HomeKarnatakaಪ್ರೀತಿ-ಪ್ರೇಮದ ನಾಟಕವಾಡಿ ನರ್ಸ್ ಮೇಲೆ ಅತ್ಯಾಚಾರ: ಕೇರಳ ಮೂಲದ ಯುವಕ ಅರೆಸ್ಟ್

ಪ್ರೀತಿ-ಪ್ರೇಮದ ನಾಟಕವಾಡಿ ನರ್ಸ್ ಮೇಲೆ ಅತ್ಯಾಚಾರ: ಕೇರಳ ಮೂಲದ ಯುವಕ ಅರೆಸ್ಟ್

ಬೆಂಗಳೂರು: ಬೆಂಗಳೂರಿನಲ್ಲಿ ಸ್ಟಾಫ್ ನರ್ಸ್ ಆಗಿ ಕೆಲಸಮಾಡುತ್ತಿದ್ದ ಛತ್ತೀಸ್ ಗಡ ಮೂಲದ ಯುವತಿಗೆ ಇನ್ ಸ್ಟಾಗ್ರಾಂ ನಲ್ಲಿ ಪರಿಚಯನಾದ ಯುವಕ ಪ್ರೀತಿ-ಪ್ರೇಮದ ನಾಟಕವಾಡಿ ಕೈಕೊಟ್ಟ ಘಟನೆ ಬೆಳಕಿಗೆ ಬಂದಿದೆ.

ಪ್ರೀತಿ-ಪ್ರೇಮದ ನಾಟಕವಾಡಿ ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರವೆಸಗಿದ್ದು, ಯುವತಿ ನೀಡಿದ ದೂರಿನ ಹಿನ್ನೆಲೆಯಲ್ಲಿ ಕೇರಳ ಮೂಲದ ಯುವಕನನ್ನು ಗೋವಿಂದಪುರ ಪೊಲೀಸರು ಬಂಧಿಸಿದ್ದಾರೆ. ಬಿಲಾಲ್ ರಫಿಕ್ ಬಂಧಿತ ಆರೋಪಿ. ಪ್ರಕರಣ ಸಂಬಂಧ ಯುವಕನ ತಂದೆ-ತಾಯಿ ವಿರುದ್ಧವೂ ಕೇಸ್ ದಾಖಲಾಗಿದೆ.

2021ರಲ್ಲಿ ಯುವತಿಗೆ ಇನ್ ಸ್ಟಾಗ್ರಾಂ ನಲ್ಲಿ ಕೇರಳ ಮೂಲದ ಬಿಲಾಲ್ ರಫಿಕ್ ಪರಿಚಯವಾಗಿದ್ದು, ಇಬ್ಬರ ನಡುವಿನ ಸಂಭಾಷಣೆ, ಪ್ರೀತಿ-ಪ್ರೇಮ ಮದುವೆ ಮಾತುಕತೆವರೆಗೂ ಬಂದಿದೆ. ಮದುವೆಯಾಗುವುದಾಗಿ ನಂಬಿಸಿ ಬಿಲಾಲ್ ರಫಿಕ್ ಯುವತಿ ಮೇಲೆ ಎರಡು ಬಾರಿ ಅತ್ಯಾಚಾರವೆಸಗಿದ್ದು, ಎರಡು ಬಾರಿ ಯುವತಿ ಗರ್ಭಿಣಿಯಾಗುತ್ತಿದ್ದಂತೆ ಗರ್ಭಪಾತವನ್ನೂ ಮಾಡಿಸಿದ್ದಾನೆ ಎಂದು ಯುವತಿ ಆರೋಪಿಸಿದ್ದಾಳೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

2024ರಲ್ಲಿ ಮೂರನೇ ಬಾರಿ ಯುವತಿ ಗರ್ಭಿಣಿಯಾಗುತ್ತಿದ್ದಂತೆ ಯುವತಿಯ ಬಲವಂತದಿಂದ ಬಿಲಾಲ್ ರಫಿಕ್ ಮದುವೆಗೆ ಒಪ್ಪಿದ್ದ. ಎರಡು ಕುಟುಂಬದವರೂ ಮದುವೆಗೆ ಸಮ್ಮತಿ ನೀಡಿದ್ದರು. ಇದಾದ ಬಳಿಕ ಬಿಲಾಲ್ ರಫಿಕ್ ತಂದೆ-ತಾಯಿ ಯುವತಿಯ ಪೋಷಕರಿಂದ ಹಣ, ಒಡವೆಯನ್ನು ಪಡೆದಿದ್ದಾರೆ. ಕೆಲ ದಿನಗಳ ಬಳಿಕ ಬಿಲಾಲ್ ರಫಿಕ್ ಪೋಷಕರು ಹಾಗೂ ಆತನ ಸಹೋದರಿ ಕರೆ ಮಾಡಿ ಮದುವೆಯಾಗಲು ಒಪ್ಪಲ್ಲ ಎಂದು ಕ್ಯಾತೆ ತೆಗೆದಿದ್ದಾರೆ. ಮದುವೆಯಾದರೆ ಜೀವಸಹಿತ ಬಿಡಲ್ಲ ಎಂದು ಬೆದರಿಕೆ ಹಾಕಿದ್ದಾರಂತೆ. ನೊಂದ ಯುವತಿ ಗೋವಿಂದಪುರ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ಸದ್ಯ ಆರೋಪಿ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ.

 

For Latest News Updates, Join Our Whatsapp Community🚩
RELATED ARTICLES

Most Popular