BIG NEWS: ಖ್ಯಾತ ಯುವ ಗಾಯಕಿ ರುಕ್ಸಾನಾ ವಿಧಿವಶ: ಜೀವನ್ಮರಣದ ನಡುವೆ ಹೋರಾಟ ನಡೆಸಿ ಆಸ್ಪತ್ರೆಯಲ್ಲಿಯೇ ಕೊನೆಯುಸಿರೆಳೆದ ಸಿಂಗರ್

ಭುವನೇಶ್ವರ: ಒಡಿಶಾದ ಜನಪ್ರಿಯ ಯುವ ಗಾಯಕಿ ರುಕ್ಸಾನಾ ವಿಧಿವಶರಾಗಿದ್ದಾರೆ. 27 ವರ್ಷದ ರುಕ್ಸಾನಾ ಆಸ್ಪತೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಗಲೇ ಸಾವನ್ನಪ್ಪಿದ್ದು, ಹಲವು ಅನುಮಾನಕ್ಕೆ ಕಾರಣವಾಗಿದೆ.

ಭುವನೇಶ್ವರ ಏಮ್ಸ್ ಆಸ್ಪತ್ರೆಯಲ್ಲಿ ರುಕ್ಸಾನಾ, ಸ್ಕ್ರಬ್ ಟೈಫಸ್ ಗೆ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಪಡೆಯುತ್ತಿದ್ದಾಗಲೇ ಆಸ್ಪತ್ರೆಯಲ್ಲಿ ರುಕ್ಸಾನಾ ಕೊನೆಯುಸಿರೆಳೆದಿದ್ದಾರೆ. ಅವರ ಸಾವಿಗೆ ನಿಖರ ಕಾರಣವೇನು ಎಂದು ಆಸ್ಪತ್ರೆ ಇನ್ನೂ ಬಹಿರಂಗಪಡಿಸಿಲ್ಲ.

15 ದಿನಗಳ ಹಿಂದೆ ರುಕ್ಸಾನಾ ಬೋಲಾಂಗಿರ್ ನಲ್ಲಿ ಚಿತ್ರೀಕರಣಕ್ಕೆ ತೆರಳಿದ್ದ ವೇಳೆ ಜ್ಯೂಸ್ ಸೇವಿಸಿದ್ದರು. ಬಳಿಕ ಅವರು ಅನಾರೋಗ್ಯಕ್ಕೀಡಾಗಿದ್ದು, ಭವಾನಿ ಪಟ್ಟಣದ ಆಸ್ಪತ್ರೆಗೆ ದಾಖಲಾಗಿದ್ದರು. ಪ್ರಾಥಮಿಕ ಚಿಕಿತ್ಸೆ ಬಳಿಕ ಭೋಲಾಂಗಿರ್ ವೈದ್ಯಕೀಯ ಕಾಲೇಜು ಹಾಗೂ ಆಸ್ಪತೆಗೆ ಶಿಫ್ಟ್ ಮಾಡಲಾಗಿತ್ತು. ಆದರೂ ರುಕ್ಸಾನಾ ಆರೋಗ್ಯ ತೀವ್ರವಾಗಿ ಹದಗೆಡುತ್ತಿತ್ತು. ಬಳಿಕ ಬಾರ್ಗಢದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರ ಆರೋಗ್ಯದಲ್ಲಿ ಯಾವುದೇ ಸುಧರಣೆ ಕಂಡುಬಾರದ ಕಾರಣ ಭುವನೇಶ್ವರ ಏಮ್ಸ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು.

ರುಕ್ಸಾನಾ ಪ್ರತಿಸ್ಪರ್ಧಿ ಗಾಯಕನೇ ಆಕೆಗೆ ವಿಷಪ್ರಾಶನ ಮಾಡಿಸಿದ್ದಾನೆ ಎಂದು ಆಕೆಯ ತಾಯಿ ಹಾಗೂ ಸಹೋದರಿ ಆರೋಪಿಸಿದ್ದಾರೆ. ಅಲ್ಲದೇ ಈ ಹಿದೆ ಆಕೆಗೆ ಬೆದರಿಕೆ ಕರೆಗಳು ಕೂಡ ಬರುತ್ತಿದ್ದವು ಎಂದು ಹೇಳಿದ್ದಾರೆ. ಯುವ ಗಾಯಕಿಯೊಬ್ಬಳ ಸಾವಿನ ರಹಸ್ಯ ತನಿಖೆಯಿಂದಷ್ಟೇ ಹೊರಬರಬೇಕಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read