HomeKarnatakaಗಮನಿಸಿ : ಇಂದಿನಿಂದ ಮೈಸೂರು ‘ಯುವ ದಸರಾ’ ವೀಕ್ಷಣೆಗೆ ಆನ್ ಲೈನ್ ನಲ್ಲಿ ಟಿಕೆಟ್ ಲಭ್ಯ...

ಗಮನಿಸಿ : ಇಂದಿನಿಂದ ಮೈಸೂರು ‘ಯುವ ದಸರಾ’ ವೀಕ್ಷಣೆಗೆ ಆನ್ ಲೈನ್ ನಲ್ಲಿ ಟಿಕೆಟ್ ಲಭ್ಯ , ಜಸ್ಟ್ ಹೀಗೆ ಬುಕ್ ಮಾಡಿ..!

ಮೈಸೂರು : ಈ ಬಾರಿ ಮೈಸೂರು ಹೊರವಲಯದ ಉತ್ತನಹಳ್ಳಿ ಸಮೀಪ ಆಯೋಜಿಸಿರುವ ‘ಯುವ ದಸರಾ’ ಕಾರ್ಯಕ್ರಮ ವೀಕ್ಷಣೆಗೆ ಇದೇ ಮೊದಲ ಬಾರಿಗೆ ಟಿಕೆಟ್ಗಳ ಮಾರಾಟಕ್ಕೆ ಜಿಲ್ಲಾಡಳಿತ ಕ್ರಮ ಕೈಗೊಂಡಿದೆ.

ದಸರಾವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತಿದ್ದು, ಅ.6ರಿಂದ 10ರವರೆಗೆ ನಿತ್ಯ ಸಂಜೆ 6ರಿಂದ 10ರವರೆಗೆ ಯುವ ದಸರಾ ಕಾರ್ಯಕ್ರಮ ಗಳನ್ನು ಆಯೋಜಿಸಲಾಗಿದೆ. ಅ.6ರಂದು ಚಲನಚಿತ್ರ ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್ಕುಮಾರ್ ಉದ್ಘಾಟಿಸಲಿದ್ದಾರೆ.

‘ಟಿಕೆಟ್ಗಳನ್ನು ಸೆ.27ರಿಂದ ಆನ್ಲೈನ್ನಲ್ಲಿ ದಸರಾದ ಅಧಿಕೃತ ಜಾಲತಾಣವಾದ https://www.mysoredasara.gov.in/ ಹಾಗೂ Book My Show ಮೂಲಕ ಖರೀದಿಸಬಹುದು. ವೀಕ್ಷಕರ ಗ್ಯಾಲರಿ–1 (ವೇದಿಕೆ ಸಮೀಪ) ಟಿಕೆಟ್ ಮುಖಬೆಲೆ ₹8 ಸಾವಿರ ಹಾಗೂ ವೀಕ್ಷಕರ ಗ್ಯಾಲರಿ–2ರ ಟಿಕೆಟ್ಗಳ ಮುಖಬೆಲೆ ₹5 ಸಾವಿರ ನಿಗದಿಪಡಿಸಲಾಗಿದೆ. ಒಂದು ಟಿಕೆಟ್ನಲ್ಲಿ ಒಬ್ಬರಿಗೆ ಒಂದು ಕಾರ್ಯಕ್ರಮಕ್ಕೆ ಮಾತ್ರ ಪ್ರವೇಶ (ನಿಗದಿತ ಗ್ಯಾಲರಿಯಲ್ಲಿ) ಅವಕಾಶವಿರುತ್ತದೆ’ ಎಂದು ದಸರಾ ವಿಶೇಷಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ ರೆಡ್ಡಿ ತಿಳಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular