ಗ್ರಾಹಕರೇ ಗಮನಿಸಿ: ಬ್ಯಾಂಕ್‌ ಕೆಲಸವಿದ್ರೆ ನಾಳೆಯೊಳಗೆ ಮುಗಿಸಿಕೊಳ್ಳಿ; ಗುರುವಾರದಿಂದ ಸಾಲು ಸಾಲು ರಜೆ

ಬ್ಯಾಂಕ್‌ ಗ್ರಾಹಕರಿಗೆ ಮಹತ್ವದ ಮಾಹಿತಿಯೊಂದು ಇಲ್ಲಿದೆ. ನಿಮ್ಮ ವ್ಯಾಪಾರ ವಹಿವಾಟಿಗೆ ಹಣಕಾಸಿನ ಅಗತ್ಯವಿದ್ದಲ್ಲಿ ಅಥವಾ ಬ್ಯಾಂಕ್‌ ಸಂಬಂಧಿತ ಇತರೆ ಕೆಲಸ ಕಾರ್ಯಗಳಿದ್ದಲ್ಲಿ ನಾಳೆಯೊಳಗೆ ಮುಗಿಸಿಕೊಳ್ಳಿ.

ಹೌದು, ಗುರುವಾರದಿಂದ ಸಾಲು ಸಾಲು ರಜೆ ಇದ್ದು, ಬ್ಯಾಂಕ್‌ ವ್ಯವಹಾರಗಳು ಸಾಧ್ಯವಾಗುವುದಿಲ್ಲ. ಅಕ್ಟೋಬರ್‌ 31 ರ ಗುರುವಾರ ನರಕ ಚತುರ್ದಶಿ ಪ್ರಯುಕ್ತ ರಜೆಯಿದ್ದರೆ, ನವೆಂಬರ್‌ 1 ರ ಶುಕ್ರವಾರ ಕನ್ನಡ ರಾಜ್ಯೋತ್ಸವ ಹಾಗೂ ಲಕ್ಷ್ಮೀ ಪೂಜೆ, ನವೆಂಬರ್‌ 2 ರ ಶನಿವಾರ ಬಲಿಪಾಡ್ಯಮಿ ಮರುದಿನ ಅಂದರೆ ನವೆಂಬರ್‌ 3 ಭಾನುವಾರವಾದ್ದರಿಂದ ರಜೆ ಇರುತ್ತದೆ.

ಹೀಗಾಗಿ ಅಕ್ಟೋಬರ್‌ 30 ರ ಬುಧವಾರದೊಳಗೆ ಬ್ಯಾಂಕ್‌ ಕೆಲಸ ಮುಗಿಸಿಕೊಂಡರೆ ಅನುಕೂಲ. ಇಲ್ಲದಿದ್ದರೆ ನವೆಂಬರ್‌ 4 ರ ಸೋಮವಾರದವರೆಗ ಕಾಯಬೇಕಾಗುತ್ತದೆ. ಇನ್ನುಳಿದಂತೆ ಎಟಿಎಂ ಗಳು ಎಂದಿನಂತೆ ಕಾರ್ಯ ನಿರ್ವಹಿಸಲಿದ್ದು, ಆನ್‌ ಲೈನ್‌ ಮೂಲಕವೂ ಬ್ಯಾಂಕ್‌ ವ್ಯವಹಾರ ಮಾಡಬಹುದಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read