ಪೌಷ್ಟಿಕಾಂಶದ ಆಗರ: ಬಾಳೆಹಣ್ಣು ಮತ್ತು ಖರ್ಜೂರದ ಮಿಲ್ಕ್‌ಶೇಕ್

ಸಾಮಾನ್ಯವಾಗಿ ಬಾಳೆಹಣ್ಣು ಎಲ್ಲರ ಮನೆಯಲ್ಲಿಯೂ ಸಿಗುವಂತಹ ಹಣ್ಣಾಗಿದೆ. ಬಾಳೆಹಣ್ಣಿನಿಂದ ಮಾಡುವ ಖಾದ್ಯಗಳೂ ಬಲು ರುಚಿಕರವಾಗಿರುತ್ತದೆ.

ಮನೆಯಲ್ಲಿಯೇ ಸುಲಭವಾಗಿ ರುಚಿಕರವಾದ ಬಾಳೆಹಣ್ಣು ಮತ್ತು ಖರ್ಜೂರವನ್ನು ಬಳಸಿ ಮಿಲ್ಕ್ ಶೇಕ್ ಅನ್ನು ತಯಾರಿಸಿಕೊಂಡು ಸವಿಯಬಹುದು. ಹಾಗಾದರೆ ಇದನ್ನು ಹೇಗೆ ತಯಾರಿಸಬಹುದು ಅಂತ ನೋಡೋಣ.

ಬೇಕಾಗುವ ಸಾಮಾಗ್ರಿಗಳು

ಖರ್ಜೂರ 10
ಬಾಳೆಹಣ್ಣು 3
ಸಕ್ಕರೆ 4 ಟೀ ಚಮಚ
ಐಸ್‌ ಕ್ಯೂಬ್ 3-4
ಗಟ್ಟಿ ಹಾಲು 1/2 ಲೀಟರ್

ಮಾಡುವ ವಿಧಾನ

ಮೊದಲು ಮಿಕ್ಸಿಯಲ್ಲಿ ಬೀಜ ತೆಗೆದ ಖರ್ಜೂರ, ಸಕ್ಕರೆ ಮತ್ತು ಹಾಲನ್ನು ಹಾಕಿ ನುಣ್ಣಗೆ ರುಬ್ಬಿಕೊಳ್ಳಬೇಕು.

ನಂತರ ಅದಕ್ಕೆ ಬಾಳೆಹಣ್ಣನ್ನು ಸೇರಿಸಿ ಮತ್ತು ಐಸ್‌ಕ್ಯೂಬ್ ಅನ್ನು ಸೇರಿಸಿ ಸ್ವಲ್ಪ ನುಣ್ಣಗಾಗಿಸಿಕೊಳ್ಳಬೇಕು. ಚೆನ್ನಾಗಿ ಮಿಶ್ರಣವಾದ ಬಳಿಕ ಗ್ಲಾಸ್‌ ನಲ್ಲಿ ಹಾಕಿ ಸರ್ವ್ ಮಾಡಿದರೆ ರುಚಿಕರವಾದ ಮತ್ತು ಆರೋಗ್ಯಕರವಾದ ಮಿಲ್ಕ್ ಶೇಕ್ ಸವಿಯಲು ಸಿದ್ದ.

ಈ ಜ್ಯೂಸ್ ಡಯಟ್ ಮಾಡುವವರಿಗೆ ಬಹಳ ಉಪಯುಕ್ತವಾಗಿದೆ. ಸಕ್ಕರೆ ಬೇಡ ಅನ್ನುವವರು ಹಾಗೆಯೇ ಮಿಲ್ಕ್ ಶೇಕ್ ಮಾಡಿ ಕುಡಿಯಬಹುದು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read