ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರ ವತಿಯಿಂದ ಕೆ.ಎಸ್.ಡಿ.ಎಲ್. ಮತ್ತು ಕೃಷಿ ಮಾರಾಟ ಇಲಾಖೆಯ ವಿವಿಧ ಹುದ್ದೆಗಳಿಗೆ ಜನವರಿ 10 ಮತ್ತು 12ರ ಬದಲಿಗೆ ಜನವರಿ 18ರಂದು ಪರೀಕ್ಷೆ ನಡೆಸಲು ತೀರ್ಮಾನಿಸಲಾಗಿದೆ.
ಕೆಲವು ತಾಂತ್ರಿಕ ಕಾರಣಗಳಿಂದಾಗಿ ಪರೀಕ್ಷಾ ದಿನಾಂಕಗಳನ್ನು ಬದಲಾವಣೆ ಮಾಡಲಾಗಿದೆ. ಉಳಿದಂತೆ ಜನವರಿ 19ರ ವೇಳಾಪಟ್ಟಿಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಹೆಚ್ಚಿನ ವಿವರಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವೆಬ್ ಸೈಟ್ ನೋಡಲು ಕೋರಲಾಗಿದೆ.
ಪರೀಕ್ಷಾ ಕೇಂದ್ರದಲ್ಲಿ Frisking ಮತ್ತು ಮುಖಚಹರೆ ಪರಿಶೀಲಿಸಿ ಪ್ರದೇಶ ನೀಡುವುದರಿಂದ ಎರಡು ಗಂಟೆ ಮುಂಚಿತವಾಗಿ ಪರೀಕ್ಷಾ ಕೇಂದ್ರದೊಳಗೆ ಹಾಜರಿರತಕ್ಕದ್ದು.
ಋಣಾತ್ಮಕ ಮೌಲ್ಯಮಾಪನವಿದ್ದು, ಪ್ರತಿ ತಪ್ಪು ಉತ್ತರಕ್ಕೆ 1/4 ಅಂಕಗಳನ್ನು ಕಡಿತಗೊಳಿಸಲಾಗುವುದು.
ಉತ್ತರಿಸದೇ ಇರುವ ಪ್ರಶ್ನೆಗಳಿಗೆ ಐದನೇ ಆಯ್ಕೆ/ವೃತ್ತವನ್ನು ರೇಡ್ ಮಾಡಲು ಕೊನೆಯ ಬೆಲ್ ಆದ ನಂತರ ಹೆಚ್ಚುವರಿಯಾಗಿ ಐದು ನಿಮಿಷಗಳನ್ನು ನೀಡಲಾಗುವುದು. ಯಾವುದೇ ಆಯ್ಕೆಯನ್ನು /ವೃತ್ತವನ್ನು ಶೇಡ್ ಮಾಡಿಲ್ಲದಿದ್ದರೆ, ಪ್ರಶ್ನೆಗೆ 1/4 ಅಂಕಗಳನ್ನು ಕಡಿತಗೊಳಿಸಲಾಗುತ್ತದೆ.
ದೂರವಾಣಿ: 080-23 564 583
ಸಹಾಯವಾಣಿ: 080-23 460 460.
ಇ-ಮೇಲ್: [email protected]
ವೆಬ್‌ಸೈಟ್: http://kea kar nic in

