ಗಮನಿಸಿ : ನೆಹರು ಯುವಕೇಂದ್ರದಿಂದ ನೋಂದಣಿಗೆ ಆಹ್ವಾನ

ಬಳ್ಳಾರಿ : ನೆಹರು ಯುವಕೇಂದ್ರ ವತಿಯಿಂದ ಯುವಜನರ ಸಬಲೀಕರಣ, ಯುವ ಮುಂದಾಳತ್ವ, ವಿವಿಧ ಅಭಿವೃದ್ಧಿ ಯೋಜನೆಗಳು, ಯುವ ಕಾರ್ಯ ಹಾಗೂ ಕ್ರೀಡಾ ಸಚಿವಾಲಯದ ನೆಹರು ಯುವ ಕೇಂದ್ರ ಸಂಘಟನೆ ಕಾರ್ಯಕ್ರಮಗಳು, ಸಚಿವಾಲಯಗಳ/ಇಲಾಖೆಗಳ ಮಾಹಿತಿಗಳನ್ನು ಇ-ಪೊರ್ಟಲ್ ಮೂಲಕ ತಿಳಿದುಕೊಳ್ಳಲು ನನ್ನ ಭಾರತ ಪೋರ್ಟಲ್ನಲ್ಲಿ (My Bharat Portal) ಯುವ ಜನರು ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಲು ಆಹ್ವಾನಿಸಲಾಗಿದೆ.

ವಯೋಮಿತಿ 15 ರಿಂದ 29ರ ಒಳಗೆ ಇರಬೇಕು. ಎಲ್ಲಾ ಯುವಜನರಿಗೆ ಮುಕ್ತ ಅವಕಾಶ ಇರುತ್ತದೆ. ಯಾವುದೇ ಶುಲ್ಕವಿರುವುದಿಲ್ಲ.

ನೋಂದಣಿ ವಿಧಾನ: ಲಾಗಿನ್ಗಾಗಿ www.mybharat.gov.in ಗೆ ಭೇಟಿ ನೀಡಬೇಕು. ನಂತರ drop down menu ಕ್ಲಿಕ್ ಮಾಡುವುದರ ಮೂಲಕ, ನಂತರ get started ಕ್ಲಿಕ್ ಮಾಡಬೇಕು. ನಂತರ select youth ನ್ನು ಆಯ್ಕೆ ಮಾಡಿಕೊಂಡು, ನಂತರ ನೋಂದಾಯಿಸಿಕೊಳ್ಳಬೇಕು.

ನಿಮ್ಮ ಮೊಬೈಲ್ ನಂಬರನ್ನು ನಮೂದಿಸಬೇಕು. ನಂತರ ಓಟಿಪಿ ಬರುತ್ತದೆ, ನಮೂದಿಸಿದ ನಂತರ, ವಿವರಣೆಗಳನ್ನು ತುಂಬಬೇಕು. ನಂತರ ಇ-ಮೇಲ್ ಐಡಿ ನಮೂದಿಸಬೇಕು ಮತ್ತು NYKS ಆಯ್ಕೆ ಮಾಡಬೇಕು.
ಹೆಚ್ಚಿನ ಮಾಹಿತಿಗಾಗಿ ಜಿಲ್ಲಾಧಿಕಾರಿಗಳ ಕಚೇರಿ ಆವರಣದ ನೆಹರು ಯುವ ಕೇಂದ್ರದ ಜಿಲ್ಲಾ ಯುವ ಅಧಿಕಾರಿಗಳ ಕಚೇರಿ ಹಾಗೂ ಮೊ.9049487027ಗೆ ಸಂಪರ್ಕಿಸಬಹುದು ಎಂದು ನೆಹರು ಯುವ ಕೇಂದ್ರದ ಜಿಲ್ಲಾ ಯುವ ಅಧಿಕಾರಿ ಮೊಂಟು ಪತಾರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read