ಓ ಹೆಣ್ಮಗು…ಹೆಣ್ಮಗು : ನಿಂಬೆ ಹಣ್ಣಿನ ಮೇಲೆ ಹೊಸ ಥಾರ್ ಹತ್ತಿಸಲು ಹೋಗಿ ‘ಶೂ ರೂಮ್’ ನಿಂದ ಕಾರು ಸಮೇತ ಕೆಳಗೆ ಹಾರಿದ ಮಹಿಳೆ |WATCH VIDEO


ನಿಂಬೆ ಹಣ್ಣಿನ ಮೇಲೆ ಹೊಸ ಥಾರ್ ಹತ್ತಿಸಲು ಹೋಗಿ ಶೂ ರೂಮ್ ನಿಂದ ಕಾರು ಸಮೇತ ಮಹಿಳೆ ಕೆಳಗೆ ಹಾರಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.

ಗಾಜಿಯಾಬಾದ್ನ 29 ವರ್ಷದ ಮಾನಿ ಪವಾರ್ ತನ್ನ ಪತಿ ಪ್ರದೀಪ್ ಅವರೊಂದಿಗೆ 27 ಲಕ್ಷ ರೂಪಾಯಿ ಮೌಲ್ಯದ ಥಾರ್ ಅನ್ನು ಖರೀದಿಸಿದ್ದರು. ಖರೀದಿಯ ನಂತರ, ಶೋ ರೂಂ ಒಳಗೆ ಸಾಂಪ್ರದಾಯಿಕ ಪೂಜೆಯನ್ನು ನಡೆಸಲಾಯಿತು. ಆಚರಣೆಯ ಸಮಯದಲ್ಲಿ, ಪವಾರ್ ಕಾರಿನ ಚಕ್ರದಡಿ ನಿಂಬೆಹಣ್ಣು ಇಟ್ಟು ಕಾರು ಓಡಿಸಬೇಕಾಗಿತ್ತು. ಆದರೆ ಮಾನಿ ಪವಾರ್ ಆ್ಯಕ್ಸಲೇಟರನ್ನು ಬಹಳ ವೇಗವಾಗಿ ಒತ್ತಿದರು, ಇದರಿಂದಾಗಿ ಕಾರು ಇದ್ದಕ್ಕಿದ್ದಂತೆ ಶೋ ರೂಂನ ಗಾಜಿನ ಗೋಡೆಗೆ ಡಿಕ್ಕಿ ಹೊಡೆದು 15 ಅಡಿ ಕೆಳಗೆ ನೆಲಕ್ಕೆ ಬಿದ್ದಿತು.

ಅಪಘಾತ ಸಂಭವಿಸಿದಾಗ ವಾಹನದ ಏರ್ಬ್ಯಾಗ್ಗಳು ಓಪನ್ ಆಗಿದ್ದು, ಸಣ್ಣಪುಟ್ಟ ಗಾಯದೊಂದಿಗೆ ಇಬ್ಬರು ಪಾರಾಗಿದ್ದಾರೆ. ಕಾರಿನ ಒಳಗೆ ಶೋರೂಂ ಮಾರಾಟಗಾರ ವಿಕಾಸ್ ಹಾಗೂ ಮಾನಿ, ಪತಿ ಪ್ರದೀಪ್ ಇದ್ದರು. ಮೂವರನ್ನೂ ಚಿಕಿತ್ಸೆಗಾಗಿ ಹತ್ತಿರದ ಮಲಿಕ್ ಆಸ್ಪತ್ರೆಗೆ ಕರೆದೊಯ್ಯಲಾಯಿತು ಮತ್ತು ಪ್ರಾಥಮಿಕ ವೈದ್ಯಕೀಯ ಆರೈಕೆ ಪಡೆದ ನಂತರ ಬಿಡುಗಡೆ ಮಾಡಲಾಯಿತು. ಯಾವುದೇ ದೂರುಗಳು ದಾಖಲಾಗಿಲ್ಲವಾದ್ದರಿಂದ ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದು ಉಪ ಪೊಲೀಸ್ ಆಯುಕ್ತ (ಪೂರ್ವ) ಅಭಿಷೇಕ್ ಧನಿಯಾ ದೃಢಪಡಿಸಿದರು. ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಓ ಹೆಣ್ಮಗು..ಓ ಹೆಣ್ಮಗು ಎಂದು ನೆಟ್ಟಿಗರು ಕಮೆಂಟ್ ಮಾಡಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read