ಮತ್ತೊಂದು ಅಮಾನವೀಯ ಘಟನೆ ಬಹಿರಂಗ: ಅಂಬುಲೆನ್ಸ್ ಸಿಗದ್ದಕ್ಕೆ ಸೈಕಲ್ ಮೇಲೆ ವೃದ್ದೆ ಶವ ಸಾಗಣೆ

ಇತ್ತೀಚೆಗಷ್ಟೇ ವ್ಯಕ್ತಿಯೊಬ್ಬ ಆಂಬುಲೆನ್ಸ್ ಗೆ ನೀಡಲು ಹಣವಿಲ್ಲದ ಕಾರಣಕ್ಕೆ ತನ್ನ ನವಜಾತ ಮಗುವಿನ ಶವವನ್ನು ಬ್ಯಾಗಿನಲ್ಲಿ ಸಾಗಿಸಿದ ಘಟನೆ ನಡೆದಿದ್ದರ ಬೆನ್ನಲ್ಲೇ ಈಗ ಮತ್ತೊಂದು ಅಮಾನವೀಯ ಘಟನೆ ಬಹಿರಂಗವಾಗಿದೆ. ಒಡಿಶಾದ ಸುವರ್ಣಪುರ ಜಿಲ್ಲೆಯಲ್ಲಿ ಅಂಬುಲೆನ್ಸ್ ಸಿಗದ ಕಾರಣಕ್ಕೆ ವೃದ್ಧೆ ಶವವನ್ನು ಸೈಕಲ್ ಮೇಲೆ ಸಾಗಿಸಲಾಗಿದೆ.

ಆಘಾತಕಾರಿ ಸಂಗತಿ ಎಂದರೆ ಆರೋಗ್ಯ ಸಚಿವರ ಕ್ಷೇತ್ರ ಸುವರ್ಣಪುರ ಜಿಲ್ಲೆಯಲ್ಲಿದೆ. ರುಕ್ಮಿಣಿ ಸಾಹು ಎಂಬ ವೃದ್ಧೆ ನಿರ್ಜಲೀಕರಣದ ಕಾರಣಕ್ಕೆ ಬಿನಿಕಾ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಾವನ್ನಪ್ಪಿದ್ದು, ಶವ ಪರೀಕ್ಷೆ ಬಳಿಕ ಡೆತ್ ರಿಪೋರ್ಟ್ ನೀಡಲು ಸಾಕಷ್ಟು ವಿಳಂಬ ಮಾಡಲಾಗಿತ್ತು.

ಬಳಿಕ ವೃದ್ಧೆಯ ಸಂಬಂಧಿಕರು ಶವವನ್ನು ಸಾಗಿಸಲು ಆಂಬುಲೆನ್ಸ್ ನೀಡುವಂತೆ ಆಸ್ಪತ್ರೆ ಅಧಿಕಾರಿಗಳಿಗೆ ಮನವಿ ಮಾಡಿದ್ದು, ತಕ್ಷಣವೇ ವ್ಯವಸ್ಥೆ ಮಾಡುವುದಾಗಿ ಅವರು ತಿಳಿಸಿದ್ದರು. ಆದರೆ ಎಷ್ಟು ಹೊತ್ತು ಕಾದರೂ ಸಹ ಆಂಬುಲೆನ್ಸ್ ಬಾರದ ಕಾರಣ ವಿಧಿಯಿಲ್ಲದೆ ವೃದ್ಧೆಯ ಸಂಬಂಧಿಕರು ಹಾಗೂ ಸ್ವಯಂ ಸೇವಕರು ಸೈಕಲ್ ಮೇಲೆ ಶವವನ್ನು ಸಾಗಿಸಿದ್ದಾರೆ. ಇದರ ಫೋಟೋ ಹಾಗೂ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read