
ಬಾಕಿ ಶುಲ್ಕ ಪಾವತಿಗೆ ಈಗಾಗಲೇ ಸೆಪ್ಟಂಬರ್, 30 ರ ಗಡುವು ನೀಡಲಾಗಿತ್ತು. ಅದರಂತೆ ಹಲವು ಗ್ರಾಹಕರು ಬಾಕಿ ಶುಲ್ಕ ಪಾವತಿಸಿದ್ದಾರೆ. ಬಾಕಿ ಪಾವತಿಸದ ಗ್ರಾಹಕರಿಗೆ ಕೊನೆಯ 4 ದಿನಗಳ ಕಾಲಾವಕಾಶವಿದೆ.
ವಿದ್ಯುತ್ ಬಾಕಿ ಉಳಿಸಿಕೊಂಡ ಗ್ರಾಹಕರಿಗೆ ಯಾವುದೇ ಮುನ್ಸೂಚನೆ ನೀಡದೇ ಅಕ್ಟೋಬರ್, 01 ರಿಂದ ವಿದ್ಯುತ್ ಸಂಪರ್ಕ ಕಡಿತಗೊಳಿಸುವುದು ಅನಿವಾರ್ಯವಾಗಿರುತ್ತದೆ ಎಂದು ಮಡಿಕೇರಿ ವಿಭಾಗದ ಸೆಸ್ಕ್ ಕಾರ್ಯನಿರ್ವಾಹಕ ಎಂಜಿನಿಯರ್ ಅವರು ತಿಳಿಸಿದ್ದಾರೆ.

