HomeLatest Newsಮದುವೆ ಸಮಾರಂಭಕ್ಕೆ ಬಂದಿದ್ದ ಬಾಲಕಿಯರನ್ನು ಕಿಡ್ನ್ಯಾಪ್ ಮಾಡಿ ಗ್ಯಾಂಗ್ ರೇಪ್ ನಡೆಸಿದ ದುರುಳರು!

ಮದುವೆ ಸಮಾರಂಭಕ್ಕೆ ಬಂದಿದ್ದ ಬಾಲಕಿಯರನ್ನು ಕಿಡ್ನ್ಯಾಪ್ ಮಾಡಿ ಗ್ಯಾಂಗ್ ರೇಪ್ ನಡೆಸಿದ ದುರುಳರು!

ಭುವನೇಶ್ವರ: ಮದುವೆ ಸಮಾರಂಭಕ್ಕೆ ಬಂದಿದ್ದ ಅಪ್ರಾಪ್ತ ಬಾಲಕಿಯರನ್ನು ಕಿಡ್ನ್ಯಾಪ್ ಮಾಡಿ ನಾಲ್ವರು ಕಾಮುಕರು ಸಾಮೂಹಿಕ ಅತ್ಯಾಚಾರ ನಡೆಸಿರುವ ಘೋರ ಘಟನೆ ಒಡಿಶಾದ ಗಂಜಾಂನಲ್ಲಿ ನಡೆದಿದೆ.

ಇಬ್ಬರು ಬಾಲಕಿಯರು ಮದುವೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ಅಪವರನ್ನು ಅಪಹರಿಸಿದ್ದ ಕಾಮುಕರು, ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಗ್ಯಾಂಗ್ ರೇಪ್ ನಡೆಸಿದ್ದಾರೆ. ಅಲ್ಲದೇ ಮನಬಂದಂತೆ ಬಾಲಕಿಯರ ಮೇಲೆ ಹಲ್ಲೆ ನಡೆಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕೃತ್ಯದ ಬಳಿಕ ವಿಶಾಖಪಟ್ಟಣಂಗೆ ಆರೋಪಿಗಳು ಪರಾರಿಯಾಗುತ್ತಿದ್ದಾಗ ಅವರನ್ನು ಬಂಧಿಸಲಾಗಿದೆ. ಈ ಬಗ್ಗೆ ಬ್ರಹ್ಮಪುರ ಎಸ್ ಪಿ ಶ್ರವಣ್ ವಿವೇಕ್ ತಿಳಿಸಿದ್ದು, ಪ್ರಾಥಮಿಕ ತನಿಖೆಯಲ್ಲಿ ಮೊದಲು ಹುಡ್ಗಿಯರಿಬ್ಬರಿಗೆ ಯುವಕರು ಆಮಿಷವೊಡ್ದಿದ್ದಾರೆ. ಅದರಲ್ಲಿ ಓರ್ವ ಸಂತ್ರಸ್ತೆಗೆ ಆರೋಪಿಯೊಬ್ಬ ಪರಿಚಿತನಾಗಿದ್ದ. ಆತನೊಂದಿಗೆ ಇನ್ನೂ ಮೂವರು ಸೇರಿಕೊಂಡು ಬಾಲಕಿಯರನ್ನು ಅಪಹರಿಸಿ ಕೃತ್ಯವೆಸಗಿದ್ದಾರೆ.

ವಿಷಯ ತಿಳಿದು ಪೋಷಕರು ದೂರು ದಾಖಲಿಸಿದ್ದರು. ಅದರಂತೆ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ. ಸದ್ಯ ಬಾಲಕಿಯರನ್ನು ಕೌನ್ಸೆಲಿಂಗ್ ಗಾಗಿ ಮಕ್ಕಳ ಕಲ್ಯಾಣ ಸಮಿತಿ ಮುಂದೆ ಹಾಜರುಪಡಿಸಲಾಗಿದೆ ಎಂದು ತಿಳಿಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular