪಾತ್ರೆಗೆ ಎಣ್ಣೆ ಹಾಕುವ ಮೊದಲು ಕ್ಲೀನ್ ಆದ ಹತ್ತಿ ಬಟ್ಟೆಯಿಂದ ಅದನ್ನು ಚೆನ್ನಾಗಿ ಒರೆಸಬೇಕು. ಅಥವಾ ಒಲೆ ಉರಿಸಿ ಕೆಲವು ಸೆಕೆಂಡುಗಳ ಕಾಲ ಪಾತ್ರೆಯನ್ನು ಬಿಸಿ ಮಾಡಿ, ಅದರಲ್ಲಿರುವ ನೀರಿನ ಪಸೆ ಆವಿಯಾದ ನಂತರವೇ ಎಣ್ಣೆ ಹಾಕಬೇಕು.

2. ಒದ್ದೆಯಾದ ಸೌಟು ಬಳಸಬೇಡಿ ಬಿಸಿ ಎಣ್ಣೆಯೊಳಗೆ ಎಂದಿಗೂ ಒದ್ದೆಯಾದ ಸೌಟು ಅಥವಾ ಚಮಚವನ್ನು ಹಾಕಬೇಡಿ. ಕೇವಲ ಒಂದು ಹನಿ ನೀರು ಬಿದ್ದರೂ ಎಣ್ಣೆ ಜೋರಾಗಿ ಸಿಡಿಯಲು ಶುರುವಾಗುತ್ತದೆ. ಆದ್ದರಿಂದ ಬಳಸುವ ಸೌಟು ಸಂಪೂರ್ಣ ಡ್ರೈ ಆಗಿರಲಿ.

3. ಒಗ್ಗರಣೆ ಸಾಮಗ್ರಿಗಳನ್ನು ಒಣಗಿಸಿ ಬಳಸಿ ಒಗ್ಗರಣೆಗೆ ಬಳಸುವ ಹಸಿಮೆಣಸಿನಕಾಯಿ, ಬೆಳ್ಳುಳ್ಳಿ, ಈರುಳ್ಳಿ ಅಥವಾ ಕರಿಬೇವನ್ನು ತೊಳೆದ ತಕ್ಷಣ ಎಣ್ಣೆಗೆ ಹಾಕಬೇಡಿ. ತೊಳೆದ ನಂತರ ಅವುಗಳನ್ನು ಕಿಚನ್ ಟವೆಲ್ ಅಥವಾ ಕಾಟನ್ ಬಟ್ಟೆಯ ಮೇಲೆ ಹಾಕಿ, ನೀರಿಲ್ಲದಂತೆ ಒರೆಸಿಕೊಂಡು ಆಮೇಲೆ ಕಟ್ ಮಾಡಿ ಒಗ್ಗರಣೆಗೆ ಬಳಸಿ.

ಮುಂದಿನ ಬಾರಿ ಅಡುಗೆ ಮಾಡುವಾಗ ಈ ಸರಳ ಮತ್ತು ಉಪಯುಕ್ತ ಟಿಪ್ಸ್ ನೆನಪಿನಲ್ಲಿಟ್ಟುಕೊಳ್ಳಿ. ಇದರಿಂದ ನಿಮ್ಮ ಕಿಚನ್ ಕೆಲಸ ಸುರಕ್ಷಿತ ಹಾಗೂ ಸ್ವಚ್ಛತೆಯಿಂದ ಕೂಡಿರಲಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular