ಗಮನಿಸಿ : ಜ.22 ರಂದು ‘ಅಂಚೆ ಜೀವ ವಿಮೆಯ’ ಕಾರ್ಯಕರ್ತರಾಗಲು ನೇರ ಸಂದರ್ಶನ

ಭಾರತೀಯ ಅಂಚೆ ಇಲಾಖೆಯಲ್ಲಿ ಅಂಚೆ ಜೀವ ವಿಮೆಯ ನೇರ ಕಾರ್ಯಕರ್ತರಾಗಲು(ಡೈರೆಕ್ಟ್ ಏಜೆಂಟ್) ಜನವರಿ, 22 ರಂದು ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ಡೈರೆಕ್ಸ್ ಏಜೆಂಟ್ ಆಗಲು ನೇರ ಸಂದರ್ಶನ ನಡೆಯಲಿದೆ.

ವಯಸ್ಸು ಕನಿಷ್ಠ 18 ವರ್ಷ ಮತ್ತು ಗರಿಷ್ಠ ವಯೋಮಿತಿ ಇರುವುದಿಲ್ಲ. ಹತ್ತನೇ ತರಗತಿ ಮತ್ತು ಮೇಲ್ಪಟ್ಟು, ನಿರುದ್ಯೋಗಿಗಳು, ಸ್ವಯಂ ಉದ್ಯೋಗ ಅಕ್ಷರಸ್ಥ ಯುವಕರು, ಯಾವುದೇ ಜೀವ ವಿಮಾ ಸಲಹೆಗಾರರಾಗಿದ್ದವರು, ಸೈನಿಕ ಸೇವೆಯಲ್ಲಿ ಇದ್ದವರು, ಅಂಗನವಾಡಿ ಕಾರ್ಯಕರ್ತರು, ಮಹಿಳಾ ಮಂಡಳಿ ಕಾರ್ಯಕರ್ತರು, ನಿವೃತ್ತ ಶಿಕ್ಷಕರು ಅಥವಾ ಈ ಯಾವುದೇ ಷರತ್ತುಗಳನ್ನು ಪೂರೈಸುವ ಅಭ್ಯರ್ಥಿಗಳು ಅರ್ಹರಾಗಿರುತ್ತಾರೆ.

ಅರ್ಜಿ, ಹತ್ತನೇ ತರಗತಿ ಉತ್ತೀರ್ಣ ಪ್ರಮಾಣ ಪತ್ರ, ಐದು ಸಾವಿರ ರೂ.ಗಳ ಎನ್ಎಸ್ಸಿ/ಕೆವಿಪಿ(ಸಂದರ್ಶನದ ನಂತರ), ಆಧಾರ್, ವೋಟರ್ ಐಡಿ, ಯಾವುದೇ ಭಾವಚಿತ್ರವುಳ್ಳ ವಿಳಾಸ ದಾಖಲಾತಿ ಹಾಗೂ ಪಾನ್ ಕಾರ್ಡ್ ಪ್ರತಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗೆ ಕೊಡಗು ಅಂಚೆ ವಿಭಾಗೀಯ ಕಚೇರಿ, ಕೊಡಗು ಅಂಚೆ ವಿಭಾಗ, ಮಡಿಕೇರಿ-571201 ದೂ.ಸಂ.08272-295496 ನ್ನು ಸಂಪರ್ಕಿಸಬಹುದು ಎಂದು ಕೊಡಗು ಅಂಚೆ ವಿಭಾಗೀಯ ಕಚೇರಿಯ ಅಂಚೆ ಅಧೀಕ್ಷಕರು ತಿಳಿಸಿದ್ದಾರೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read